Blog

ಕೋಟಿ ವಿದ್ಯೆಗಿಂತ ನಾಟಿ ವಿದ್ಯೆ ಮೇಲು. ಗುಡ್ಡಗಾಡುಗಳಲ್ಲಿ ಸಿಗುವ ಎಲೆ, ಬೇರು, ಕಾಯಿಗಳಿಂದ ಔಷಧಿ ತಯಾರಿಸಿ ನಾನಾ ವ್ಯಾಧಿಗಳಿಗೆ ಚಿಕಿತ್ಸೆ ನೀಡುತ್ತಾರೆ ನಾಟಿ ವೈದ್ಯರು. ನಾಟಿ ವೈದ್ಯ ಪದ್ಧತಿಗೆ ಶತಶತಮಾನಗಳ ಇತಿಹಾಸವಿದ್ದು, ಭವ್ಯ ಭಾರತ ಶ್ರೇಷ್ಠ ಪರಂಪರೆಯ ಭಾಗವಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದು ಸಾವಿರಾರು ಜನರು ಈ ವೃತ್ತಿಯಲ್ಲಿದ್ದರೂ ಸಹಿತ ಎಲೆಮರೆ ಕಾಯಿಗಳಂತೆ ಕೆಲಸ ಮಾಡುತ್ತಿದ್ದಾರೆ.

 

ತಾಂತ್ರಿಕತೆ, ವೈಜ್ಞಾನಿಕತೆ ಬೆಳೆದಂತೆಲ್ಲಾ ಜನರ ನಂಬಿಕೆಗಳೂ ಕೂಡ ಬದಲಾಗುತ್ತಿವೆ. ನಾಟಿ ಔಷಧಿಯ ಮೇಲಿನ ನಂಬಿಕೆಗಿಂತ, ಕೆಮಿಕಲ್ ಮೆಡಿಸಿನ್ ಗಳ ಮೇಲೆ ನಂಬಿಕೆ ಹೆಚ್ಚಾಗಿದೆ. ಹಾಗಾಗಿ ನಾಟಿ ಔಷಧೀಯ ಪದ್ಧತಿ ಮರೆಯಾಗುತ್ತಿದೆ.

 

ನಮ್ಮ ಕಣ್ಣಮುಂದೆ ಕಾಣುವ ಎಷ್ಟೋ ಸಸ್ಯಗಳಲ್ಲಿ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿ ಇರುತ್ತದೆ. ನಮ್ಮ ಪೂರ್ವಜರ ಕಾಲದಲ್ಲಿ ತಲೆನೋವು, ಬೆನ್ನುನೋವು , ಕೈಕಾಲು ನೋವು, ಹೀಗೆ ಸಣ್ಣಪುಟ್ಟ ಖಾಯಿಲೆಗಳು ಸೇರಿದಂತೆ ಭಯಾನಕ ರೋಗಗಳು ಕೂಡ ಈ ನಾಟಿ ಔಷಧಿಗಳಿಂದಲೇ ನಿರ್ಮೂಲನೆಯಾಗುತ್ತಿದ್ದವು. ಆಗಿನ ಕಾಲದ ಆಹಾರ ಪದ್ಧತಿ, ಉಪಯೋಗಿಸುವ ವಸ್ತುಗಳು, ಎಲ್ಲವೂ ಕೂಡ ಪರಿಸರಕ್ಕೆ ಪೂರಕವಾಗಿದ್ದವು. ಆದರೆ ಆಧುನಿಕತೆ ಬೆಳೆದಂತೆ ನಮ್ಮ ಉಡುಗೆ-ತೊಡುಗೆಗಳು, ಉಪಯೋಗಿಸುವ ವಸ್ತುಗಳು, ಸೇವಿಸುವ ಆಹಾರವೂ ಸಹ ಪ್ರಕೃತಿ ತತ್ವದ ವಿರುದ್ಧವಾಗಿಬಿಟ್ಟವು. ರಾಸಾಯನಿಕಗಳ ಬಳಕೆ ಹೆಚ್ಚಾದಂತೆಲ್ಲಾ ಕಂಡು ಕೇಳರಿಯದ ರೋಗಗಳು ಇಂದು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಇದಕ್ಕೆ ಕಾರಣ ಮಾನವನ ಅತಿಯಾಸೆ, ಅಭಿವೃದ್ಧಿ ವಿಚಾರದಲ್ಲಿ ಆಗುತ್ತಿರುವ ಪರಿಸರ ಹಾನಿ, ರಾಸಾಯನಿಕ ಕೃಷಿ ಪದ್ಧತಿ, ಹೀಗೆ ಹೇಳ್ತಾ ಹೋದ್ರೆ ಪಟ್ಟಿಗಳ ಸಾಲೇ ಇದೆ.

 

ಹಾಗಾದ್ರೆ ಮನುಷ್ಯನಿಗೆ ಮಾತ್ರ ನಾಟಿ ಔಷಧಿ ಇದೆಯಾ? ಕೃಷಿಯಲ್ಲೂ ನಾಟಿ ಔಷಧಿಗೆ ಸ್ಥಾನವಿದೆಯಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ ದಾವಣಗೆರೆಯ ನಾಟಿ ವೈದ್ಯರಾದ ಎಸ್.ಡಿ.ಚಂದ್ರಪ್ಪ. ಇವರು ನಾಟಿ ವೈದ್ಯರಾಗಿ ಊರಿನ ಸಾಕಷ್ಟು ಜನರ ಆರೋಗ್ಯ ಸುಧಾರಿಸಿದ್ದಾರೆ. ಕೃಷಿಕರಾಗಿ ಅಡಿಕೆ ಬೆಳೆಯನ್ನು ಬೆಳೆಯುತ್ತಾ ಅದರ ಜತೆಗೆ ನಾಟಿ ಔಷಧಿಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಔಷಧಿಗಳನ್ನು ರಾಸಾಯನಿಕದಲ್ಲಿ ಬೆಳೆದರೆ ವಿಷವನ್ನು ಬೆಳೆದಂತೆ ಎಂದು ಭಾವಿಸಿ, ಸಾವಯವ ಕೃಷಿ ಪದ್ಧತಿಯಲ್ಲಿ ಕೃಷಿ ಭೂಮಿಗೆ ನಾಟಿ ಔಷಧಿ ಎಂಬ ಪ್ರಖ್ಯಾತಿಯೊಂದಿಗೆ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಡಾ.ಸಾಯಿಲ್ ಬಳಸಿದ ಮೇಲೆ ಅಡಿಕೆಯ ಇಳುವರಿ ಹೆಚ್ಚಾಗಿ, ಈ ಬಾರಿ 100 ಕ್ವಿಂಟಾಲ್ ಇಳುವರಿಯ ನಿರೀಕ್ಷೆಯಲ್ಲಿ ಕೃಷಿಕ ಚಂದ್ರಪ್ಪ ಅವರಿದ್ದಾರೆ. ಅಡಿಕೆ ಜತೆಗೆ ತೆಂಗು, ಶ್ರೀಗಂಧ, ರಕ್ತಚಂದನ, ಮಾವು ಬೆಳೆಗಳನ್ನು ಬೆಳೆದಿದ್ದು, ಉಪಕಸುಬಾಗಿ ಹಂದಿ ಮತ್ತು ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಹಂದಿ ಸಾಕಾಣಿಕೆಯಲ್ಲಿ ವರ್ಷಕ್ಕೆ ಎರಡು ಬಾರಿ ಲಾಭವನ್ನು ಪಡೆಯುತ್ತಾ, ಉತ್ತಮ ಆದಾಯದೊಂದಿಗೆ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

 

https://www.youtube.com/watch?v=W9Hy_YkcemQ

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ವರದಿ: ವನಿತಾ ಯ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Online Advertising Service in India