ಆಲೆಮನೆ- ಬೆಲ್ಲ ತಯಾರಿಸುವ ಸಾಂಪ್ರದಾಯಿಕ ವಿಧಾನ💛🌱

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರಾಮಣ್ಣ ಹನಮಣ್ಣನವವರು ಹಲವಾರು ವರ್ಷಗಳಿಂದ ಸಾವಯವ ಬೆಲ್ಲವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಸಾವಯವ ಪದ್ದತಿಯಲ್ಲಿ ಬೆಳೆದಿರುವ ಕಬ್ಬಿನ ತೋಟವನ್ನು ಖರೀದಿಸಿ, ಕಬ್ಬನ್ನು ಕಟಾವು ಮಾಡಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ಬೆಲ್ಲವನ್ನು ತಯಾರಿಸುತ್ತಾರೆ.

ಸಾವಯವ ಕೃಷಿಯಿಂದ 10% ಇಳುವರಿ ಹೆಚ್ಚಾಗಿದೆ

ದಾವಣಗೆರೆ ಜಿಲ್ಲೆ: ಹೊನ್ನಾಳಿ ತಾಲ್ಲೂಕು, ಹನಗವಾಡಿ ಗ್ರಾಮದ  ರೈತ – ಥಾನೇಶ್ ರಾವ್ ರವರು 3-4 ವರ್ಷಗಳಿಂದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನುಉಪಯೋಗಿಸುತ್ತಿದ್ದು, ಬಳಸಿದ ನಂತರ ಅಡಿಕೆ ಬೆಳೆಯಲ್ಲಿಉತ್ತಮ ಬೆಳವಣಿಗೆ ಮತ್ತು ಅಭಿವೃದ್ಧಿ ಪಡೆದಿದ್ದಾರೆ.

ಅಡಿಕೆ ಜೊತೆ ಮಿಶ್ರ ಬೆಳೆಯಿಂದ ನಿರಂತರ ಆದಾಯ

ಮೈಸೂರುಜಿಲ್ಲೆ: ಮೈಸೂರುಜಿಲ್ಲೆ ಕೆಆರ್ ನಗರ ತಾಲ್ಲೂಕಿನ ರೈತರಾದ  ನಟರಾಜ್ ಅವರು ಸಮಗ್ರ ಕೃಷಿ ಪದ್ಧತಿಯಲ್ಲಿ ಅಡಿಕೆ ತೋಟದಲ್ಲಿ ತೊಗರಿ, ಬಾಳೆ, ಅವರೆ, ಟೊಮೇಟೊ ಮತ್ತು ಬದನೆ  ಇತ್ಯಾದಿ ಅಂತರ ಬೆಳೆಗಳನ್ನುಬೆಳೆಯುತ್ತಿದ್ದಾರೆ.

ಹತ್ತು ವರ್ಷದಿಂದ ಸಾವಯವ ಕೃಷಿ, ಈಗ ಅಡಿಕೆ ಬೆಳೆ ಹೇಗಿದೆ ಗೊತ್ತಾ?

ತುಮಕೂರ : ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು ರೈತರಾದ ವಿಶ್ವನಾಥ್ ಅವರು 10 ವರ್ಷದಿಂದ ಸಾವಯವ ಕೃಷಿ ಪದ್ಧತಿಯಲ್ಲಿಯೇ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಕೃಷಿಯ ಜತೆಗೆ ಕುರಿ ಸಾಕಾಣಿಕೆ, ಜೇನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.

ಭತ್ತ ನಾಟಿಗೂ ಮುನ್ನ ಬೀಜೋಪಚಾರ ಮಾಡಿ.

ಮೈಸೂರು: ಮೈಸೂರು ಜಿಲ್ಲೆ, ಕೆ ಆರ್ ನಗರ ತಾಲ್ಲೂಕು ರೈತರಾದ ಮಹದೇವ ಅವರು ಭತ್ತ ಬೆಳೆಯನ್ನು ಸಾವಯವ ಕೃಷಿಯಲ್ಲಿ ಬೆಳೆಯುತ್ತಿದ್ದಾರೆ. ಭತ್ತ ಬೆಳೆ ನಿರ್ವಹಣೆ ರೈತರಿಗೆ ಒಂದು ದೊಡ್ಡ ಸವಾಲು. ಗೊಬ್ಬರದ ನಿರ್ವಹಣೆ, ನೀರಿನ ಸಮಸ್ಯೆ ಇವೆಲ್ಲವನ್ನು ನಿಭಾಯಿಸೋದು ಕಷ್ಟ ಸಾಧ್ಯವಾಗಿರುತ್ತದೆ.

ಅಡಿಕೆ ಪಟ್ಟೆ ನೋಡಿದ್ರೆ ಸಾಕು ಇಳುವರಿ ಗೊತ್ತಾಗುತ್ತೆ.

ಮೈಸೂರು: ಅಡಿಕೆ ಬೆಳೆ ಆರೋಗ್ಯವಾಗಿದೆ, ಹೆಚ್ಚಿನ ಇಳುವರಿ ಬರುತ್ತಿದೆ ಎನ್ನುವುದನ್ನು ಅಡಿಕೆಯ ಪಟ್ಟೆ ನೋಡಿ ಗುರುತಿಸಲಾಗುತ್ತದೆ. ಹಾಗೇಯೆ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ರೈತರಾದ ರಾಮಚಂದ್ರಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಲ್ಲಿಯ ಅಡಿಕೆಯ ಪಟ್ಟೆಯನ್ನು ನೋಡಿದರೆ, ಅಡಿಕೆಯ ಇಳುವರಿ ಎಷ್ಟು ಹೆಚ್ಚಾಗಿ ಬರುತ್ತದೆ ಎಂಬುದನ್ನು ಹೇಳಬಹುದು.

ನೀರಿನಿಂದ ಹಾಳಾಗಿದ್ದ ಅಡಿಕೆ ತೋಟ ಮತ್ತೆ ಚಿಗುರಿದ್ದು ವಿಸ್ಮಯ

ತುಮಕೂರು: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ರೈತರಾದ ವಿಶ್ವನಾಥ್ ಚಾರು, ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. 5 ವರ್ಷದ ಅಡಿಕೆ ತೋಟವನ್ನು ನಿರ್ವಹಣೆ ಮಾಡುತ್ತಿದ್ದು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಹಸಿರೆಲೆ ಗೊಬ್ಬರಗಳಾದ ಸೆಣಬು, ಡಯಂಚಾವನ್ನು ಬಳಸುತ್ತಿದ್ದರಿಂದ ಭೂಮಿಯ ಆರೋಗ್ಯ ಹೆಚ್ಚಾಗಿ ಬೆಳೆ ಕೂಡ ಆರೋಗ್ಯವಾಗಿ ಬೆಳೆಯುತ್ತಿದೆ.

ಸಾಯುತ್ತಿದ್ದ ಅಡಿಕೆ ಮರಗಳು ಮತ್ತೆ ಚಿಗುರಿದ್ದು ಹೇಗೆ?

ತುಮಕೂರು :  ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಸಾವಯವ ಕೃಷಿಕರಾದ ಹೇಮಂತ್ ಅವರು ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ.  ಅಡಿಕೆಯಲ್ಲಿ 10 ಕ್ವಿಂಟಾಲ್ ಒಣ ಅಡಿಕೆಯನ್ನು ಪಡೆದಿದ್ದಾರೆ. ಮೊದಲ ಬಾರಿ ಅಡಿಕೆಯಲ್ಲಿ 4 ಲಕ್ಷ ರೂ ಆದಾಯವನ್ನು ಪಡೆದಿದ್ದರು.  ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ರೈತರಾದ ಹೇಮಂತ್ ಅವರು ಬಳಸುತ್ತಿದ್ದಾರೆ. ಇದರಿಂದ ಖರ್ಚು ಕೂಡ ಕಡಿಮೆಯಾಗಿದೆ.

ಅಡಿಕೆ ಸಿಪ್ಪೆಗೆ ಜೀವ ತುಂಬಿದ ಕೃಷಿಕ

ತುಮಕೂರು : ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ರೈತರಾದ  ನಟರಾಜ್ ಅವರು  ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಸೇರಿದಂತೆ ಹಲವಾರು ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಟ್ಟಾರೆ 12 ಎಕರೆ ತೋಟವಿದ್ದು 4 ಎಕರೆಯಲ್ಲಿ ತೆಂಗು, 8 ಎಕರೆಯಲ್ಲಿ ಅಡಿಕೆ ಹಾಗೂ ಹಣ್ಣುಬೆಳೆಗಳು ಇವೆ.

ರಾಸಾಯನಿಕ ಕೃಷಿ ಕಬ್ಬು ಬೆಳೆ VS ಸಾವಯವ ಕೃಷಿ ಕಬ್ಬು ಬೆಳೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲ ತಾಲ್ಲೂಕಿನ ಕೃಷಿಕರಾದ ಪ್ರಭುಸ್ವಾಮಿ 3 ಎಕರೆಯಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದರಲ್ಲಿ ಒಂದು ಎಕರೆ ಸಾವಯವ ಕೃಷಿ, ಉಳಿದ ಎರಡು ಎಕರೆಯಲ್ಲಿ ರಾಸಾಯನಿಕ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ಕಬ್ಬು ಆರೋಗ್ಯವಾಗಿದ್ದು ಖರ್ಚು ಕಡಿಮೆಯಾಗಿದೆ. ರಾಸಾಯನಿಕ ಬೆಳೆಗಳು ಬೆಳವಣಿಗೆ ಕುಂಠಿತವಾಗಿ ಖರ್ಚು ಕೂಡ ಹೆಚ್ಚಾಗಿದೆ.

|< 1  2   3   4   5 ...>|
Home    |   About Us    |   Contact    |   
microbi.tv | Ocat Online Catalog Marketing Service in India | Powered by Ocat Digital Pvt.Ltd