ಹಳೇ ಕಾಲದಲ್ಲಿ ಯಾವುದೇ ರಾಸಾಯನಿಕ ಇಲ್ಲದೇ ನೈಸರ್ಗಿಕವಾಗಿ ಸಿಗುವ ತ್ಯಾಜ್ಯಗಳು, ಗೊಬ್ಬರಗಳನ್ನು ಬಳಸಿ ಉತ್ತಮ ಪೋಷಕಾಂಶಗಳುಳ್ಳ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಈಗಿನ ರೈತರು ಕೃತಕವಾಗಿ ಎಷ್ಟೇ ಪೋಷಕಾಂಶ ಒದಗಿಸಿದರೂ ಇಳುವರಿ ಮತ್ತು ಪೋಷಕಾಂಶದಲ್ಲಿ ಕೊರತೆ ಅನುಭವಿಸುತ್ತಿದ್ದಾರೆ. ಮೊದಲಿನಂತೆ ಈಗ ನಾವು ರಾಸಾಯನಿಕ ಗೊಬ್ಬರ ಬಳಸದೇ ಕೃಷಿ ಮಾಡುವುದು ಹೇಗೆ? ಸಾವಯವ ಕೃಷಿಯಿಂದ ಮನುಷ್ಯನ ಆರೋಗ್ಯಕ್ಕೆ ಹೇಗೆ ಸಹಾಯಕಾರಿ?
ಮಂಡ್ಯದ ಹಿರಿಯ ರೈತರೊಬ್ಬರು ಹಳೇ ಪದ್ಧತಿಯಲ್ಲಿ ಕೃಷಿ ಮಾಡಿದ್ದರ ಪರಿಣಾಮ ಮತ್ತು ಅದರ ಮಹತ್ವ ತಿಳಿಸಿದ್ದಾರೆ. ಇವರು ತಮ್ಮ 23 ಗುಂಟೆ ಜಮೀನಿನಲ್ಲಿ ಪ್ರಾಯೋಗಿಕವಾಗಿ ಹಸಿರೆಲೆ ಗೊಬ್ಬರದಿಂದಾಗುವ ಲಾಭವನ್ನು ಕಂಡುಕೊಂಡಿದ್ದಾರೆ. ಕಬ್ಬು ಬೆಳೆಯುತ್ತಿದ್ದ ರೈತನ ಜಮೀನಿನಲ್ಲಿ ಮೊದಲು ಇಳುವರಿ ತುಂಬಾ ಕಡಿಮೆ ಬರುತ್ತಿತ್ತು. ದ್ವಿದಳ ಧಾನ್ಯಗಳನ್ನು ಬೆಳೆದಾಗಲೂ ಬೆಳವಣಿಗೆ ಕುಂಠಿತವಾಗಿತ್ತು. ನಂತರ ಹಸಿರು ಗೊಬ್ಬರ ಬೆಳೆಗಳನ್ನು ಬೆಳೆದು ಮಣ್ಣಿಗೆ ನೀಡಿದ್ದಾರೆ. ಇದಾದ ನಂತರ 25 ಗುಂಟೆಯಲ್ಲಿ 55 ಟನ್ ಕಬ್ಬು ಬೆಳೆದಿದ್ದಾರೆ. ಹಸಿರು ಗೊಬ್ಬರ ಕೊಡುವುದರಿಂದ ಮಣ್ಣಿನ ಪೋಷಕಾಂಶಗಳು ಅಧಿಕವಾಗಿ ಫಲವತ್ತತೆ ಹೆಚ್ಚುತ್ತದೆ.
ಹಿಪ್ಪು ನೇರಳೆ
ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ ಮೇಲೆ ಹಿಪ್ಪುನೇರಳೆ ಎಲೆಗಳ ಗಾತ್ರ ಮತ್ತು ಗುಣಮಟ್ಟ ಹೆಚ್ಚಾಗಿದೆ. ಸಾವಯವ ಹಿಪ್ಪು ನೇರಳೆಯ ಒಂದು ಎಲೆ ರಾಸಾಯನಿಕ ಹಿಪ್ಪು ನೇರಳೆಯ ಮೂರು ಎಲೆಗೆ ಸಮ ಎನ್ನುತ್ತಾರೆ ರೈತ. ರೈತರಿಗೆ ಸಾಲಿನ ಮಧ್ಯೆ ಹೆಚ್ಚು ಅಂತರ ಕೊಡುವುದರಿಂದ ಆಗುವ ಲಾಭಗಳನ್ನು ಜಿಲ್ಲಾ ಸಂಚಾಲಕರಾದ ಜೋಗಿಗೌಡರವರು ತಿಳಿಸಿದರು. ಅಂತರ ಕೊಡುವುದರಿಂದ ಗಾಳಿ-ಬೆಳಕು ಚೆನ್ನಾಗಿ ಸಿಗುತ್ತದೆ ಮತ್ತು ಅಂತರ ಬೆಳೆ ಬೆಳೆಯಲು ಅವಕಾಶ ಸಿಗುತ್ತದೆ. ಇದರಿಂದ ಇನ್ನಷ್ಟು ಆದಾಯ ಗಳಿಸಬಹುದು.
ದ್ವಿದಳ ಧಾನ್ಯಗಳ ಬೆಳೆಗಳನ್ನು ಬೆಳೆಯುವುದರಿಂದ ಆಗುವ ಲಾಭಗಳನ್ನು ತಿಳಿಸಲಾಯಿತು. ಇವುಗಳ ಬೇರುಗಳಲ್ಲಿರುವ ಗಂಟುಗಳು ಸಾರಜನಕ ಸ್ಥಿರೀಕರಣ ಮಾಡಲು ತುಂಬಾ ಸಹಾಯಕಾರಿ. ಹಿರಿಯ ರೈತರು ಹೇಳುವಂತೆ ಕೃಷಿ ಮಾಡುವ ವಿಧಾನ ಬದಲಾಗಬೇಕು ಇಲ್ಲವಾದರೆ ರಾಸಾಯನಿಕ ಬಳಕೆಯಿಂದ ಮನುಷ್ಯನ ಆರೋಗ್ಯವೂ ಹದಗೆಡುತ್ತದೆ.
ರೈತರ ಅನುಭವದ ಮಾತು ಕೇಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=HorkQUk_T4w
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #lowinvestment #mulberry #sugarcane #pulses #dicotyledons #rootnodules #nitrogenfixation #urea #dap #nutritionmangament #greenmanure
Blog