Blog

ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಸಿಗುವುದು ಬಹಳ ಕಷ್ಟ. ಕಲಬೆರಕೆ ಗೊಬ್ಬರಗಳನ್ನು ಕೊಟ್ಟು ಮೋಸ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಅದರಲ್ಲೂ ಕೊಟ್ಟಿಗೆ ಗೊಬ್ಬರ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಸ್ವತಃ ಗೊಬ್ಬರ ತಯಾರಿಸಿಕೊಳ್ಳುವುದು ರೈತರಿಗೆ ಲಾಭಕರ. ಇಲ್ಲೊಬ್ಬ ರೈತ ಹಸಿರೆಲೆ ಗೊಬ್ಬರ ಬೆಳೆದಿದ್ದಾರೆ. ದರಿಂದ ಆಗುವ ಲಾಭಗಳೇನು? ಬನ್ನಿ ತಿಳಿಯೋಣ.

 

       ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ರೈತ ನಾರಾಯಣಸ್ವಾಮಿ ಕಳೆದ 10 ವರ್ಷದಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದು, ಸೇವಂತಿಗೆ ಹೂವನ್ನು ಬೆಳೆಯುತ್ತಿದ್ದಾರೆ. ಮಣ್ಣು ಫಲವತ್ತಾಗಿರುವ ಮಹತ್ವವನ್ನು ತಿಳಿದಿರುವ ಇವರು, ಹಸಿರೆಲೆ ಗೊಬ್ಬರವನ್ನು ತಯಾರಿಸಲು 1 ಎಕರೆ ಜಮೀನಿನಲ್ಲಿ ಡಯಾಂಚ ಬೆಳೆದಿದ್ದಾರೆ. ಕೊಟ್ಟಿಗೆ ಗೊಬ್ಬರ 1 ಲೋಡ್ ಗೆ 5,300 ರೂ. ಇದೆ. ಇದರಿಂದ ಎಕರೆಗೆ 40-50 ಸಾವಿರ ಖರ್ಚು ಬರುತ್ತದೆ. ಹಾಗಾಗಿ ಹಸಿರೆಲೆ ಗೊಬ್ಬರ ಬೆಳೆಯುತ್ತಿರುವುದಾಗಿ ಹೇಳುತ್ತಾರೆ. ಕೇವಲ 2000 ಖರ್ಚಿನಲ್ಲಿ 1 ಎಕರೆಯಲ್ಲಿ ಸೆಣಬು ಬೆಳೆಯಬಹುದು ಎನ್ನುತ್ತಾರೆ ರೈತ ನಾರಾಯಣಸ್ವಾಮಿ.

  

 

ಹಸಿರೆಲೆ ಗೊಬ್ಬರ

       ಭೌತಿಕ ರಚನೆ ಮತ್ತು ಫಲವತ್ತತೆಯನ್ನು ಸುಧಾರಿಸುವ ಉದ್ದೇಶದಿಂದ ಮಣ್ಣಿನಲ್ಲಿ ಸೇರಿಸಲು, ಹೂಬಿಡುವ ಸಮಯದಲ್ಲಿ ಉಳುಮೆ ಮಾಡಲು ತ್ವರಿತವಾಗಿ ಬೆಳೆಯುವ ಬೆಳೆಯನ್ನು ಹಸಿರೆಲೆ ಗೊಬ್ಬರ ಎಂದು ಕರೆಯಲಾಗುತ್ತದೆ.

 

ಹಸಿರೆಲೆ ಗೊಬ್ಬರದ ಉಪಯೋಗಗಳು

 

- ಮಣ್ಣಿನ ಸಾವಯವ ವಸ್ತು ಮತ್ತು ಮಣ್ಣಿನ ರಚನೆಯನ್ನು ಉತ್ತಮಗೊಳಿಸುತ್ತದೆ.

- ಮುಂಬರುವ ಬೆಳೆಗೆ ಸಾರಜನಕ ಮತ್ತು ಇತರ ಪೋಷಕಾಂಶಗಳನ್ನು ಪೂರೈಸುತ್ತದೆ.

- ಮಣ್ಣಿನ ರಚನೆಗೆ ಹಾನಿಯಾಗದಂತೆ ಭೂಮಿಗೆ ಹೊದಿಕೆಯಾಗಿರುತ್ತದೆ.

- ಮಲ್ಚಿಂಗ್ ಆಗಿ ಉಪಯೊಗಿಸಬಹುದು.

- ಕಳೆಗಳನ್ನು ಹತ್ತಿಕ್ಕುವುದು ಮತ್ತು ಕಳೆ ಮೊಳಕೆ ಬೆಳವಣಿಗೆಯನ್ನು ತಡೆಯುತ್ತದೆ.

 

       ಹಸಿರೆಲೆ ಗೊಬ್ಬರಕ್ಕಾಗಿ ಡಯಾಂಚವಲ್ಲದೇ ಸೆಣಬು, ಗೊಬ್ಬರದ ಗಿಡ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಬಹುದು.ಇದರಿಂದ ಮಣ್ಣಿನ ಫಲವತ್ತತೆಗೆ ಬೇಕಾದ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಿ, ಪೋಷಕಾಂಶಗಳು ಪೂರೈಕೆಯಾಗುತ್ತವೆ. ಹಸಿರೆಲೆ ಗೊಬ್ಬರಗಳಿಂದ ಮಣ್ಣಿನ ಜೈವಿಕ ಪರಿಸರ ಉತ್ತಮವಾಗುತ್ತದೆ.

 

ಹಸಿರೆಲೆ ಗೊಬ್ಬರದ ಬಗ್ಗೆ ಹೆಚ್ಚು ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=gGqMaO9kdKw

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #greenmanure  #dhaincha  #dicotyledons  #manure  #greenmanurecrops  #greenmanurecovercrops  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing