Blog

       ಕಳೆದ 1 ದಶಕದಿಂದ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು ಮತ್ತು ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರ ನೇತೃತ್ವದ ತಂಡ ರಾಜ್ಯದಾದ್ಯಂತ ಸಂಚರಿಸಿ ರೈತರ ಜಮೀನು, ತೋಟಗಳಿಗೆ ಭೇಟಿ ನೀಡಿ ಮಣ್ಣಿನ ಫಲವತ್ತತೆ, ಬೆಳೆಗಳ ಇಳುವರಿ ಹೆಚ್ಚಿಸುವ ಸಾವಯವ ಕೃಷಿಯ ಬಗ್ಗೆ ಪಾಠ ಮಾಡಿದೆ. ನಾಡಿನಾದ್ಯಂತ ಸಾವಯವ ಕೃಷಿಯ ಮಹತ್ವವನ್ನು ರೈತರಿಗೆ ತಿಳಿಸುತ್ತಾ, ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಸಾವಯವ ಕೃಷಿಗೆ ಬದಲಾಯಿಸಿದ ಮೈಕ್ರೋಬಿ ಸಂಸ್ಥೆಯ ಉತ್ಪನ್ನವಾದ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಯಶೋಗಾಥೆ ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ಪ್ರತಿಧ್ವನಿಸಿದೆ.

 

      ಬಾಂಗ್ಲಾದೇಶದ ಸರ್ಕಾರ “Food and Nutritional Security for Achieving Sustainable Development Goals (SDGs) in SAARC Countries: Revisiting Extension Approaches and Strategies” ಎಂಬ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿತ್ತು. ಈ ಸಮ್ಮೇಳನದಲ್ಲಿ ಭಾರತದ ಉತ್ಕೃಷ್ಟ ಜೈವಿಕ ಗೊಬ್ಬರಗಳನ್ನು ಉತ್ಪಾದಿಸುವ ಡಾ. ಸಾಯಿಲ್ ನ ಉತ್ಪಾದಕ ಸಂಸ್ಥೆಯಾದ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯು ವಿಶೇಷ ಪ್ರಾತಿನಿಧ್ಯ ಪಡೆದಿತ್ತು. SAARC ದಕ್ಷಿಣ ಏಷ್ಯಾದ ದೇಶಗಳ ಒಕ್ಕೂಟವಾಗಿದೆ. ಈ ಒಕ್ಕೂಟದ ದೇಶಗಳು ಸೇರಿ ಆಹಾರ ಮತ್ತು ಪೋಷಕಾಂಶ ಭದ್ರತೆ ಸಾಧಿಸಲು ಹಲವು ಕ್ರಮಗಳನ್ನು, ನೀತಿಗಳನ್ನು ತಯಾರಿಸಲು, ತಂತ್ರಜ್ಞಾನ ಮತ್ತು ಸಂಶೋಧನೆಗಳನ್ನು ವಿನಿಮಯ ಮಾಡಿಕೊಳ್ಳಲು ನಡೆದ ಈ ಸಮ್ಮೇಳನದಲ್ಲಿ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಹೀಗೆ ನಾನಾ ರೀತಿಯ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.

 

      ಡಾ.ಸಾಯಿಲ್ ಪ್ರತಿನಿಧಿಯಾಗಿ, ಮೈಕ್ರೋಬಿ ಫೌಂಡೇಶನ್ CEO  ಶ್ರೀನಿವಾಸ್ ರೈತ ಮತ್ತು ಖ್ಯಾತ ಕೃಷಿ ವಿಜ್ಞಾನಿಗಳೂ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಹಾಗೂ ಮೈಕ್ರೋಬಿ ಸಂಸ್ಥೆಯ ಮುಖ್ಯ ಸಲಹೆಗಾರರಾದ ಪ್ರೊಫೆಸರ್ ನಾರಾಯಣ ಗೌಡ ವರು ಪಾಲ್ಗೊಂಡಿದ್ದರು. ಬಾಂಗ್ಲಾದೇಶದ ಕೃಷಿ ಸಚಿವ ಡಾ. ಮುಹಮ್ಮದ್ ಅಬ್ದುರ್ ರಜಾಕ್ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿ, ಬಾಂಗ್ಲಾ ದೇಶದ ಕೃಷಿ ಕ್ಷೇತ್ರದ ಹಿಂದಿನ ಚಿತ್ರಣ, ಇಂದಿನ ಪರಿಸ್ಥಿತಿ ಗಳ ಬಗ್ಗೆ ವಿವರವಾಗಿ ಬಣ್ಣಿಸಿದರು. ಬಾಂಗ್ಲಾದೇಶ ಇವತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಹಲವಾರು ತಂತ್ರಜ್ಞಾನಗಳು ಆವಿಷ್ಕಾರಗಳಾಗುತ್ತಿರುವುದು ಸಂತೋಷದ ವಿಷಯವೆಂದು ವಿವರಿಸಿದರು.

 

       ಜಾಗತಿಕ ವೇದಿಕೆಯನ್ನು ಸದ್ವಿನಿಯೋಗ ಮಾಡಿಕೊಂಡ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯು ಹಸಿರು ಕ್ರಾಂತಿಯಿಂದ ಮೊದಲ್ಗೊಂಡು ನಂತರದ ಬೆಳವಣಿಗೆಗಳು, ಮಣ್ಣಿನ ಆರೋಗ್ಯ ಹಾಳಾಗಿರುವುದರಿಂದ ಪರಿಸರ, ಜೀವಿಗಳು ಮತ್ತು ಮನುಷ್ಯರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು, ಕಳೆದ 10 ವರ್ಷಗಳಿಂದ ಮಣ್ಣಿನ ಫಲವತ್ತತೆ, ರೈತರ ಆದಾಯ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿರುವ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಅವಿರತ ಕಾರ್ಯಚಟುವಟಿಕೆಗಳನ್ನೊಳಗೊಂಡ ಕಿರುಚಿತ್ರವನ್ನು ಪ್ರದರ್ಶಿಸಿ, ಎಲ್ಲರ ಗಮನ ಸೆಳೆಯುವಲ್ಲಿ ಸಫಲವಾಯಿತು.

 

ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಮೈಕ್ರೋಬಿ ಫೌಂಡೇಷನ್ ಸಿಇಒ ಶ್ರೀನಿವಾಸ್ ರೈತ ಅವರು ಡಾ. ಸಾಯಿಲ್ ಜೈವಿಕ ಗೊಬ್ಬರದ ವಿಶೇಷತೆ, ರೈತರ ಜೀವನ ಮಟ್ಟ ಸುಧಾರಣೆ, ಮಣ್ಣಿನ ಆರೋಗ್ಯದ ಸುಧಾರಣೆಯಿಂದ ಆಗುತ್ತಿರುವ ಉತ್ತಮ ಫಲಿತಾಂಶಗಳ ಬಗ್ಗೆ ವಿಷಯ ಮಂಡಿಸಿದರು.

 

      ಸಮ್ಮೇಳನದಲ್ಲಿ ಹಲವು ರಾಷ್ಟ್ರಗಳಿಂದ ಹೆಸರಾಂತ ಕೃಷಿ ವಿಜ್ಞಾನಿಗಳು, ಉನ್ನತ ಮಟ್ಟದ ಅಧಿಕಾರಿಗಳು, 12 ದೇಶಗಳಿಂದ ಬಂದಿದ್ದ ಪ್ರತಿನಿಧಿಗಳು ಮತ್ತು ಕೃಷಿ ಉದ್ಯಮಿಗಳು ಭಾಗಿಯಾಗಿದ್ದರು. ಅವರೆಲ್ಲರೂ ಕೂಡ ಡಾ. ಸಾಯಿಲ್ ಜೈವಿಕ ಗೊಬ್ಬರಗಳ ಅಗಾಧ ಪರಿಣಾಮಗಳ ಬಗ್ಗೆ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ನಾರಾಯಣಗೌಡ ವರು ಸಮ್ಮೇಳನದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಫ್ರಾನ್ಸ್, ಪೋಲೆಂಡ್, ಥೈಲ್ಯಾಂಡ್, ಬರ್ಮಾ, ಅಮೆರಿಕ ಮುಂತಾದ ದೇಶಗಳಿಂದ ಉನ್ನತ ವಿಜ್ಞಾನಿಗಳು ಮತ್ತು ಕೃಷಿ ಉದ್ಯಮಿಗಳು ಭಾಗವಹಿದ್ದರು.

 

       ಸಮ್ಮೇಳದ ಕೊನೆಯಲ್ಲಿ "ಆಹಾರ ಮತ್ತು ಪೋಷಕಾಂಶಗಳ ರಕ್ಷಣೆ - ನಮ್ಮೆಲ್ಲರ ಹೊಣೆ" ಎಂಬ "ಢಾಕಾ ಡಿಕ್ಲರೇಷನ್" ಗೆ ಮುಖ್ಯ ಅತಿಥಿಗಳು ಸಹಿ ಹಾಕಿದರು. ನಂತರ ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಹಲವು ವಾಣಿಜ್ಯ ಬೆಳೆಗಳ ಕ್ಷೇತ್ರ ಭೇಟಿಯನ್ನು ವ್ಯವಸ್ಥೆಮಾಡಲಾಗಿತ್ತು.

https://www.youtube.com/watch?v=c6501XrTK2U

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #bangladesh  #dhaka  #saarcnations  #foodsecurity  #internationalconference  



Blog




Home    |   About Us    |   Contact    |   
microbi.tv | Powered by Ocat Online Advertising Service in India