Blog

       ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಕಾರಣ ಕೆಲವು ಹಣ್ಣು-ತರಕಾರಿಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅದರಲ್ಲಿ ಪ್ರಮುಖವಾದ ಒಂದು ಹಣ್ಣು ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್. ನಮ್ಮ ದೇಶದ ಹಣ್ಣಲ್ಲವಾದರೂ ಇತ್ತೀಚೆಗೆ ಹೆಚ್ಚು ರೈತರು ಬೆಣ್ಣೆಹಣ್ಣು ಕೃಷಿಗೆ ಒಲವು ತೋರಿಸುತ್ತಿದ್ದಾರೆ. ಇದಕ್ಕೆ ಕಾರಣ ಬೇಡಿಕೆ ಮತ್ತು ಅದರಿಂದ ಬರುವ ಆದಾಯ. ನೀವು ಕೂಡ ಇದರ ಉಪಯೋಗ ಪಡೆಯಬಹುದು. ಇದರ ಮಾರುಕಟ್ಟೆ ಮತ್ತು ಇದರಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

     

ಬೆಣ್ಣೆಹಣ್ಣಿನಲ್ಲಿ ಹಲವು ಪೋಷಕಾಂಶಗಳು ಇವೆ. ಇದೊಂದು ಪೋಷಕಾಂಶಭರಿತ ಹಣ್ಣು. ಹಾಗಾಗಿಯೇ ಇದರ ಬೇಡಿಕೆ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಇದನ್ನು ಕಡಿಮೆ ಬೆಳೆಯುತ್ತಿದ್ದು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಇದು ರೈತರಿಗೆ ಒಂದು ಸುವರ್ಣಾವಕಾಶ. ಬೆಣ್ಣೆ ಹಣ್ಣು ಮುಂದೆ ಭಾರತದಲ್ಲಿ ಇನ್ನೂ ಹೆಚ್ಚು ಬೇಡಿಕೆ ಪಡೆಯುವುದರಿಂದ ಇದನ್ನು ಬೆಳೆಯುವ ರೈತರು ಆದಾಯ ಹೆಚ್ಚಿಸಿಕೊಳ್ಳಬಹುದು.

 

ಬಟರ್ ಫ್ರೂಟ್

       ಬೆಣ್ಣೆಹಣ್ಣು ಮರದಲ್ಲಿ ಹಣ್ಣು ಬಿಡಲು 5-6 ವರ್ಷಗಳಷ್ಟು ಸಮಯ ಹಿಡಿಯುತ್ತದೆ. ಗಿಡದಿಂದ ಗಿಡಕ್ಕೆ ಮತ್ತು ಸಾಲಿಂದ ಸಾಲಿಗೆ 8-10 ಮೀಟರ್ ಅಂತರ ಕೊಡಬೇಕು. ಹೆಚ್ಚು ಅಂತರ ಇರುವುದರಿಂದ ಖಾಲಿ ಜಾಗದಲ್ಲಿ ಅಂತರ್ಬೆಳೆಗಳನ್ನು ಬೆಳೆಯಬಹುದು. ಸರಿಯಾಗಿ ನಿರ್ವಹಣೆ ಮಾಡಿದರೆ ಒಂದು ಮರದಲ್ಲಿ 200-300 ಹಣ್ಣುಗಳು ಬಿಡುತ್ತವೆ. ನೀರು ನಿರ್ವಹಣೆ ಈ ಹಣ್ಣಿಗೆ ತುಂಬಾ ಮುಖ್ಯ. ನೀರು ಹೆಚ್ಚಾದರೆ ಹೂ ಮತ್ತು ಹಣ್ಣು ಬಿಡುವ ಸಮಯದಲ್ಲಿ ಸಮಸ್ಯೆಯಾಗುತ್ತದೆ. ಸಾವಯವ ಕೃಷಿಯಲ್ಲಿ ಬೆಳೆದರೆ ಈ ಹಣ್ಣಿಗೆ ಇನ್ನೂ ಹೆಚ್ಚು ಬೆಲೆ ಸಿಗುವುದರಿಂದ ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳುವುದು ಉತ್ತಮ. ಸಾವಯವ ಕೃಷಿಯ ಇನ್ನೊಂದು ಲಾಭ ಎಂದರೆ ರಾಸಾಯನಿಕ ಬಳಸುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ತೋಟ ನಿರ್ವಹಣೆ ಮಾಡಬಹುದು.

 

       ಬಟರ್ ಫ್ರೂಟ್ ಬಹು ಬೇಡಿಕೆಯಲ್ಲಿರುವ ಹಣ್ಣು. ಹಾಗಾಗಿ ರೈತರು ಇದನ್ನು ತಮ್ಮ ಜಮೀನಿನಲ್ಲಿ ಬೆಳೆಯುವುದರಿಂದ ಉತ್ತಮ ಆದಾಯ ಗಳಿಸಬಹುದು.

 

ಬೆಣ್ಣೆಹಣ್ಣಿನ ಸಮಗ್ರ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=EDV3rxHfnjI&list=PLuN9VcGQAtK7vb4AOHwNd8UcbQbi5LT1I&index=4

 

ಮಾಹಿತಿಗಾಗಿ ಸಂಪರ್ಕಿಸಿ: 9099262233

  

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #butterfruit  #avocado  #exoticfruit  #horticulture  #fruits  



Blog




Home    |   About Us    |   Contact    |   
microbi.tv | Powered by Ocat Online Advertising Service in India