ರಾಸಾಯನಿಕ ಗೊಬ್ಬರಗಳನ್ನು ಬಿಟ್ಟು ಕೃಷಿಯೇ ಇಲ್ಲ ಎನ್ನುವಂತಿರುವ ಇಂದಿನ ಎಷ್ಟೋ ರೈತರಿಗೆ ಸಾವಯವ ಕೃಷಿಯ ಬಗ್ಗೆ ತಿಳಿದೇ ಇಲ್ಲ. ಗೊತ್ತಿದ್ದವರಿಗೆ ಇದರಿಂದ ಇಳುವರಿ ಕಡಿಮೆ ಬರುತ್ತದೆ ಎಂಬ ಅಪನಂಬಿಕೆ. ಇನ್ನು ಕೆಲವರಿಗೆ ಸಾವಯವ ಕೃಷಿಗೆ ಬರಲು ಭಯ, ಭೂಮಿ ಒಗ್ಗಿಕೊಳ್ಳುವುದಕ್ಕೆ ತುಂಬಾ ಸಮಯ ಹಿಡಿಯುತ್ತದೆ ಎಂದು. ಬಳ್ಳಾರಿಯ ಈ ರೈತರು ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಜೋಳ ಬೆಳೆದಿದ್ದಾರೆ. ಈ ಕೃಷಿಕರ ಅನುಭವ ಹಲವಾರು ಕೃಷಿಕರ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.
ಬಳ್ಳಾರಿಯ ಬಾಣಾಪುರ ಗ್ರಾಮದ ರೈತರಾದ ಜೈಸೂರ್ಯರೆಡ್ಡಿ ಮತ್ತು ಮರೇಗೌಡರವರು ಸಾವಯವ ಪದ್ಧತಿಯಲ್ಲಿ ಜೋಳ ಬೆಳೆಯುತ್ತಿದ್ದಾರೆ. ರೈತ ಮರೇಗೌಡರವರು ರಾಸಾಯನಿಕ ಮತ್ತು ಸಾವಯವ ಕೃಷಿಯ ವ್ಯತ್ಯಾಸ ತಿಳಿಯಲು 1 ಎಕರೆಯಲ್ಲಿ ಡಾ.ಸಾಯಿಲ್ ಬೀಜೋಪಚಾರ ಬಳಸಿ ಜೋಳ ಬಿತ್ತನೆ ಮಾಡಿದ್ದಾರೆ. ಬೀಜೋಪಚಾರ ಮಾಡಿರುವ ಜೋಳದ ಮೊಳಕೆ ಪ್ರಮಾಣ ಉತ್ತಮವಾಗಿರುವುದನ್ನು ಇವರು ಗಮನಿಸಿದ್ದಾರೆ. ಸಾವಯವ ಕೃಷಿಯಿಂದ ಖರ್ಚು ಕೂಡ ಕಡಿಮೆಯಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಖರ್ಚು ಅಧಿಕವಾಗಿತ್ತು ಎನ್ನುತ್ತಾರೆ ರೈತ.
ನೈಸರ್ಗಿಕ ಕೃಷಿಯಲ್ಲಿ ಭೂಮಿ ಹೊಂದಿಕೊಳ್ಳಲು 2-3 ವರ್ಷ ತೆಗೆದುಕೊಳ್ಳುತ್ತದೆ. ಹಾಗಾಗಿ ಡಾ.ಸಾಯಿಲ್ ಬಳಸಿ ಸಾವಯವ ಕೃಷಿ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಇನ್ನೊಬ್ಬ ರೈತ ತಿಳಿಸಿದರು. ಸಾವಯವ ಕೃಷಿಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯಬಹುದು ಮತ್ತು ಖರ್ಚು ಮಾಡಿಕೊಳ್ಳಬಹುದು. ಇದರಿಂದ ಹೆಚ್ಚು ಆದಾಯ ಗಳಿಸಲು ಸಹಾಯವಾಗುತ್ತದೆ.
https://www.youtube.com/watch?v=7Ng6OqW6HCM&list=PLuN9VcGQAtK5WwZx1slEtAvjt8vv4jrjk
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #lowinvestment #soil #diseasemanagement #jowar #corn
Blog