Blog

ಸಾವಯವ ಕೃಷಿ ಮತ್ತು ವೈಜ್ಞಾನಿಕ ಕೃಷಿಯತ್ತ ರೈತರು ಚಿತ್ತ ಹರಿಸಿದರೆ ತಮ್ಮ ಭೂಮಿಯ ಆಯಸ್ಸನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ತಮ್ಮ ಕೃಷಿ ಭೂಮಿ ಮುಂದಿನ ಪೀಳಿಗೆಗೂ ಉಳಿಯಬೇಕೆಂದರೆ ರಾಸಾಯನಿಕಕ್ಕೆ ಮುಕ್ತಾಯ ಹೇಳುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲ ಮನುಷ್ಯನ ಆಯಸ್ಸು ಸಹಿತ ಕೃಷಿ ಪದ್ಧತಿಯ ಮೇಲೆಯೇ ಅವಲಂಬಿತವಾಗಿದೆ ಎಂದರೆ ತಪ್ಪಾಗದು. ಕಾರಣ ಮನುಷ್ಯ ಸೇವಿಸುವ ಆಹಾರ ಕೂಡ ವಿಷಯುಕ್ತವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತಿಲ್ಲ. ಹೀಗಾಗಿ ಮನುಷ್ಯನ ಆರೋಗ್ಯ ಕೂಡ ದಿನೇ ದಿನೇ ಕ್ಷೀಣಿಸುತ್ತಿರುವುದು ವಿಪರ್ಯಾಸವೇ ಸರಿ.

 

ಹಿಂದೆ ನೈಸರ್ಗಿಕ ಕೃಷಿ, ನಿಸರ್ಗಕ್ಕೆ ಪೂರಕವಾದ ಭೂಮಿ ತಾಯಿಗೆ ಒಳಿತಾದ ಕೃಷಿ ಆಗಿತ್ತು. ಆದರೆ ಅನಿವಾರ್ಯತೆಯಿಂದ ಹುಟ್ಟಿಕೊಂಡ ರಾಸಾಯನಿಕ ಕೃಷಿ ಭೂಮಿತಾಯಿಯನ್ನು ರೋಗಗಳ ಆಗರದಲ್ಲಿ ಸಿಲುಕಿಸಿ ಹಿಂಡಿ ಹಿಪ್ಪೆ ಮಾಡುತ್ತಿದೆ. ಹಾಗಾಗಿ ಇದನ್ನು ಅರಿತಿರುವ ಕೆಲ ಕೃಷಿಕರು ಭೂಮಿತಾಯಿಗೆ ಪೂರಕವಾದ ಮತ್ತೊಂದು ಕೃಷಿ ಸಾವಯವ ಕೃಷಿ ಪದ್ಧತಿಯತ್ತ ಮುಖ ಮಾಡುತ್ತಿದ್ದಾರೆ.

 

ಅದರಂತೆ ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲೂಕಿನ ಕೃಷಿಕ ದುಂಡಪ್ಪ ಅವರು ಸತತವಾಗಿ ರಾಸಾಯನಿಕ ಕೃಷಿಯನ್ನೇ ಮಾಡುತ್ತಾ ಬಂದವರು, ಈಗ 2 ವರ್ಷದಿಂದ ರಾಸಾಯನಿಕ ಕೃಷಿ ನಿಲ್ಲಿಸಿ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಮೊದಲ ಕಬ್ಬು ಈಗಾಗಲೇ ಕಟಾವು ಆಗಿದ್ದು, ಅದರಲ್ಲಿ ಎಕರೆಗೆ 100 ಟನ್ ಇಳುವರಿ ಪಡೆದಿದ್ದಾರೆ. ಈಗ ಕೂಳೆ ಕಬ್ಬಿನಲ್ಲಿಯೂ 100 ಟನ್ ಇಳುವರಿ ಪಡೆಯಬೇಕೆಂಬ ಛಲದಿಂದ ಕೃಷಿ ಮಾಡುತ್ತಿದ್ದು, ಪಡೆಯುತ್ತೇನೆ ಎಂಬ ಭರವಸೆಯಲ್ಲಿದ್ದಾರೆ. ಡಾ.ಸಾಯಿಲ್ ದ್ರವರೂಪದ ಜೈವಿಕ ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಇಷ್ಟೆಲ್ಲಾ ಲಾಭವನ್ನು ಕಂಡಿರುವ ಕೃಷಿಕ, ಮೈಕ್ರೋಬಿ ಟಿವಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

 

https://www.youtube.com/watch?v=Y7qCfjDbXr0&t=287s

 

ವರದಿ: ವನಿತಾ ಪರಸನ್ನವರ್


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 




Blog




Home    |   About Us    |   Contact    |   
microbi.tv | Powered by Ocat Business Promotion Service in India