ಅಡಿಕೆ ಮತ್ತು ತೆಂಗು ಉತ್ತಮ ಆದಾಯ ಕೊಡುವ ಎರಡು ತೋಟಗಾರಿಕೆ ಬೆಳೆಗಳು. ಹಲವು ಕಡೆ ಇವನ್ನು ಒಟ್ಟಿಗೆ ಬೆಳೆಯುವುದನ್ನು ನೋಡಿದ್ದೇವೆ. ಇವೆರಡರಲ್ಲಿ ಒಂದನ್ನು ಮುಖ್ಯ ಬೆಳೆಯಾಗಿ, ಮತ್ತೊಂದನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗೆ ರೈತರು ಅಡಿಕೆ ಮತ್ತು ತೆಂಗು ಎರಡನ್ನೂ ಒಟ್ಟಿಗೆ ಬೆಳೆಯುವ ವಾಡಿಕೆ ಇದೆ. ಆದರೆ ಹೀಗೆ ಬೆಳೆಯಬಹುದಾ? ಇದರಿಂದ ಆಗುವ ಅಡ್ಡ ಪರಿಣಾಮಗಳೇನು? ತೆಂಗು, ಅಡಿಕೆ ಜೊತೆ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ?
ಅಡಿಕೆ-ತೆಂಗು ಒಟ್ಟಿಗೆ ಬೆಳೆಯುವುದರಿಂದ ಆಗುವ ಅಡ್ಡ ಪರಿಣಾಮಗಳು ಮತ್ತು ಪರ್ಯಾಯ ಬೆಳೆಗಳು
ಅಡಿಕೆ ಮತ್ತು ತೆಂಗು ಒಂದೇ ಜಾತಿಯ ಮರಗಳು. ಹಾಗಾಗಿ ಒಟ್ಟಿಗೆ ಬೆಳೆಯುವುದರಿಂದ ಎರಡು ಮರಗಳು ಪೋಷಕಾಂಶಗಳು ಮತ್ತು ನೀರಿಗಾಗಿ ಸ್ಪರ್ಧಿಸಬೇಕಾಗುತ್ತವೆ. ಇದರಿಂದ ಎರಡು ಬೆಳೆಗಳ ಇಳುವರಿ ಕುಂಠಿತವಾಗುತ್ತದೆ. ಇವು ಒಂದಕ್ಕೊಂದು ಮಾರಕ ಬೆಳೆಗಳು, ಬದಲಾಗಿ ಪೂರಕ ಬೆಳೆಗಳನ್ನು ಬೆಳೆದರೆ ಸ್ಪರ್ಧೆಯ ಬದಲಾಗಿ ಒಂದಕ್ಕೊಂದು ಸಹಾಯ ಮಾಡುತ್ತವೆ. ಅಡಿಕೆ ಮತ್ತು ತೆಂಗಿನ ಜೊತೆ ಗುಂಪುಬಾಳೆ ಬೆಳೆಯುವುದು ಉತ್ತಮ ಆಯ್ಕೆ. 4 ಮರಗಳ ಮಧ್ಯೆ ಒಂದು ಬಾಳೆ ಬೆಳೆಯುವುದು. ಗುಂಪುಬಾಳೆ ಪದ್ಧತಿ ಅನುಸರಿಸಿದರೆ ಇಳುವರಿ ಆರಂಭವಾದ ಮೇಲೆ ಪ್ರತಿ 2 ತಿಂಗಳಿಗೊಮ್ಮೆ ಗೊನೆ ತೆಗೆದುಕೊಳ್ಳಬಹುದು. ಯಾವುದೇ ಬೆಳೆಯಾಗಲಿ ಅಥವಾ ತೋಟವಾಗಲಿ ಗೊಬ್ಬರದ ಗಿಡ(ಗ್ಲಿರಿಸಿಡಿಯಾ) ಬೆಳೆಯುವುದು ಉತ್ತಮ. ಇದು ಸಾರಜನಕ ಸ್ಥಿರೀಕರಣ ಮಾಡುವುದರಿಂದ ನೈಸರ್ಗಿಕವಾಗಿ ಸಾರಜನಕ ಒದಗಿಸುತ್ತದೆ. ಇದಲ್ಲದೇ ಗ್ಲಿರಿಸಿಡಿಯಾ ಇಲಿ, ಹೆಗ್ಗಣಗಳ ಕಾಟವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೈಸರ್ಗಿಕ ಇಲಿ ಪಾಷಾಣವಾಗಿ ಕೆಲಸ ಮಾಡುತ್ತದೆ.
ಬಾಳೆ ಮತ್ತು ಗ್ಲಿರಿಸಿಡಿಯಾ ಅಲ್ಲದೇ ತೆಂಗಿನ ತೋಟದಲ್ಲಿ ಬೆಣ್ಣೆಹಣ್ಣು ಮತ್ತು ಜಾಯಿಕಾಯಿ ಮರಗಳನ್ನು ಬೆಳೆಯಬಹುದು. ಯಾವುದೇ ತೋಟ ಅಥವಾ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು. ವಿವಿಧ ರೀತಿಯ ಹಣ್ಣಿನ ಬೆಳೆಗಳು, ತರಕಾರಿ ಬೆಳೆಗಳು, ಅರಣ್ಯ ಕೃಷಿ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಒಂದೇ ಬೆಳೆಯ ಮೇಲೆ ಅವಲಂಬಿತರಾಗದೇ ಪರ್ಯಾಯ ಆದಾಯ ಗಳಿಸಬಹುದು.
ಗೊಬ್ಬರ ಮತ್ತು ಕೀಟಗಳ ನಿರ್ವಹಣೆ ಇತ್ಯಾದಿ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.youtube.com/watch?v=slNmIsSLpSE
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #lowinvestment #soil #organicspray #soilerosion #soilfertility #integratedfarming #areca #arecafarming #coconut #glyricidia
Blog