Blog

       ಮೈಸೂರು ಜಿಲ್ಲೆ HD ಕೋಟೆ ತಾಲ್ಲೂಕಿನ ಕಂಚಮಳ್ಳಿ ಗ್ರಾಮದ ರೈತ ಮಧು 5 ಎಕರೆ ಜಮೀನಿನ ಮಾಲೀಕರು. 1 ಎಕರೆಯಲ್ಲಿ ಬದನೆಕಾಯಿ ಬೆಳೆದಿದ್ದಾರೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಬದನೆ ಬೆಳೆದಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಬಳಸದೇ ನಾಟಿ ಹಸುವಿನ ಗಂಜಲ ಮತ್ತು ಬೇವಿನೆಣ್ಣೆ ಬಳಸಿ ಕೀಟಗಳ ನಿರ್ವಹಣೆ ಮಾಡುತ್ತಿದ್ದಾರೆ.

 

       ರಾಸಾಯನಿಕಗಳನ್ನು ಬಳಸಿದರೆ ನಮಗೆ ತೊಂದರೆ ಎನ್ನುವ ಮಧು, ಇದರಿಂದ ಗಾಳಿ ಮಲಿನವಾಗುತ್ತದೆ ಎಂದು ತಿಳಿಸುತ್ತಾರೆ. ಮೈಸೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗಿಯಾಗಿ ಸಾವಯವ ಕೃಷಿಯ ಬಗ್ಗೆ ತಿಳಿದು ಅದನ್ನೇ ಅನುಸರಿಸುತ್ತಿದ್ದಾರೆ. ಮಧು ಬದನೆ ಬೆಳೆಗೆ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಬೆಳೆದಿದ್ದಾರೆ. ಇದರ ಫಲವಾಗಿಯೇ 1 ಎಕರೆಯಲ್ಲಿ 7 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ.

 

ಡಾ.ಸಾಯಿಲ್ ಬಳಸಿದ್ದರಿಂದ ಗಿಡಗಳು ಚೆನ್ನಾಗಿ ಬೆಳೆದಿವೆ ಮತ್ತು ಹೆಚ್ಚು ಕಾಯಿಗಳು ಬಂದಿವೆ ಎನ್ನುತ್ತಾರೆ ರೈತ ಮಧು. ಮಣ್ಣು ಮೃದುವಾಗಿ ಕಡಿಮೆ ನೀರಿನಲ್ಲಿ ಉತ್ತಮ ಬದನೆ ಬೆಳೆಯಲು ಸಾಧ್ಯವಾಗಿದೆ. ಹೂಜಿ ಕೀಟವನ್ನು ಸಹ ರಾಸಾಯನಿಕ ಬಳಸದೇ ಸಾವಯವ ಪದ್ಧತಿಯಲ್ಲಿ ನಿಯಂತ್ರಣ ಮಾಡಿದ್ದಾರೆ. ಬೇವಿನ ಎಣ್ಣೆ ಬಳಸಿ ಕೀಟಬಾಧೆಯನ್ನು ನಿಯಂತ್ರಿಸುತ್ತಿದ್ದಾರೆ.

 

ಸಮಗ್ರ ಕೃಷಿ

 

       ಮಧು ಅವರು ಉತ್ತಮವಾಗಿ ಬದನೆ ಬೆಳೆದಿದ್ದರೂ ಏಕಬೆಳೆ ಪದ್ಧತಿಗಿಂತ ಬಹುಬೆಳೆ ಪದ್ಧತಿಯಿಂದ ರೈತರಿಗೆ ಹೆಚ್ಚು ಲಾಭವಾಗುತ್ತದೆ. ಏಕಬೆಳೆ ಪದ್ಧತಿಯಲ್ಲಿ ಒಂದೇ ಬೆಳೆ ಮೇಲೆ ಅವಲಂಬಿತರಾಗಿರುವುದರಿಂದ ಮಳೆ, ರೋಗ ಅಥವಾ ಕೀಟಬಾಧೆಯಿಂದ ಬೆಳೆಯ ಇಳುವರಿ ಕುಂಠಿತವಾದರೆ ರೈತರು ಸಾಲಕ್ಕೆ ಸಿಲುಕಿಕೊಳ್ಳುತ್ತಾರೆ. ಕೇವಲ ಒಂದು ಬೆಳೆ ಬೆಳೆಯದೆ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿಗೂ ಒಳ್ಳೆಯದು ಮತ್ತು ರೈತರ ಆರ್ಥಿಕತೆಗೂ ಒಳ್ಳೆಯದು. ಬದನೆ ಒಂದು ಅಲ್ಪಾವಧಿ ಬೆಳೆಯಾಗಿದ್ದು, ಇದರ ಜತೆ ದೀರ್ಘಾವಧಿ ಬೆಳೆಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದು. ತೋಟಗಾರಿಕೆ ಬೆಳೆಗಳಾದ ಮಾವು, ಹಲಸು, ನೇರಳೆ ಇತ್ಯಾದಿ ಮತ್ತು ಅರಣ್ಯ ಕೃಷಿ ಬೆಳೆಗಳಾದ ತೇಗ, ಮಹಾಘನಿ, ಹೆಬ್ಬೇವು ಇತ್ಯಾದಿಗಳನ್ನು ಬೆಳೆಯುವುದು ಉತ್ತಮ.

 

       ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇದರಿಂದ ಕಡಿಮೆ ನೀರಿನಲ್ಲಿ, ಕಡಿಮೆ ಖರ್ಚಿನಲ್ಲಿ ಉತ್ತಮವಾದ ಇಳುವರಿ ಪಡೆಯಬಹುದು. ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗಗಳ ಸಮಸ್ಯೆ ಕಡಿಮೆ ಇರುತ್ತದೆ. ಇದರಿಂದ ನಿರ್ವಹಣೆಯ ಶ್ರಮ ಕೂಡ ಕಡಿಮೆಯಾಗುತ್ತದೆ.

 

ಪೂರ್ತಿ ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=kyLgFUHNAUo&list=PLuN9VcGQAtK43tNyT4gEBjhv9WyVANRxl&index=22

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #soilerosion  #soilfertility  #integratedfarming  #brinjal  #organicbrinjal  



Blog




Home    |   About Us    |   Contact    |   
microbi.tv | Powered by Ocat Online Advertising Service in India