ಕಬ್ಬು ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯುವ ಆತುರದಲ್ಲಿ ಮಣ್ಣಿಗೆ ರಾಸಾಯನಿಕ ಗೊಬ್ಬರ ಬಳಸಿ ಹೆಚ್ಚು ಅಪಾಯ ತಂದು ಕೊಳ್ಳುತ್ತೇವೆ. ಅಲ್ಲದೆ ಕಬ್ಬಿನ ರವದಿಯನ್ನು ಹೊಲದಲ್ಲಿಯೇ ಸುಟ್ಟು ಅನೇಕ ರೀತಿಯಾದ ರೋಗಗಳಿಗೆ, ಕಷ್ಟಗಳಿಗೆ ದಾರಿ ಮಾಡಿಕೊಡುತ್ತಿದ್ದೇವೆ. ರವದಿ ಸುಡುವುದನ್ನು, ರಾಸಾಯನಿಕ ಗೊಬ್ಬರ ಬಳಸುವುದನ್ನು ಬಿಟ್ಟು ಮಣ್ಣಿನ ಫಲವತ್ತತೆ ಉಳಿಸಿಕೊಂಡು ಕಬ್ಬಿನ ರವದಿಯನ್ನೇ ಗೊಬ್ಬರವಾಗಿ ಮಾಡಿಕೊಂಡು ಮಣ್ಣಿಗೆ ಬಳಸುವುದು ಒಳ್ಳೆಯದು.
ಕಬ್ಬಿನ ತ್ಯಾಜ್ಯವಾದ ರವದಿಯನ್ನು ಸುಡುವುದರಿಂದ ಮಣ್ಣಿನ ಮೇಲ್ಪದರದ ಜೀವಾಣು ನಾಶವಾಗುತ್ತದೆ. ಉಳಿದ ಕುಳೆಗೂ ಹಾನಿಯಾಗಿ, ನೀರಿನ ಬಳಕೆ ಹೆಚ್ಚುತ್ತದೆ. ಈ ರೀತಿ ಮಾಡುವ ಬದಲು ರವದಿಯನ್ನು ಮಣ್ಣಿನಲ್ಲಿ ಬೆರೆಸಿ ಫಲವತ್ತತೆ ಹೆಚ್ಚು ಮಾಡಬಹುದು. ಈ ರವದಿಯಿಂದ ಮಣ್ಣಿನ ತೇವಾಂಶ ಆವಿಯಾಗುದನ್ನು ತಡೆಗಟ್ಟಬಹುದು. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಚಟುವಟಿಕೆ ಹೆಚ್ಚಾಗಿ ನೀರು ಇಂಗುವಿಕೆ, ಇಂಗಾಲದ ಪ್ರಮಾಣ ಮತ್ತು ಇಳುವರಿ ಹೆಚ್ಚಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗುವುದು.
ಕುಳೆ ಕಬ್ಬಿನಲ್ಲಿ ಬಿದ್ದ ರವದಿಯನ್ನು ಸಾಲು ಬಿಟ್ಟು ಸಾಲಿಗೆ ಹಾಕಿ, ಹೆಚ್ಚಾದ ರವದಿಯನ್ನು ಕಾಂಪೋಸ್ಟ್ ಮಾಡಲು ಉಪಯೋಗಿಸಬೇಕು. ಸಾಲಿನಲ್ಲಿ ಹಾಕಿದ ರವದಿಯ ಮೇಲೆ ಸಾವಯವ ಕೃಷಿ ಪದ್ಧತಿಯಲ್ಲಿ ಡಿಕಂಪೋಸ್ ಮಾಡಿಕೊಳ್ಳುವುದರಿಂದ ಮಣ್ಣಿಗೆ ಉಚಿತ ಗೊಬ್ಬರ ನೀಡಿದಂತಾಗುತ್ತದೆ. ಒಂದು ಎಕರೆಯಲ್ಲಿ ಕಟಾವಾದ ಕಬ್ಬಿನಿಂದ ಸುಮಾರು 4 ರಿಂದ 6 ಟನ್ ರವದಿ ದೊರೆಯುತ್ತದೆ. ಒಂದು ಟನ್ ರವದಿಯಲ್ಲಿ 3.5 ಕೆ.ಜಿ ಸಾರಜನಕ, 1.3 ರಂಜಕ ಮತ್ತು 6.5 ಕೆ.ಜಿ ಪೋಟ್ಯಾಷ್ ಇರುತ್ತದೆ. ಇದು ಭೂಮಿಗೆ ತುಂಬಾ ಉಪಯುಕ್ತ.
ಅದೇ ರೀತಿ ಗೋಕಾಕ್ ತಾಲೂಕಿನ ಕೃಷಿಕ ಕೃಷ್ಣ ಅವರು ಸಾವಯವ ಕೃಷಿಗೆ ಬಂದಮೇಲೆ ರವದಿಯನ್ನು ಸುಡುವುದು ನಿಲ್ಲಿಸಿ, ಗೊಬ್ಬರವಾಗಿ ಬಳಕೆ ಮಾಡಿಕೊಂಡು ಜತೆಗೆ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿರುವುರಿಂದ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಯಾವುದೆ ರೋಗ, ಕೀಟಗಳ ತೊಂದರೆ ಇಲ್ಲದೆ ಆರೋಗ್ಯಕರವಾದ ಬೆಳೆ ಪಡೆಯುತ್ತಿದ್ದಾರೆ.
https://www.youtube.com/watch?v=tY7F_WcrZVk&t=90s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್