Blog

       ಮಣ್ಣು ಇಲ್ಲದೇ ಜೀವಿಗಳು ಇಲ್ಲ. ಹಾಗಾಗಿಯೇ ಮಣ್ಣು ಸಕಲ ಸಂಪತ್ತಿನ ಆಗರ ಎನ್ನುವುದು. ಮಣ್ಣು ಫಲವತ್ತಾಗಿರದಿದ್ದರೆ ಯಾವುದೇ ಬೆಳೆಯಾಗಲಿ, ಯಾವುದೇ ಆಹಾರವಾಗಲಿ ಪೌಷ್ಠಿಕವಾಗಿರುವುದಿಲ್ಲ. ಮಣ್ಣಿನ ಫಲವತ್ತತೆ ಹಾಳಾಗಿದ್ದರ ಫಲವಾಗಿಯೇ ಇಂದು ಹಲವು ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದ ಮಣ್ಣು ಮತ್ತು ಆಹಾರ ಸತ್ವ ಕಳೆದುಕೊಂಡಿದೆ.

 

ಹೊಟ್ಟೆ ತುಂಬಾ ಆಹಾರ ಇದ್ದರೂ, ಪೌಷ್ಠಿಕತೆಯ ಕೊರತೆಯಿಂದಾಗಿ ಹಲವು ಸಮಸ್ಯೆಗಳು ಇಂದು ಯುವಜನತೆಯನ್ನು ಕಾಡುತ್ತಿದೆ. ಇದನ್ನು ತಡೆಯಲು ಇರುವ ಮಾರ್ಗ ರಾಸಾಯನಿಕ ರಹಿತ ಕೃಷಿ ಪದ್ಧತಿ. ರಾಸಾಯನಿಕಗಳನ್ನು ಬಿಟ್ಟು ಸಾವಯವ ಕೃಷಿ ಅಳವಡಿಸಿಕೊಂಡರೆ ಮಣ್ಣು ಮತ್ತು ಮನುಷ್ಯನ ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳಬಹುದು. ಇದನ್ನೇ ಮೈಕ್ರೋಬಿ ಸಂಸ್ಥೆ ದಶಕದಿಂದ ಮಾಡುತ್ತಿದೆ. ಲಕ್ಷಾಂತರ ರೈತರನ್ನು ಸಾವಯವ ಕೃಷಿಯ ಕಡೆ ಬರುವಂತೆ ಪ್ರೇರೇಪಿಸಿದೆ. ನಿಟ್ಟಿನಲ್ಲಿ ಕೊಪ್ಪಳದಲ್ಲಿ ನಡೆದ ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ರೈತರಿಗೆ ಸಾವಯವ ಕೃಷಿಯ ಮಹತ್ವ ತಿಳಿಸಲಾಯಿತು.

       ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು, ಕೃಷಿ ವಿಜ್ಞಾನಿ ಡಾ.ನಾಗೇಶ್ ಮತ್ತು ತೋಟಗಾರಿಕೆ ಇಲಾಖೆಯ ವಿಜ್ಞಾನಿ ಡಾ.ವಾಮನಮೂರ್ತಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ವಿಷಯಗಳನ್ನು ಮಂಡಿಸಿದರು. ಕೃಷಿ ವಿಜ್ಞಾನಿ ಡಾ. ನಾಗೇಶ್ ಮಣ್ಣಿನ ಕಣ್ಣು ಮುಚ್ಚಿದರೆ ಸಕಲ ಜೀವಿಗಳ ಕಣ್ಣು ಮುಚ್ಚಿ ಹೋಗುತ್ತದೆ ಎಂದು ತಿಳಿಸಿದರು. ಸಾವಯವ ಕೃಷಿ ಸಾವಿಲ್ಲದ ಕೃಷಿ ಎಂಬ ಘೋಷವಾಕ್ಯವನ್ನು ಹೇಳಿ, ಸಾವಯವ ಕೃಷಿಯ ಮಹತ್ವ ಸಾರಿದರು. ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಮಣ್ಣಿನ ಮಹತ್ವವನ್ನು ತಿಳಿಸಿ, ಎಲ್ಲಾರು ಮಣ್ಣನ್ನು ಸಂರಕ್ಷಿಸಬೇಕು, ಮಣ್ಣಿದ್ದರೆ ನಾವು ಎಂದು ತಿಳಿ ಹೇಳಿದರು.

 

       ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು ಮಾತನಾಡಿ, ಮಣ್ಣಿನ ಮಹತ್ವ ತಿಳಿಸಿ, ಮನುಷ್ಯರು ಬದುಕಿರುವ ತನಕ ಸಂತೋಷದಿಂದ ಬದುಕಬೇಕು. ಆರೋಗ್ಯಕರವಾಗಿ ರೋಗಮುಕ್ತವಾಗಿ ಬದುಕಬೇಕು. ಇದು ಮಣ್ಣನ್ನು ಕಾಪಾಡಿದರೆ ಮಾತ್ರ ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ 30 ಎಕರೆಯಲ್ಲಿ ಸಾಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಅರಣ್ಯ ಕೃಷಿ ಬೆಳೆಗಳಾದ ಶ್ರೀಗಂಧ, ರಕ್ತಚಂದನ ಮತ್ತಿತರ ಬೆಳೆಗಳನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿರುವ ರೈತ ಮಂಜುನಾಥ್ ಅವರಿಗೆ ಸನ್ಮಾನ ಮಾಡಲಾಯಿತು.

 

       ನಂತರ ಮೆಣಸಿನಕಾಯಿ ತೋಟಕ್ಕೆ ಭೇಡಿ ನೀಡಿದ ಮೈಕ್ರೋಬಿ ತಂಡ, ಬೆಳೆಯ ಪರಿಶೀಲನೆ ಮಾಡಿತು. ಡಾ.ಕೆ.ಆರ್.ಹುಲ್ಲುನಾಚೆಗೌಡರು ನೆರೆದಿದ್ದ ರೈತರಿಗೆ ಸಾವಯವ ಕೃಷಿಯ ಮಹತ್ವ ತಿಳಿಸಿ, ರಾಸಾಯನಿಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಸಂಪೂರ್ಣವಾಗಿ ಸಾವಯವದಲ್ಲೇ ಬೆಳೆ ಬೆಳೆಯಬಹುದು ಎಂಬುದನ್ನು ಈ ಬೆಳೆ ತೋರಿಸಿದೆ ಎಂದು ಚೆನ್ನಾಗಿ ಬೆಳೆದಿರುವ ಮೆಣಸಿನಕಾಯಿ ಬೆಳೆ ತೋರಿಸಿ ಅರ್ಥೈಸಿದರು. ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಾದ ನೀರಾವರಿ ಕ್ರಮಗಳನ್ನು ತಿಳಿಸಿದರು. ಬೆಳೆಗಳಿಗೆ ಧನಾತ್ಮಕ ಒತ್ತಡ ಉಂಟಾದಾಗ ಉತ್ತಮ ಬೆಳವಣಿಗೆ ಮತ್ತು ಇಳುವರಿ ಬರುತ್ತದೆ. ಋಣಾತ್ಮಕ ಒತ್ತಡ ಉಂಟಾದಾಗ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ರೈತರಿಗೆ ತಿಳಿಸಿದರು.

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವೀಡಿಯೋ ನೋಡಿ.

https://www.youtube.com/watch?v=0m14novqwk4

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #integratedfarming  #chilli  #organicchilli  #irrigation  #agroforestry  



Blog




Home    |   About Us    |   Contact    |   
microbi.tv | Powered by Ocat Online Advertising Service in India