ಸಾವಯವ ಕೃಷಿ ಎಂದರೆ ಅದು ಕೆಲಸ ಮಾಡಲ್ಲ. ಭೂಮಿ ಹೊಂದಿಕೊಳ್ಳೋದಿಕ್ಕೆ ತುಂಬಾ ವರ್ಷಗಳು ಬೇಕಾಗುತ್ತವೆ ಎಂದು ಹಲವು ರೈತರು ಹೇಳುತ್ತಾರೆ. ಆದರೆ ಇದು ನಿಜವಲ್ಲ, ಮೊದಲ ಬೆಳೆಯಿಂದಲೇ ಉತ್ತಮ ಇಳುವರಿ ಪಡೆಯಬಹುದು. ಬಾಗಲಕೋಟೆಯ ಈ ರೈತ ಇದಕ್ಕೆ ಸಾಕ್ಷಿಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ರೈತ ಸಿದ್ದು ಅವರು ರಾಸಾಯನಿಕ ಗೊಬ್ಬರ ಮತ್ತು ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಬೇರೆ ಬೇರೆ ಕಡೆ ಪ್ರಾಯೋಗಿಕವಾಗಿ ಕಬ್ಬು ಬೆಳೆದಿದ್ದಾರೆ. ಎರಡೂ ಪದ್ಧತಿಗಳ ಮಧ್ಯೆ ಇರುವ ವ್ಯತ್ಯಾಸ ಕಂಡುಕೊಂಡಿದ್ದಾರೆ.
ಸಾವಯವ ಕಬ್ಬು
ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಬೆಳೆದಿರುವ ಸಾವಯವ ಪದ್ಧತಿಯ ಜಮೀನಿನಲ್ಲಿ ಮಣ್ಣು ಮೃದುಗೊಂಡು ಫಲವತ್ತತೆ ಹೆಚ್ಚಾಗಿದೆ. ಕಾರಣ ಎರೆಹುಳುಗಳ ಸಂಖ್ಯೆ ಹೆಚ್ಚಾಗಿದೆ. ಈ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಜೀವಿಗಳು ವೃದ್ಧಿಯಾಗಲು ಬೇಕಾದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಮಣ್ಣಿನಲ್ಲಿ ನೈಸರ್ಗಿಕವಾಗಿ ಪೋಷಕಾಂಶಗಳು ಹೆಚ್ಚಾಗುತ್ತವೆ. ಇದರಿಂದ ಗೊಬ್ಬರಗಳ ಖರ್ಚು ಕಡಿಮೆಯಾಗಿದೆ.
ರಾಸಾಯನಿಕ ಕಬ್ಬು
ರಾಸಾಯನಿಕ ಗೊಬ್ಬರಗಳಾದ ಯೂರಿಯಾ, DAP ಇತ್ಯಾದಿ ಕೃತಕ ಪೋಷಕಾಂಶಗಳನ್ನು ಬಳಸಿದ ಜಮೀನಿನ ಮಣ್ಣು ಗಟ್ಟಯಾಗಿ ಅಂಟಿನಂತಾಗಿದೆ. ಎರೆಹುಳುಗಳು ಇಲ್ಲವಾಗಿವೆ. ಇಂತಹ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳ ಅಭಿವೃದ್ಧಿ ಕಷ್ಟವಾಗಿ, ಪೋಷಕಾಂಶಗಳ ಪೂರೈಕೆಗಾಗಿ ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಕಬ್ಬಿನ ಗಾತ್ರ ಮತ್ತು ಗುಣಮಟ್ಟ ಉತ್ತಮವಾಗಿದೆ. ರಾಸಾಯನಿಕ ಕೃಷಿಯಲ್ಲಿ 30 ಟನ್ ಕಬ್ಬು ಬಂದಿದ್ದರೆ, ಸಾವಯವ ಪದ್ಧತಿಯಲ್ಲಿ 60 ಟನ್ ಬರುತ್ತದೆ ಎಂದು ರೈತ ಸಿದ್ದು ಹೇಳುತ್ತಾರೆ. ಇವರನ್ನು ನೋಡಿ ರೈತರು ಅರ್ಥ ಮಾಡಿಕೊಳ್ಳಬಹುದು ಸಾವಯವ ಕೃಷಿಯಲ್ಲಿ ಮೊದಲ ಬೆಳೆಯಿಂದಲೇ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯಬಹುದು.
https://www.youtube.com/watch?v=Jb692swz3x8&t=89s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #lowinvestment #sugarcane #organicsugarcane #sugar #organicsugar
Blog