ನೀರು ಸಕಲ ಜೀವರಾಶಿಗಳಿಗೆ ಅತ್ಯಗತ್ಯ. ಜತೆಗೆ ಕೃಷಿಯಲ್ಲಿಯೂ ಕೂಡ ನೀರಿನ ಪಾತ್ರ ಅತಿ ಮುಖ್ಯ. ನೀರು ಇಲ್ಲವೆಂದ್ರೆ ಬೆಳೆಯೇ ಇಲ್ಲ, ಹಾಗಂತ ನೀರನ್ನು ಹೆಚ್ಚಾಗಿ ಬಳಕೆ ಮಾಡುವಂತಿಲ್ಲ. ಅತಿಯಾದರೂ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಹಾಗಾಗಿ ಕೃಷಿ ಭೂಮಿಗೆ ನೀರನ್ನು ಹೇಗೆ ಬಳಸಬೇಕೆಂಬುದನ್ನು ರೈತರು ತಿಳಿಯಬೇಕು.
ಬೆಳೆಗೆ ನೀರು ಅತಿಯಾದ್ರೆ ಬೆಳೆಗಳ ನಾಶ ಖಂಡಿತ. ನೀರನ್ನು ಎಂದಿಗೂ ವ್ಯರ್ಥ ಮಾಡಬಾರದು. ಕೃಷಿ ಭೂಮಿಗೆ ನೀವು ಬಳಸುವ ಗೊಬ್ಬರದ ಮೇಲೆ ನೀರಿನ ನಿರ್ವಹಣೆ ಅವಲಂಬಿತವಾಗಿರುತ್ತೆ. ನೀವೇನಾದರು ರಾಸಾಯನಿಕ ಗೊಬ್ಬರ ಬಳಸುತ್ತಿದ್ದರೆ ಕೃಷಿ ಭೂಮಿ ಗಟ್ಟಿಯಾಗುವುದು ಖಂಡಿತ. ಆಗ ನೀರು ಎಷ್ಟೇ ಹಾಯಿಸಿದರೂ ಭೂಮಿಯಲ್ಲಿ ಇಂಗುವ ಬದಲು ಹರಿದು ಹೋಗುವುದು ಅಥವಾ ಭೂಮಿಯ ಮೇಲೆ ನಿಲ್ಲುತ್ತದೆ. ಆಗ ನಿಮ್ಮ ಭೂಮಿ ಫಲವತ್ತತೆ ಕಳೆದುಕೊಂಡಿದೆ ಎಂದರ್ಥ. ಆದ್ದರಿಂದ ಮೊದಲು ಕೃಷಿಭೂಮಿಗೆ ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳನ್ನು ಸುರಿಯುವುದನ್ನು ನಿಲ್ಲಿಸಬೇಕು.
ಇನ್ನು ನೀರು ಕಡಿಮೆಯಾದ್ರೂನೂ ಬೆಳೆಗಳು ಕುಗ್ಗುವುದು ನಿಶ್ಚಿತ. ನಿರೀಕ್ಷಿಸಿದ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಕೃಷಿ ಭೂಮಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಎಂದು ತಿಳಿದು ನೀರು ನೀಡಬೇಕು. ಈಗ ಒಣ ಬೇಸಾಯಗಾರರಿಗೆ ನೀರಿನ ತೊಂದರೆ ಇರುತ್ತದೆ. ಮಳೆ ಮೇಲೆ ಅವಲಂಬಿತವಾಗಿರುತ್ತಾರೆ. ಆಗ ಒಂದೊಂದು ಬಾರಿ ಮಳೆ ಕೈಕೊಟ್ಟಾಗ ನೀರು ಇಲ್ಲದೆ ಬೆಳೆ ಒಣಗುವುದು. ಹಾಗಾಗಿ ಇಂತಹ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಉತ್ತಮ. ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಬೆಳೆದು ಮಲ್ಚಿಂಗ್ ಮಾಡಿದರೆ ಭೂಮಿ ಹೆಚ್ಚು ತೇವಾಂಶ ಭರಿತವಾಗಿ ಇರುತ್ತದೆ.
ಇನ್ನು ನೀರನ್ನು ಯಾವ ಯಾವ ಸಮಯದಲ್ಲಿ ಹೇಗೆಲ್ಲಾ ಬೆಳೆಗೆ ನೀಡಬೇಕೆಂಬುದರ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=9epoFrU7NNs&t=765s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Blog