ಲಾಕ್ ಡೌನ್ ಜನರಿಗೆ ಬದುಕು ಬದಲಿಸಿತು. ಕೊರೋನಾದಿಂದ ತುಂಬಾ ಜನರು ನಗರ ಪ್ರದೇಶಗಳಿಂದ ಹಳ್ಳಿಯೆಡೆ ಬಂದರು. ಎಲ್ಲೋ ಹೋಗಿ ದುಡಿಯುವುದಕ್ಕಿಂತ ಹಳ್ಳಿಯಲ್ಲೇ ಇದ್ದು ದುಡಿಯುವುದು ಮೇಲು ಎಂದು ವಾಪಸ್ಸಾದವರು ಬಹಳ. ನಗರದ ಬ್ಯುಸಿ ಜೀವನಕ್ಕಿಂತ ಹಳ್ಳಿಯ ನಿಸರ್ಗದ ಜೊತೆಯ ಜೀವನ ಎಷ್ಟೋ ಮೇಲು ಎಂದು ಕೆಲವರು ಹಳ್ಳಿಯಲ್ಲೇ ಉಳಿದರು. ಹೀಗೆ ಹಳ್ಳಿ ಜೀವನವೇ ಮೇಲು ಎನ್ನುವ IBM ನಲ್ಲಿ ಕೆಲಸ ಮಾಡುತ್ತಿದ್ದ ಯುವಕ 4-5 ವರ್ಷಗಳ ಹಿಂದೆಯೇ ತಂದೆ ಸತ್ತ ಮೇಲೆ ಲಕ್ಷ ರೂ. ಸಂಬಳ ಬಿಟ್ಟು ಸ್ವಂತ ಊರಿನಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಅಡಿಕೆ ಬೆಳೆಯುತ್ತಿರುವ ಇವರ ಅನುಭವ ತಿಳಿಯೋಣ ಬನ್ನಿ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಅರಸಲಗೇರಿಯ ಶಿಬು ಥಾಮಸ್ IBM ನಲ್ಲಿ ಉದ್ಯೋಗ ಮಾಡುತ್ತಿದ್ದರು. ಈಗ ತಮ್ಮ 32 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇದರಲ್ಲಿ 8 ಎಕರೆ ಅಡಿಕೆ ಮಾಡಿದ್ದು, 1.5 ಎಕರೆಯಲ್ಲಿ ಪೂರ್ತಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ರಾಸಾಯನಿಕ ಬಳಸಿ ಕೃಷಿ ಮಾಡುತ್ತಿದ್ದಾಗ ಮಣ್ಣು ಗಟ್ಟಿಯಾಗಿರುತ್ತಿತ್ತು, ಆದರೆ ಈಗ ಮೃದುವಾಗಿದೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ ಮೇಲೆ ಆಗಿರುವ ಬೆಳವಣಿಗೆ ನೋಡಿದರೆ ಆಶ್ಚರ್ಯವಾಗುತ್ತದೆ ಎನ್ನುತ್ತಾರೆ ಶಿಬು. ಉತ್ತಮ ಬೆಳವಣಿಗೆ ಆಗಿ 4.5 ವರ್ಷಕ್ಕೇ ಅಡಿಕೆ ಬಿಟ್ಟಿದೆ. 1.5 ಎಕರೆ ಅಡಿಕೆ ಖೇಣಿಗೆ ಕೇಳಿದರೂ ಕೊಡದೇ ತೂಕದ ಮೇಲೆ ಕೊಡುವುದಾಗಿ ನಿರ್ಧರಿಸಿದ್ದಾರೆ.
ಅಡಿಕೆ ಜೊತೆ ಅಂತರ ಬೆಳೆಯಾಗಿ ಬಾಳೆ ಬೆಳೆದಿದ್ದಾರೆ ಮತ್ತು ಏಲಕ್ಕಿಯನ್ನು ಕೂಡ ಬೆಳೆದು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಸಾವಯವ ಕೃಷಿ ಅಳವಡಿಸಿಕೊಳ್ಳುವುದರಿಂದ ಬೆಳೆಗಳಿಗೆ ಕಡಿಮೆ ರೋಗಗಳು ಬರುತ್ತವೆ ಮತ್ತು ಕೀಟಗಳ ಸಮಸ್ಯೆ ಕಡಿಮೆಯಾಗುತ್ತವೆ. ಸಾವಯವ ಕೃಷಿ ಅಳವಡಿಸಿಕೊಳ್ಳುವುದರಿಂದ ತೋಟ ಚೆನ್ನಾಗಿರುತ್ತದೆ. ಕೊರೋನ ಕಾಲದಲ್ಲಿ ಜನರಿಗೆ ಅರ್ಥವಾದ ವಿಷಯ ಮೊದಲೇ ತಿಳಿದಿದ್ದಕ್ಕೆ ಖುಷಿ ಪಡುತ್ತಾರೆ. ಹಳ್ಳಿಯಲ್ಲಿ ನೆಮ್ಮದಿಯ ಜೀವನ ಇದೆ. ಇಲ್ಲಿ ನಮಗೆ ನಾವೇ ಬಾಸ್ ಎಂಬ ನೆಮ್ಮದಿಯಲ್ಲಿ ಇದ್ದಾರೆ ಶಿಬು ಥಾಮಸ್.
https://www.youtube.com/watch?v=Pc5Ulcmtxq4
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
Blog