ಕಬ್ಬು ಬೆಳೆಗಾರರು ಕಬ್ಬು ಕಟಾವು ಮಾಡಿದ ಮೇಲೆ ಉಳಿದ ಸೋಗು ಅಥವಾ ರವದಿ, ತ್ಯಾಜ್ಯಗಳನ್ನು ಸುಟ್ಟು ಹಾಕುತ್ತಾರೆ. ಇದು ಕೇವಲ ಕಬ್ಬಿಗಲ್ಲದೇ ಎಲ್ಲಾ ಬೆಳೆಗಳಲ್ಲೂ ಕಟಾವಿನ ನಂತರ ತ್ಯಾಜ್ಯಗಳನ್ನು ಸುಡುವುದು ಅಥವಾ ಜಮೀನಿನ ಹೊರಗೆ ಬಿಸಾಡುವುದು ಬಹುತೇಕ ರೈತರ ಹವ್ಯಾಸವಾಗಿದೆ. ಇದರಿಂದ ಗಾಳಿಯೂ ಮಲಿನವಾಗುತ್ತದೆ. ಆದರೆ ಇವುಗಳ ಉಪಯೋಗಗಳನ್ನು ತಿಳಿದರೆ ಬಹುಶಃ ಯಾವ ರೈತನೂ ತ್ಯಾಜ್ಯವನ್ನು ಸುಡುವುದಿಲ್ಲ. ಕೃಷಿಯಲ್ಲಿ ಯಾವುದೇ ತ್ಯಾಜ್ಯವಾಗಲಿ ಸರಿಯಾಗಿ ಉಪಯೋಗಿಸಿಕೊಂಡರೆ ಅನೇಕ ಲಾಭಗಳಿವೆ.
ತ್ಯಾಜ್ಯಗಳಿಂದ ಗೊಬ್ಬರ
ತ್ಯಾಜ್ಯಗಳಿಂದ ಗೊಬ್ಬರ ಕೂಡ ತಯಾರಿಸಬಹದು. ಪ್ರತ್ಯೇಕ ಗುಂಡಿ ತಯಾರಿಸಿ ಅದರಲ್ಲಿ ತ್ಯಾಜ್ಯಗಳನ್ನು ಡಾ.ಸಾಯಿಲ್ ಡಿಕಂಪೋಸರ್ ಬಳಸಿ ಕಳೆಸಬಹುದು. ಇದರಿಂದಾಗಿ ಹೊರಗಿನಿಂದ ತರುವ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು. ತ್ಯಾಜ್ಯಗಳು ಹಲವು ಪೋಷಕಾಂಶಗಳು ಮತ್ತು ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವುದರಿಂದ ಇವನ್ನು ಕಳೆಸಿ ಮಣ್ಣಿಗೆ ಕೊಡುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಿ ಬೆಳೆಗಳಿಗೆ ಲಭ್ಯವಾಗುತ್ತವೆ. ಇದರಿಂದ ಬೆಳೆಗಳ ಬೆಳವಣಿಗೆ ಮತ್ತು ಇಳುವರಿ ಹೆಚ್ಚುತ್ತದೆ. ಹೀಗೆ ತ್ಯಾಜ್ಯಗಳನ್ನು ಬಳಕೆ ಮಾಡಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಮತ್ತು ಕೃಷಿ ಖರ್ಚು ಕಡಿಮೆ ಮಾಡಬಹುದು.
ಮಲ್ಚಿಂಗ್
ತ್ಯಾಜ್ಯಗಳನ್ನು ಕಳಿಸಿ ಗೊಬ್ಬರ ಮಾಡಿ ಮಣ್ಣಿಗೆ ಕೊಡಬಹುದು ಅಥವಾ ಮಲ್ಚಿಂಗ್ ಕೂಡ ಮಾಡಬಹುದು. ಕೃಷಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಮಲ್ಚ್ ಅಥವಾ ಹೊದಿಕೆ ಮಾಡಲು ಉಪಯೋಗಿಸಬಹುದು. ಮಲ್ಚಿಂಗ್ ಮಾಡುವುದರಿಂದ ಮಣ್ಣಿನ ತೇವಾಂಶವನ್ನು ಕಾಪಾಡಬಹುದು. ಇದು ಸೂರ್ಯನ ಶಾಖ ಮಣ್ಣಿನ ಮೇಲೆ ನೇರವಾಗಿ ಬೀಳುವುದನ್ನು ತಪ್ಪಿಸುತ್ತದೆ. ಇದರಿಂದ ನೀರು ಆವಿಯಾಗದೇ ತೇವಾಂಶ ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಇದಲ್ಲದೇ ಮಣ್ಣಿನ ಸೂಕ್ಷ್ಮಜೀವಿಗಳು, ಎರೆಹುಳುಗಳು ಮತ್ತು ಇತರ ಉಪಕಾರಿ ಕೀಟಗಳಿಗೆ ನೆರಳನ್ನು ನೀಡುತ್ತದೆ. ಕಾಲಕ್ರಮೇಣ ತ್ಯಾಜ್ಯಗಳು ಕಳೆಯುವುದರಿಂದ ಮಣ್ಣನ್ನು ಫಲವತ್ತುಗೊಳಿಸುತ್ತದೆ. ಹೀಗೆ ತ್ಯಾಜ್ಯಗಳನ್ನು ಭೂಮಿಗೆ ಕೊಡುವುದರಿಂದ ಮಣ್ಣಿನ ಫಲವತ್ತತೆ ಜೊತೆ ಮಣ್ಣಿನ ಜೈವಿಕ ವೈವಿಧ್ಯತೆಯನ್ನು ಕಾಪಾಡಬಹುದು.
ರವದಿ ಪುಡಿ ಮಾಡುವ ಯಂತ್ರ
ಕಲಬುರಗಿ ಜಿಲ್ಲೆ ಅಫ್ಜಲ್ ಪುರ ತಾಲ್ಲೂಕಿನ ರೈತ ಬಿಲಾಲ್ ಸಾಬ್ ಅವರು, ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಕೊಯ್ಲು ಮಾಡಿದ ಮೇಲೆ ರವದಿಯನ್ನು ಟ್ರಾಕ್ಟರ್ ಬಳಸಿ ತುಂಡು ಮಾಡಿ ಭೂಮಿಗೆ ನೀಡಿದ್ದಾರೆ. ರವದಿಯನ್ನು ತುಂಡು ಮಾಡದೇ ಹಾಗೇ ಮಲ್ಚ್ ಮಾಡಿದರೆ ಕಳೆಯುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಯಂತ್ರದ ಸಹಾಯಕ್ಕೆ ಮೊರೆಹೋಗಿದ್ದಾರೆ. ಟ್ರಾಕ್ಟರ್ ಕಟ್ಟಿದ ಈ ಯಂತ್ರ ರವದಿಯನ್ನು ಪುಡಿ ಮಾಡಿ ಮಣ್ಣಿಗೆ ಹರಡುತ್ತದೆ. ಇದರಿಂದ ಕಳೆಯುವಿಕೆ ಪ್ರಮಾಣ ಹೆಚ್ಚಾಗಿ ಮುಂದಿನ ಬೆಳೆಗೆ ಪೋಷಕಾಂಶಗಳು ಸುಲಭವಾಗಿ ಸಿಗುವಂತಾಗುತ್ತವೆ.
https://www.youtube.com/watch?v=802ZVhKM9Ys&t=3s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#https://microbi.tv/pages/Content-cntid-104537.aspx
Blog