ಕಬ್ಬು ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕರ್ನಾಟಕದ ಹಲವು ಭಾಗಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಎಷ್ಟೋ ರೈತರಿಗೆ ಕಬ್ಬು ಬೆಳೆಗೆ ನೀರು ನಿರ್ವಹಣೆ ಮಾಡುವುದೆ ದೊಡ್ಡ ತಲೆನೋವು. ಅದರ ಜತೆಗೆ ಗೊಣ್ಣೆ ಹುಳುವಿನ ತೊಂದರೆ, ಇನ್ನು ಹಲವಾರು ಸಮಸ್ಯೆಗಳನ್ನು ಅನುಭವಿಸಿ ಇಳುವರಿಯಲ್ಲಿ ಎಕರೆಗೆ ಕೇವಲ 30 ರಿಂದ 40 ಟನ್ ಪಡೆಯೋದು ಕಷ್ಟವಾಗಿರುತ್ತೆ. ಹೀಗಾಗಿ ನಿರೀಕ್ಷಿತ ಲಾಭ ಗಗನ ಕುಸುಮವಾಗಿದೆ.
ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳ ಬಳಕೆ, ವೈಜ್ಞಾನಿಕ ಪದ್ಧತಿಯಿಲ್ಲದೆ ಅತಿಯಾದ ನೀರಿನ ಬಳಕೆ, ಅತಿಯಾದ ರಾಸಾಯನಿಕ ಸ್ಪ್ರೇಗಳ ಬಳಕೆ, ಇವೆಲ್ಲ ಸೇರಿ ಕೊನೆಯದಾಗಿ ಇಳುವರಿಯಲ್ಲಿ ರೈತನಿಗೆ ತುಂಬಲಾರದ ಹಾನಿಯನ್ನು ತಂದೊಡ್ಡುತ್ತವೆ. ಹಾಗಾಗಿ ರೈತ ಜಾಣನಾಗಿ ರಾಸಾಯನಿಕದ ತಪ್ಪು ಕೃಷಿ ಪದ್ಧತಿಯಿಂದ ಹೊರಬಂದು ಸಾವಯವ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಯಿಂದ ಕೃಷಿ ಮಾಡಿದರೆ ಎಕರೆಗೆ 100 ಟನ್ ಕಬ್ಬು ಇಳುವರಿ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾವಯವ ಜೈವಿಕ ಗೊಬ್ಬರಗಳನ್ನು ಬಳಸಿ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಬೀಜೋಪಚಾರ, ಸರಿಯಾದ ನೀರಿನ ನಿರ್ವಹಣೆ, ಬೆಳೆಯಲ್ಲಿ ಸರಿಯಾದ ಅಂತರ ಹೀಗೆ ಸೂಕ್ತ ಮಾಹಿತಿಯೊಂದಿಗೆ ಕಬ್ಬು ಬೆಳೆದರೆ, ರೈತನಿಗೆ ದೊರೆಯುವ ಲಾಭ ಹೆಚ್ಚು.
ಸಾವಯವ ಕೃಷಿಯ ಮಾಹಿತಿಯನ್ನು ಪಡೆದು ಕಬ್ಬು ಬೆಳೆ ಬೆಳೆದಿರುವ ರಬಕವಿಬನಹಟ್ಟಿ ತಾಲೂಕಿನ ಕೃಷಿಕ ಸಿದ್ಧಪ್ಪ ಕೂಳೆ ಕಬ್ಬಿನಲ್ಲಿ 3 ಎಕರೆಗೆ 160 ಟನ್ ಇಳುವರಿಯನ್ನು ಪಡೆದುಕೊಂಡಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿರುವ ಕೃಷಿಕ ಸಿದ್ಧಪ್ಪ 6 ಕ್ಯಾನ್ ಗೊಬ್ಬರಗಳನ್ನು ಬಳಕೆ ಮಾಡಿ 20 ಸಾವಿರ ಖರ್ಚಿನಲ್ಲಿ 160 ಟನ್ ಕಬ್ಬು ಇಳುವರಿ ಪಡೆದಿದ್ದಾರೆ. ಯಾವುದೇ ಕೆಮಿಕಲ್ ಗೊಬ್ಬರ ಬಳಸದೆ ಸಾವಯವದಲ್ಲಿ ಬೆಳೆದ ಕಬ್ಬು ಗುಣಮಟ್ಟವಾಗಿ ಬೆಳೆದಿದ್ದು, ರೈತ ಸಿದ್ಧಪ್ಪ ಅವರಿಗೆ ಎಲ್ಲಿಲ್ಲದ ಖುಷಿ ತಂದಿದೆ. ಈ ಬಗ್ಗೆ ಸಾವಯವ ಕೃಷಿಕ ಸಿದ್ಧಪ್ಪ ಅವರು ತಮ್ಮ ಯಶಸ್ಸಿನ ಅನುಭವ ಹಂಚಿಕೊಂಡಿದ್ದಾರೆ.
https://www.youtube.com/watch?v=8K4uCO84r9A&t=272s
ವರದಿ: ವನಿತಾ ಪರಸನ್ನವರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/