ಬೇಸಿಗೆ ಅವಧಿಯಲ್ಲಿ ಕಬ್ಬಿನ ಬೆಳೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಇರುವ ಅಥವಾ ಲಭ್ಯವಾಗುವ ನೀರಿನ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಬರದ ಸ್ಥಿತಿ ನಿರ್ವಹಣೆ ಮಾಡಿ ಉತ್ತಮ ಇಳುವರಿ ಪಡೆಯಬಹುದಾಗಿದೆ.
ದಿನ ಕಳೆದಂತೆ ವಾತಾವರಣದ ಉಷ್ಣತೆ ಹೆಚ್ಚುತ್ತಿದೆ. ವಾತಾವರಣ ಸಮತೋಲನ ಕಳೆದುಕೊಳ್ಳುತ್ತಿದೆ. ಇದರಿಂದ ಕೃಷಿಯ ಮೇಲೆ ನೇರ ದುಷ್ಪರಿಣಾಮ ಉಂಟಾಗಿ, ಇಳುವರಿ ಕಡಿಮೆಯಾಗುತ್ತಿದೆ. ಉಷ್ಣತೆ ಏರಲು ಪ್ರಮುಖ ಕಾರಣವೇನೆಂದರೆ ಅರಣ್ಯನಾಶ, ನಗರೀಕರಣದಿಂದ ಕೃಷಿಯೇತರ ಭೂಮಿಯ ಪ್ರಮಾಣ ಏರಿಕೆ, ಸಕಾಲಕ್ಕೆ ಮಳೆ ಬರದೇ ಇರುವುದು, ಮಳೆ ಬಂದರೂ ಸಹ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು, ಅವೈಜ್ಞಾನಿಕ ರೀತಿಯಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ ಮತ್ತು ಮಳೆ ನೀರಿನ ಕೊಯ್ಲು ಪದ್ಧತಿಯ ಅಸಮರ್ಪಕ ಅಳವಡಿಕೆಗಳಿಂದ ನದಿ, ಕೆರೆ, ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗಿ, ಅದರಲ್ಲೂ ಬೇಸಿಗೆ ಕಾಲದಲ್ಲಿ ಕಬ್ಬು ಬೆಳೆಯಲ್ಲಿ ನೀರು ನಿರ್ವಹಣೆ ರೈತರಿಗೆ ಒಂದು ಸವಾಲಾಗಿ ಪರಿಣಮಿಸಿದೆ.
ಹೀಗಾಗಿ ಕೃಷಿಕರಿಗೆ ಸಾವಯವ ಕೃಷಿ ಎಂಬುವುದು ತುಂಬಾ ಸಹಾಯಕ ಅಂತಾ ಹೇಳಿದರೆ ತಪ್ಪಾಗಲಾರದು. ಭೂಮಿ ಫಲವತ್ತತೆ ಚೆನ್ನಾಗಿದೆ ಎಂದಾದರೆ ವಾತಾವರಣ ಹೆಚ್ಚು ಕಡಿಮೆ ಆದರೂ ಬೆಳೆಯಲ್ಲಿ ಅಧಿಕ ಹಾನಿಯನ್ನು ತಡೆಗಟ್ಟಿ, ಬೆಳೆ ಉಳಿಸಿಕೊಳ್ಳಲು ಸಹಾಯಕವಾಗುತ್ತದೆ. ಇದಕ್ಕೆ ಉದಾಹರಣೆಯಂತೆ ಅಥಣಿ ತಾಲೂಕಿನ ಸಿದ್ದೇವಾಡಿ ಗ್ರಾಮದ ಕೃಷಿಕರಾದ ಶಿವಾಜಿಯವರು 2 ವರ್ಷದಿಂದ ಸಂಪೂರ್ಣ ಸಾವಯವ ಕೃಷಿ ಪದ್ಧತಿ. ಕಬ್ಬು ಬೆಳೆಯನ್ನು ಬೆಳೆಯುತ್ತಿರುವ ಕೃಷಿಕ ಶಿವಾಜಿಯವರು, ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಸಾವಯವ ಕೃಷಿಕರಿಗೆ ವರದಾನ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಡುವ ಅಕ್ಷಯಪಾತ್ರೆ. 2 ವರ್ಷದಿಂದ ಡಾ.ಸಾಯಿಲ್ ಗೊಬ್ಬರ ಬಳಸುತ್ತಿರುವ ಕೃಷಿಕ ತಮ್ಮ ಕೃಷಿ ಭೂಮಿಯನ್ನು ಫಲವತ್ತಾಗಿಸಿಕೊಂಡು ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಕಳೆದ ಬಾರಿ ಕಬ್ಬಿನಲ್ಲಿ 70 ಟನ್ ಇಳುವರಿ ಪಡೆದಿದ್ದು, ಈ ಬಾರಿ ಕೂಳೆ ಕಬ್ಬಿನಲ್ಲೂ 80 ರಿಂದ 90 ಟನ್ ಇಳುವರಿ ಪಡೆಯುವ ನಿರೀಕ್ಷೆಯನ್ನು ಕಬ್ಬು ಬೆಳೆ ತಂದುಕೊಟ್ಟಿದೆ. ಇಂತಹ ಕಬ್ಬು ಬೆಳೆಗೆ ರೈತ ಮಾಡಿದ ಖರ್ಚು ಹೆಚ್ಚೇನು ಇಲ್ಲ. ಕೇವಲ 2500 ರೂ. ಗಳು ಮಾತ್ರ.
https://www.youtube.com/watch?v=jBs2-pO_goM&t=314s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್