ಅರಿಶಿನವು ಕೇವಲ ಅಡುಗೆ ಮನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವುದು ಮಾತ್ರವಲ್ಲ. ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಆರೋಗ್ಯದ ರಕ್ಷಣೆಯಲ್ಲೂ ಬಹುಪಕಾರಿ.
ಅರಿಶಿನವು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದೆ. ಕರ್ಕುಮಾ ಲಾಂಗಾ ಎಂಬುದು ಅರಿಶಿನದ ವೈಜ್ಞಾನಿಕ ಹೆಸರು. ಅರಿಶಿನ ಬಳಸುವುದರಿಂದ ಹೇಗೆ ಪ್ರಯೋಜನ ಪಡೆಯಬಹುದೋ, ಹಾಗೆಯೇ ಅದನ್ನು ಕೃಷಿ ಮಾಡುವುದರಿಂದ ಕೂಡ ಅಷ್ಟೇ ಲಾಭಗಳಿವೆ. ನೀವು ಮನೆಯಲ್ಲಿಯೂ ಸಹ ಬೆಳೆಯನ್ನು ಬೆಳೆಯಬಹುದು. ಹಾಗೆಯೇ ಜಮೀನಿನಲ್ಲೂ ಬೆಳೆಯುವುದರಿಂದ ಅನೇಕ ಲಾಭ ಪಡೆಯಬಹುದು. ಹಾಗಾದರೆ ಅರಿಶಿನ ಬೆಳೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಬನ್ನಿ ನೋಡೋಣ.
ಯಾವುದೇ ಹವಾಮಾನಕ್ಕೂ ಈ ಬೆಳೆ ಹೊಂದಿಕೊಳ್ಳುತ್ತದೆ. ಶೀತವಿರುವ ಪ್ರದೇಶದಲ್ಲೂ ಇದನ್ನು ಬೆಳೆಯಬಹುದು. ಇದಲ್ಲದೆ, ಇತರ ಸಸ್ಯಗಳಿಗೆ ಹೋಲಿಸಿದರೆ ಅರಿಶಿನವು ಬೇಗ ಬೆಳೆಯುತ್ತದೆ. 6 ತಿಂಗಳಿಗೊಮ್ಮೆ ಸಮೃದ್ಧ ಫಲ ಸಿಗುವುದರಿಂದ ಈಬೆಳೆಯನ್ನು ಎರಡು ಸಾರಿ ಬಿತ್ತನೆ ಮಾಡಿ ಇಳುವರಿ ಪಡೆಯಬುಹುದು.
ಅರಿಶಿನ ಕೃಷಿ ಮಾಡಿ ಯಶಸ್ಸು ಕಂಡವರ ಪ್ರಮಾಣವು ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕು ನಿಂಗಾಪುರ ಗ್ರಾಮದ ಕೃಷಿಕ ವಿನಾಯಕ್ ಅವರು ಕಳೆದ 4 ವರ್ಷದಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದು, ಮೊದಲು ಕಬ್ಬು ಬೆಳೆಯನ್ನು ಸಾವಯವ ಕೃಷಿಯಲ್ಲಿ ಬೆಳೆಯೋಕೆ ಶುರುಮಾಡಿ ಈಗ ಅರಿಶಿನ ಬೆಳೆಯನ್ನು ಬೆಳೆಯುತ್ತಿದ್ದಾರೆ. ರಾಸಾಯನಿಕದಲ್ಲಿ ಅರ್ಧ ಎಕರೆಗೆ 25 ಟನ್ ಪಡೆಯುತ್ತಿದ್ದ ಕೃಷಿಕ, ಈಗ ಸಾವಯವದಲ್ಲಿ 35 ಟನ್ ಅರಿಶಿನ ಇಳುವರಿ ಪಡೆಯುತ್ತಿದ್ದಾರೆ.
ಮಾರ್ಕೇಟ್ ನಲ್ಲಿಯೂ ಸಹಿತ ಇವರ ಅರಿಶಿನ ಬೆಳೆಗೆ 1000 ರೂ. ಹೆಚ್ಚು ಬೆಲೆ ಸಿಗುತ್ತಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದಿದ್ದಾರೆ. ಹಾಗಾದ್ರೆ ಸಾವಯವ ಕೃಷಿಯಲ್ಲಿ ರೈತ ಬಳಸಿದ ಗೊಬ್ಬರ ಯಾವುದು? ಖರ್ಚು ಕಡಿಮೆಯಾಗಿದ್ದು ಹೇಗೆ? ಇವೆಲ್ಲದರ ಕಂಪ್ಲೀಟ್ ಮಾಹಿತಿಯನ್ನು ಕೃಷಿಕರು ಹಂಚಿಕೊಂಡಿದ್ದಾರೆ.
https://www.youtube.com/watch?v=QSHSTWeCehw&t=95s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್