ನಾವು ಯಾವುದೇ ಬೆಳೆಯನ್ನು ಬೆಳೆಯುತ್ತಿದ್ದೇವೆ ಎಂದರೆ, ಆ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯುತ್ತೇವೆ ಎಂಬ ಭರವಸೆ ಇರಬೇಕು. ಆ ಭರವಸೆಯ ಕನಸು ನನಸಾಗಬೇಕೆಂದರೆ, ರೈತನ ಕೃಷಿ ಪದ್ಧತಿ ಸರಿಯಾಗಿರಬೇಕಾಗುತ್ತದೆ.
ರಾಸಾಯನಿಕ ಬಳಸಿದರೆ ಹೆಚ್ಚಿನ ಇಳುವರಿ ಪಡೆಯಬಹುದೆಂಬ ಒಂದು ಹುಚ್ಚು ಕಲ್ಪನೆಯಿಂದ ಮೂಟೆ ಮೂಟೆ ಗೊಬ್ಬರ ಸುರಿಯುವುದು ನಮ್ಮ ಬಹುತೇಕ ರೈತರ ಕಾಯಕವಾಗಿದೆ. ಹೀಗಾಗಿ ಕೃಷಿ ಭೂಮಿ ತನ್ನ ಫಲವತತ್ತೆಯನ್ನು ಕಳೆದುಕೊಂಡು, ನೀರಿನ ಅಭಾವ ಹೆಚ್ಚುತ್ತಿದೆ. ಮೃದುವಾಗಿರಬೇಕಾದ ಕೃಷಿ ಭೂಮಿ ಸಿಮೆಂಟ್ ರೀತಿಯಲ್ಲಿ ಗಟ್ಟಿಯಾಗಿ ಉತ್ತಮ ಇಳುವರಿ ಬಾರದ ಹಾಗೆ ಭೂಮಿ ಸತ್ತು ಹೋಗಿದೆ. ಹಾಗಾಗಿ ರೈತ ಕೃಷಿ ಪದ್ಧತಿ ಬದಲಾಗಬೇಕು, ಸಾವಯವ ಕೃಷಿ ಪ್ರತಿ ರೈತನದ್ದಾಗಬೇಕು. ಆಗ ಮಾತ್ರ ರೈತ ತಾನು ಅಂದುಕೊಂಡಂತೆ ಬೆಳೆಯಲ್ಲಿ ಇಳುವರಿ ಪಡೆಯೋಕೆ ಸಾಧ್ಯ.
ರಬಕವಿಬನಹಟ್ಟಿ ತಾಲೂಕು, ಚಿಮ್ಮಡಿ ಗ್ರಾಮದ ಕೃಷಿಕ ಪ್ರಭು ಹಾಗೂ ಬಸವರಾಜ್ ಅವರು ಸಾವಯವ ಕೃಷಿಯಲ್ಲಿ ಕಬ್ಬು ಬೆಳೆಯುತ್ತಿದ್ದು, ಲಾಭ ಹೆಚ್ಚಿಸಿಕೊಂಡಿದ್ದಾರೆ. ರಾಸಾಯನಿಕದಲ್ಲಿ ಬೆಳೆಯುವಾಗ ಎಕರೆಗೆ 25 ಸಾವಿರ ರೂ. ಖರ್ಚು ಮಾಡುವುದರ ಜತೆಗೆ 50 ಟನ್ ಕಬ್ಬು ಇಳುವರಿ ಮಾತ್ರ ಪಡೆಯುತ್ತಿದ್ದರು. ಆಗ ಲಾಭಕ್ಕಿಂತ ನಷ್ಟವೇ ಹೆಚ್ಚಿತ್ತು.
ಈಗ ರಾಸಾಯನಿಕ ಬಳಕೆ ನಿಲ್ಲಿಸಿ, 2 ವರ್ಷದಿಂದ ಸಾವಯವ ಕೃಷಿಗೆ ಬಂದ ಮೇಲೆ ಖರ್ಚು ಎಕರೆಗೆ ಕೇವಲ 6000 ರೂ. ಆಗಿದ್ದು ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿರುವ ಕೃಷಿಕ ಕಳೆದ ಬಾರಿ 60 ಟನ್ ಕಬ್ಬು ಇಳುವರಿ ಪಡೆದಿದ್ದರೆ, ಈ ಬಾರಿ ಕೂಳೆ ಕಬ್ಬಿನಲ್ಲಿ 70 ಟನ್ ಇಳುವರಿಯನ್ನು ಪಡೆಯುವ ಭರವಸೆಯಲ್ಲಿದ್ದಾರೆ. 9 ತಿಂಗಳಲ್ಲಿ 29 ಗಣಿಕೆ ಬಂದು ಕೃಷಿಕನಿಗೆ ಎಲ್ಲಿಲ್ಲದ ಖುಷಿ ತಂದುಕೊಟ್ಟಿದೆ.
ಡಾ.ಸಾಯಿಲ್ ಜೈವಿಕ ಗೊಬ್ಬರಗಳು ಕೃಷಿ ಭೂಮಿಯಲ್ಲಿ ಎರೆಹುಳು ಹೆಚ್ಚಿಸಿ ಸಮಗ್ರ ಪೋಷಕಾಂಶಗಳನ್ನು ತಂದೊಡ್ಡಿ ಮಣ್ಣಿನ ಫಲವತ್ತತೆ ಹೆಚ್ಚಿಸಿದೆ.
https://www.youtube.com/watch?v=hRX2aqdayNI&t=126s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್