Blog

ರಾಜ್ಯದ ಎಷ್ಟೋ ರೈತರು ಕಬ್ಬಿನ ಮೇಲೆ ಅವಲಂಬಿತರಾಗಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಬಹಳಷ್ಟು  ರೈತರು ಕಬ್ಬನ್ನು ತಲತಲಾಂತರದಿಂದ ಬೆಳೆದುಕೊಂಡು ಬಂದಿದ್ದಾರೆ. ಹಾಗಾಗಿ ಇವರ ಆದಾಯ ಕಬ್ಬಿನ ಬೆಳೆ ಹಾಗೂ ಬೆಲೆಯ ಮೇಲೆ ನಿಂತಿದೆ. ಹೆಚ್ಚು ಟನ್ ಬೆಳೆದರೆ ಹೆಚ್ಚು ಆದಾಯ. ಕರ್ನಾಟಕದಲ್ಲಿ ಇಂದು ಟನ್ ಕಬ್ಬಿಗೆ 3000 ರೂ ಆಸುಪಾಸಿನಲ್ಲಿ ಬೆಲೆ ಇದೆ. ಆದರೆ ಕೇವಲ ಇಳುವರಿಯ ಮೇಲೆ ಬೆಲೆ ನಿಗದಿ ಮಾಡುವುದು ಎಷ್ಟು ಸರಿ? ಇದರ ಬದಲಿಗೆ ಗುಣಮಟ್ಟದ ಮೇಲೆ, ಸಕ್ಕರೆ ಪ್ರಮಾಣದ ಮೇಲೆ ಬೆಲೆ ನಿಗದಿ ಮಾಡಿದರೆ, ಉತ್ತಮ ಬೆಳೆಗೆ ಬೆಲೆ ಸಿಕ್ಕಿ ಕಡಿಮೆ ಇಳುವರಿ ಪಡೆದರೂ ಗುಣಮಟ್ಟದ ಮೇಲೆ ಉತ್ತಮ ಆದಾಯವನ್ನು ರೈತರು ಗಳಿಸಬಹುದು. ಸಕ್ಕರೆ ಅಂಶವನ್ನು ಅಳತೆ ಮಾಡಲು ಒಂದು ಸಾಧನ ಇದೆ. ಬ್ರಿಕ್ಸ್ ರಿಫ್ರಾಕ್ಟೋಮೀಟರ್(brix refractometer).

 

ಬ್ರಿಕ್ಸ್ ರಿಫ್ರಾಕ್ಟೋಮೀಟರ್(brix refractometer)

       ಇದನ್ನು ಬೆಳೆಗಳ ಸಕ್ಕರೆ ಅಂಶವನ್ನು ಅಳೆಯಲು ಬಳಸಲಾಗುತ್ತದೆ. ಉದಾಹರಣೆಗೆ ಕಬ್ಬು, ದ್ರಾಕ್ಷಿ, ಕಲ್ಲಂಗಡಿ ಇತ್ಯಾದಿ ಬೆಳೆಗಳ ಸಕ್ಕರೆ ಪ್ರಮಾಣ ಅಳೆಯಲು, ಅವುಗಳ ಗುಣಮಟ್ಟ ತಿಳಿಯಲು ಬಳಸಲಾಗುತ್ತದೆ. ಡಿಗ್ರಿ ಬ್ರಿಕ್ಸ್ (°Bx)ನಲ್ಲಿ ಸಕ್ಕರೆ ಅಂಶವನ್ನು ಅಳೆಯಲಾಗುತ್ತದೆ.

 

       ಡಿಗ್ರಿ ಬ್ರಿಕ್ಸ್ (°Bx) ಒಂದು ದ್ರವದಲ್ಲಿ ಕರಗಿದ ಘನವಸ್ತುಗಳ ಅಳತೆಯಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಜಲೀಯ ದ್ರಾವಣದಲ್ಲಿ ಕರಗಿದ ಸಕ್ಕರೆಯ ಅಂಶವನ್ನು ಅಳೆಯಲು ಬಳಸಲಾಗುತ್ತದೆ. ಒಂದು ಡಿಗ್ರಿ ಬ್ರಿಕ್ಸ್ 100 ಗ್ರಾಂ ದ್ರಾವಣದಲ್ಲಿ 1 ಗ್ರಾಂ ಸುಕ್ರೋಸ್ ಆಗಿದೆ. °Bx ಅನ್ನು ಸಾಂಪ್ರದಾಯಿಕವಾಗಿ ವೈನ್, ಸಕ್ಕರೆ, ಕಾರ್ಬೊನೇಟೆಡ್ ಪಾನೀಯ, ಹಣ್ಣಿನ ರಸ, ತಾಜಾ ಉತ್ಪನ್ನಗಳು, ಮೇಪಲ್ ಸಿರಪ್ ಮತ್ತು ಜೇನು ಉದ್ಯಮಗಳಲ್ಲಿ ಬಳಸಲಾಗುತ್ತದೆ.

 

ಸಾವಯವ ಕಬ್ಬು

 

       ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮದ ರೈತ ಬಸವರಾಜ್ ಅವರು, ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು ಮತ್ತು ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರ ಮಾರ್ಗದರ್ಶನದಂತೆ 10 ಅಡಿ ಜೋಡಿ ಸಾಲು ಪದ್ಧತಿಯಲ್ಲಿ ಕಬ್ಬು ಬೆಳೆದಿದ್ದಾರೆ. ತಮ್ಮ 1.5 ಎಕರೆಯಲ್ಲಿ ಕಬ್ಬನ್ನು ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದಾರೆ. 9 ತಿಂಗಳಿನ ಈ ಕಬ್ಬಿನಲ್ಲಿ 25 ಣಿಕೆಗಳಿವೆ. ಪ್ರಯೋಗಕ್ಕಾಗಿ ಕಟಾವು ಮಾಡಿದ ಒಂದು ಕಬ್ಬಿನ ತೂಕ 3 ಕೆ.ಜಿ ದಾಟಿದೆ.

 

10 ಅಡಿ ಜೋಡಿ ಸಾಲು ಪದ್ಧತಿಯಲ್ಲಿ ಕಬ್ಬು ಬೆಳೆಯುವುದರಿಂದ ಗಾಳಿ, ಬೆಳಕು ಮತ್ತು ಆಹಾರ ಬೆಳೆಗಳಿಗೆ ಸೂಕ್ತ ಪ್ರಮಾಣದಲ್ಲಿ ದೊರಕುತ್ತದೆ. ಇದರಿಂದ ಇಳುವರಿ ಹೆಚ್ಚುತ್ತದೆ. ಇದೇ ಕಾರಣಕ್ಕೆ ರೈತ ಬಸವರಾಜ್ ಅವರ ಜಮೀನಿನ ಕಬ್ಬಿನ ತೂಕ ಹೆಚ್ಚಾಗಿ ಬಂದಿದೆ. ಇದರ ಸಕ್ಕರೆ ಪ್ರಮಾಣವೂ ಕೂಡ ಹೆಚ್ಚಾಗಿದ್ದು brix refractometerನಲ್ಲಿ 22 °Bx ಇದೆ. ಸಾಮಾನ್ಯವಾಗಿ ರಾಸಾಯನಿಕಗಳನ್ನು ಬಳಸಿ ಬೆಳೆಯುವ ಕಬ್ಬಿನಲ್ಲಿ ಕೇವಲ 16-17°Bx ಬಂದಿದೆ. ಆದರೆ ರೈತ ಬಸವರಾಜ್ ಅವರ ಈ ಕಬ್ಬು 22 °Bx ಬಂದಿರುವುದು ಶ್ಲಾಘನೀಯ ಸಂಗತಿ.

 

       ಮುಂದಿನ ದಿನಗಳಲ್ಲಿ brix refractometer ಆಧಾರಿತ ಗುಣಮಟ್ಟದ ಆಧಾರದ ಮೇಲೆ ಬೆಲೆ ನಿಗದಿಯಾದರೆ ಇಂತಹ ಸಾವಯವ ರೈತರಿಗೆ ಬಹಳ ಅನುಕೂಲವಾಗಲಿದೆ.

 

https://www.youtube.com/watch?v=XAohJXycsHo

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de... 

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #integratedfarming  #brix  #quality  #sugarcane  



Blog




Home    |   About Us    |   Contact    |   
microbi.tv | Powered by Ocat Online Advertising Service in India