Blog

ಅರಿಶಿನವಿಲ್ಲದೆ ಅಡುಗೆಯೂ ಇಲ್ಲ, ಧಾರ್ಮಿಕ ಆಚರಣೆಯೂ ಇಲ್ಲ. ಅಷ್ಟೇ ಅಲ್ಲ ಆಯುರ್ವೇದದಲ್ಲೂ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೀಗಾಗಿ ಅರಿಶಿನಕ್ಕೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಿರುವುದರಿಂದ ರೈತರು ಅರಿಶಿನ ಬೆಳೆಯೋಕೆ ಉತ್ಸುಕರಾಗಿರುತ್ತಾರೆ.

 

7-8 ತಿಂಗಳ ಬೆಳೆಯಾಗಿರುವ ಅರಿಶಿನವನ್ನು ಮೇ ತಿಂಗಳಿಂದ ಜುಲೈ ಮೊದಲ ವಾರದವರೆಗೆ ಬಿತ್ತನೆ ಮಾಡಬಹುದು. ನೀರಾವರಿ ವ್ಯವಸ್ಥೆಯಿಲ್ಲದಿದ್ದರೆ ಮಳೆಗಾಲದಲ್ಲಿ ಬಿತ್ತುವುದು ಉತ್ತಮ. ಸರಿಯಾದ ನೀರಾವರಿ ವ್ಯವಸ್ಥೆಯಿದ್ದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅರಿಶಿನ ಬಿತ್ತನೆ ಪ್ರಯೋಜನಕಾರಿ. ಪ್ರತಿ ಹೆಕ್ಟೇರ್ ಗೆ ಬಿತ್ತನೆ ಮಾಡಲು ಕನಿಷ್ಠ 2,500 ಕೆ.ಜಿ ರೈಜೋಮ್ ಗಳು ಬೇಕಾಗುತ್ತವೆ. ಬಿತ್ತನೆ ಮಾಡುವ ಮೊದಲು ಗೆಡ್ಡೆಗಳನ್ನು ಬೀಜೋಪಚಾರ ಮಾಡಿ ಚೀಲದಲ್ಲಿ ಸುತ್ತಿ ಇಡಬೇಕು. ಅದು ಚೆನ್ನಾಗಿ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ. ನಿಮ್ಮ ಪ್ರದೇಶಕ್ಕೆ ಅನುಗುಣವಾಗಿ ಉತ್ತಮ ತಳಿಯ ಆಯ್ಕೆ ಮಾಡಿಕೊಂಡು ಬೀಜೋಪಚಾರ ಮಾಡಿದರೆ ಉತ್ತಮ ಇಳುವರಿಗೆ ಸಹಾಯಕವಾಗುತ್ತೆ. ಇನ್ನು ಗೊಬ್ಬರದ ನಿರ್ವಹಣೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಕೃಷಿಯಲ್ಲಿಯೇ ನಿರ್ವಹಣೆ ಮಾಡಬೇಕು. ಜೈವಿಕ ಗೊಬ್ಬರಗಳನ್ನು ಬಳಸುವುದರಿಂದ ನಿಮ್ಮ ಬೆಳೆಯನ್ನು ಗುಣಮಟ್ಟವಾಗಿ ಬೆಳೆಸಿ ಮಾರುಕಟ್ಟೆಯಲ್ಲಿ ಲಾಭ ಪಡೆಯಬಹುದು.

ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಕೃಷಿಕರಾದ ಸುರೇಶ್ ಅವರು, ಸಾವಯವ ಕೃಷಿಯಲ್ಲಿ ಮೊದಲ ಬಾರಿ ಅರಿಶಿನ ಬೆಳೆಯನ್ನು ಬೆಳೆದಿದ್ದು, ಎಕರೆಗೆ 40 ಕ್ವಿಂಟಾಲ್ ಇಳುವರಿಯನ್ನು ಪಡೆದಿದ್ದಾರೆ. ಅರಿಶಿನ ಬೆಳೆ ದಪ್ಪವಾಗಿ ಗುಣಮಟ್ಟದಿಂದ ಬೆಳೆದು, ಸಾವಯವ ಕೃಷಿಯ ಮಹತ್ವವನ್ನು ತೋರಿಸಿದೆ. 40 ವರ್ಷದಿಂದ ಅರಿಶಿನ ಬೆಳೆಯುತ್ತಿದ್ದ ಈ ಕೃಷಿಕರು ರಾಸಾಯನಿಕ ಬಳಸುವಾಗ ಇಂತಹ ಬೆಳೆ ಕಂಡಿರಲೇ ಇಲ್ಲ. ಈಗ ಕೇವಲ 9000 ರೂ. ಖರ್ಚಿನಲ್ಲಿ ಈ ರೀತಿಯ ಬೆಳೆ ಪಡೆದಿದ್ದು, ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

 

https://www.youtube.com/watch?v=2Xrf5YlNgss&t=902s

 

ವರದಿ: ವನಿತಾ ಯ ಪರಸನ್ನವರ್

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India