Blog

ತೋಟಗಾರಿಕೆ ಬೆಳೆಯಾದ ಅಡಿಕೆ, ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಮಲೇಷ್ಯಾ ದೇಶದ ಮೂಲವಾದ ಅಡಿಕೆಗೆ ಹೆಚ್ಚಿನ ಬೇಡಿಕೆ. ಹೀಗಾಗಿ ಸಾಕಷ್ಟು ರೈತರು ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ಬಯಲು ಸೀಮೆಯಲ್ಲಿಯೂ ವ್ಯಾಪಕವಾಗಿ ಬೆಳೆಯುತ್ತಾರೆ.

 

ಅಡಿಕೆ ಬೆಳೆಯಲು ಮುಂದಾದ ಎಲ್ಲಾ ರೈತರೂ ಬೆಳೆಯಲ್ಲಿ ಭರ್ಜರಿ ಇಳುವರಿ ಏನು ಪಡೆಯುತ್ತಿಲ್ಲ. ಬರುವ ಲಾಭ ಸಾಕಷ್ಟು ರೈತರಿಗೆ ನಗಣ್ಯ ಎನ್ನಬಹುದು. ಅದಕ್ಕೆ ಕಾರಣ ರೈತರು ತಾವು ಮಾಡುತ್ತಿರುವ ಕೃಷಿ ಪದ್ಧತಿ. ಹೌದು ರೈತ ರಾಸಾಯನಿಕ ಕೃಷಿಯಲ್ಲಿ ಸಿಲುಕಿ ಮೂಟೆಮೂಟೆ ಗೊಬ್ಬರವನ್ನು ಸುರಿಯುತ್ತಿದ್ದರೂ ಸಹಿತ ಇಳುವರಿ ಮಾತ್ರ ಹೆಚ್ಚಾಗಿ ಸಿಗುತ್ತಿಲ್ಲ. ಅದರ ಬದಲಾಗಿ ಎಲೆಚುಕ್ಕೆ ರೋಗ, ಹರಳು ಉದುರುವ ಸಮಸ್ಯೆ, ಹಿಡಿಮುಂಡಿಗೆ ರೋಗ, ಹಂಡೊಡಕ ಸಮಸ್ಯೆಗಳೇ ಹೆಚ್ಚಾಗಿವೆ. ರೋಗಗಳ ನಿರ್ವಹಣೆಗೆಂದು ರಾಸಾಯನಿಕ ಸ್ಪ್ರೇಗಳನ್ನು ಬಳಸಿ ಕೃಷಿ ಭೂಮಿಯನ್ನು ಮತ್ತಷ್ಟು ಅನಾರೋಗ್ಯಕ್ಕೆ ತಳ್ಳುತ್ತಿದ್ದಾರೆ. ಆದ್ದರಿಂದ ಅಡಿಕೆ ಬೆಳೆಯಲ್ಲಿ ಲಾಭ ಪಡೆಯಬೇಕು ಎಂದವರು ಅಡಿಕೆ ತೋಟವನ್ನೇ ಉರುಳಿಸಲು ಮುಂದಾಗುತ್ತಾರೆ.

 

ಅಡಿಕೆ ಬೆಳೆ ಅಥವಾ ಬೇರೆ ಯಾವುದೇ ಬೆಳೆಯಾಗಲಿ, ಲಾಭ ಪಡೆಯಬೇಕೆಂದರೆ ಮೊದಲು ನಿಮ್ಮ ಕೃಷಿ ಭೂಮಿಯಲ್ಲಿ ಕೆಲವೊಂದಿಷ್ಟು ಪರೀಕ್ಷೆಗಳನ್ನು ನಡೆಸಿ. ನೀವು ಮಾಡಿದ ಪರೀಕ್ಷೆಗಳಿಂದ ನಿಮ್ಮ ಕೃಷಿ ಭೂಮಿ ಆರೋಗ್ಯವಾಗಿದೆಯಾ? ಅಥವಾ ಅನಾರೋಗ್ಯವಾಗಿದೆಯಾ? ಕೃಷಿ ಭೂಮಿಗೆ ಎಂತಹ ಆಹಾರ ಬೇಕು? ಇಳುವರಿ ಹೆಚ್ಚಲು ಕೃಷಿ ಭೂಮಿಗೆ ಏನು ಅವಶ್ಯಕ? ಎಂಬುದು ತಿಳಿಯುತ್ತದೆ.

 

ಮೈಕ್ರೋಬಿ ತಂಡ ಶಿವಮೊಗ್ಗ ಜಿಲ್ಲೆಯ ರಾಸಾಯನಿಕ ಅಡಿಕೆ ತೋಟಕ್ಕೆ ಭೇಟಿ ಕೊಟ್ಟು, 6 ಪರೀಕ್ಷೆಗಳನ್ನು ಮಾಡಿತು. ಇದರಿಂದ ಅಲ್ಲಿಯ ಕೃಷಿಕರಿಗೆ ತಮ್ಮ ಕೃಷಿ ಭೂಮಿಯ ಸ್ಥಿತಿಗತಿಯ ಬಗ್ಗೆ ಸ್ಪಷ್ಟ ಅರಿವು ಮೂಡಿತು.

 

https://www.youtube.com/watch?v=EmTwIVHvoIw&t=2s

 

 ವರದಿ: ವನಿತಾ ಪರಸನ್ನವರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing