ಸಾಮಾನ್ಯವಾಗಿ ಸಾವಯವ ಕೃಷಿ ಅಳವಡಿಸಿಕೊಂಡರೆ ಉತ್ತಮ ಇಳುವರಿ ಪಡೆಯಲು 2-3 ವರ್ಷ ಬೇಕಾಗುತ್ತದೆ ಎಂಬುದು ಬಹುತೇಕ ಕೃಷಿಕರ ತಪ್ಪು ಕಲ್ಪನೆ. ಇಲ್ಲೊಬ್ಬ ರೈತರು ಮೊದಲನೇ ವರ್ಷದಲ್ಲೇ ಹೆಚ್ಚು ಇಳುವರಿ ಪಡೆದು, ಸತ್ಯ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರೈತ ಚಂದು ಅನಗಂಡಿ ಅವರು 30 ವರ್ಷದಿಂದ ಅರಿಶಿನ ಬೆಳೆಯುತ್ತಿದ್ದಾರೆ. ತಮ್ಮ 30 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಅನುಸರಿಸಿ ಇದೇ ಮೊದಲ ಬಾರಿಗೆ ಅರಿಶಿನ ಬೆಳೆದಿದ್ದಾರೆ. ತಂದೆಯೂ ಕೂಡ ಅರಿಶಿನ ಬೆಳೆಗಾರರಾಗಿದ್ದರು. ಈಗ ರೈತ ಚಂದು ಕೂಡ ಅದೇ ಸಂಪ್ರದಾಯ ನಡೆಸಿಕೊಂಡು ಬರುತ್ತಿದ್ದಾರೆ.
ರಾಸಾಯನಿಕ ಕೃಷಿಗಿಂತ ಸಾಯವವ ಕೃಷಿಯಲ್ಲಿ ಇಳುವರಿ ಹೆಚ್ಚಾಗಲು ಕಾರಣ ಡಾ.ಸಾಯಿಲ್ ಜೈವಿಕ ಗೊಬ್ಬರ ಎನ್ನುತ್ತಾರೆ ಈ ಕೃಷಿಕರು. ಮೊದಲೆಲ್ಲಾ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದ ಇವರು, ಈ ಬಾರಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ್ದಾರೆ. ಇದನ್ನು ಬಳಸಿದ ಮೇಲೆ ಮಣ್ಣು ಮೃದುವಾಗಿದೆ ಮತ್ತು ಎರೆಹುಳುಗಳು ಕಾಣಿಸಿಗೊಂಡಿವೆ. ಎರೆಹುಳುಗಳು ಇರುವುದರಿಂದ ಎರೆಹುಳು ಹಿಕ್ಕೆ ಹೆಚ್ಚಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗತೊಡಗಿದೆ.
ರಾಸಾಯನಿಕ ಬಳಸುತ್ತಿದ್ದಾಗ ಭೂಮಿ ಗಟ್ಟಿಯಾಗಿ ರೋಗಗಳು ಹೆಚ್ಚಾಗಿದ್ದವು. ಆದರೆ ಈಗ ಕಡಿಮೆಯಾಗಿರುವುದನ್ನು ರೈತ ಅರಿತಿದ್ದಾರೆ. ರಾಸಾಯನಿಕ ಬಳಸುವಾಗ 5-6 ಬಾರಿ ಸ್ಪ್ರೇ ಮಾಡಬೇಕಾಗಿತ್ತು, ಡಾ.ಸಾಯಿಲ್ ಬಳಕೆಯಿಂದ ಇಲ್ಲಿಯವರೆಗೆ ಕೇವಲ ಒಂದು ಬಾರಿ ಬಳಸಿದ್ದಾರೆ ರೈತ ಚಂದು.
ಕಳೆದ ವರ್ಷಕ್ಕಿಂತ ಈ ವರ್ಷ 5-6 ಕ್ವಿಂಟಾಲ್ ಹೆಚ್ಚು ಇಳುವರಿ ತೆಗೆಯುವ ನಿರೀಕ್ಷೆಯಲ್ಲಿ ರೈತ ಇದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ಅರಿಶಿನ ಕಡಿಮೆ ನೀರಿನಲ್ಲೂ ಆರೋಗ್ಯವಾಗಿದೆ. ಆದೇ ರಾಸಾಯನಿಕ ಬಳಸಿರುವ ಅರಿಶಿನ ಒಣಗತೊಡಗಿತು ಎನ್ನುತ್ತಾರೆ ರೈತರು.
ಈಗಾಗಲೇ ರೈತರು ತಮ್ಮ ಅರಿಶಿನ ಬೆಳೆಯನ್ನು ನೋಡಿ ಆಶ್ಚರ್ಯ ಪಡುತ್ತಿದ್ದಾರೆ. ಇತರ ರೈತರೂ ಕೂಡ ತಮ್ಮಂತೆ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ರೈತ ಚಂದು ಸಂದೇಶ ನೀಡುತ್ತಿದ್ದಾರೆ.
https://www.youtube.com/watch?v=5trOUGwmqV8&list=PLuN9VcGQAtK42Yz0uAcYIsJE7wg4zU7-g&index=2
ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #lowinvestment #soil #organicspray #turmeric #organicturmeric
Blog