Blog

ಕಡಲೆ ದ್ವಿದಳ ಧಾನ್ಯಗಳ ಪೈಕಿ ಪ್ರಮುಖ ಬೆಳೆಯಾಗಿದ್ದು, ಉತ್ತಮ ತೇವಾಂಶದ ಪರಿಸ್ಥಿತಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕಡಲೆ ಬೆಳೆಯಲು ಸೂಕ್ತವಾದ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್. ಕಡಲೆ ಬೆಳೆಯನ್ನು ವಿವಿಧ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಆದರೆ ಮರಳು ಮಿಶ್ರಿತ ಕಲಸು ಮಣ್ಣು, ಜೇಡಿ ಮಣ್ಣು ಈ ಬೆಳೆಗೆ ಸೂಕ್ತವಾಗಿರುತ್ತೆ. ಮಣ್ಣಿನಲ್ಲಿ ರಸಸಾರ 5 ರಿಂದ 7ರಷ್ಟು ಇದ್ದರೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.     

 

ಕಡಲೆಯನ್ನು ಬೆಳೆಯುವುದರಿಂದ ಮುಂದಿನ ದಿನಗಳಲ್ಲಿ ಮತ್ತೊಂದು ಬೆಳೆಗೆ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣವಾಗುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಆದರೆ ಕಡಲೆ ಬೆಳೆಯನ್ನು ಬೆಳೆಯುವಾಗ ಮುಖ್ಯವಾದ ಕಾರ್ಯವೆಂದರೆ ಬೀಜೋಪಚಾರ. ಹೌದು ದ್ವಿದಳ ಧಾನ್ಯವಾದ ಕಡಲೆಯನ್ನು ಬಿತ್ತನೆ ಮಾಡುವ ಮೊದಲು ಬೀಜೋಪಚರಿಸುವುದರಿಂದ ಬೆಳೆ ಉತ್ತಮವಾಗಿ ಮೊಳಕೆಯೊಡೆಯಲು ಸಾಧ್ಯವಾಗುತ್ತದೆ. ಮಣ್ಣಿನಲ್ಲಿರುವ ರೋಗಾಣುಗಳಿಗೆ ತುತ್ತಾಗದೆ ಗುಣಮಟ್ಟದಿಂದ ಬೆಳೆ ಬೆಳೆದು, ಹೆಚ್ಚಿನ ಇಳುವರಿ ಸಾಧ್ಯವಾಗುತ್ತದೆ.


ಇದನ್ನು ಅರಿತಿರುವ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೃಷಿಕ ವಿಜಯ್ ಕುಮಾರ್ ಅವರು, ತಮ್ಮ 40 ಎಕರೆಯಲ್ಲಿನ ಕಡಲೆಗೆ ಡಾ.ಸಾಯಿಲ್ ರೈಜೋಬಿಯಂ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದ್ದರು. ಅಲ್ಲಿ ಬೆಳೆದ ಕಡಲೆ ಇಡೀ ಊರು ತಿರುಗಿ ನೋಡುವ ಹಾಗೆ ಗುಣಮಟ್ಟದಿಂದ ಬೆಳೆದಿತ್ತು. ಇಳುವರಿಯೂ ಭರ್ಜರಿಯಾಗಿಯೇ ಇತ್ತು. ಈಗ ಮತ್ತೆ ಡಾ.ಸಾಯಿಲ್ ಬೀಜೋಪಚಾರ ಬಳಸಿ ಬಿತ್ತನೆ ಮಾಡಿದ್ದು, ಬೆಳೆ ಎಲ್ಲರ ಮನ ಗೆದ್ದಿದೆ. ಈ ಬೆಳೆಯನ್ನು ನೋಡಿ ಮುಂಡರಗಿ ತಾಲೂಕಿನ, ಹಳ್ಳಿಕೇರಿ ಗ್ರಾಮದಲ್ಲಿ 200 ಎಕರೆಯಷ್ಟು ಜಮೀನಿನಲ್ಲಿ ರೈತರು ಡಾ.ಸಾಯಿಲ್ ಬೀಜೋಪಚಾರ ಮಾಡಿಯೇ ಬಿತ್ತನೆ ಮಾಡಿದ್ದಾರೆ.  ಅರ್ಧದಷ್ಟು ಊರು ಸಾವಯವ ಕೃಷಿಯನ್ನು ಅವಲಂಬಿಸಿರುವುದು ನಿಜಕ್ಕೂ ಶ್ಲಾಘನೀಯ.


ಈ ಬಗ್ಗೆ ಸ್ವತಃ ಕೃಷಿಕರು ಖುಷಿ ಹಂಚಿಕೊಂಡಿದ್ದಾರೆ

 https://www.youtube.com/watch?v=EV9DzhdLcK4&t=63s


ವರದಿ: ವನಿತಾ ಯ ಪರಸನ್ನವರ್


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 




Blog




Home    |   About Us    |   Contact    |   
microbi.tv | Powered by Ocat Business Promotion Service in India