Blog

       ಬಹುತೇಕ ರೈತರು ಉಳುಮೆ ಮಾಡುವುದನ್ನೇ ಭೂಮಿ ಸಿದ್ಧತೆ ಎಂದುಕೊಂಡಿದ್ದಾರೆ. ಆದರೆ ಇದು ಸಿದ್ಧತೆಯ ಒಂದು ಭಾಗ ಅಷ್ಟೇ. ಮಣ್ಣು ಫಲವತ್ತಾಗಿದ್ದರೆ ಮಾತ್ರ ಬೆಳೆ ಬೆಳೆಯಲು ಯೋಗ್ಯವಾಗಿರುತ್ತದೆ. ಸಾವಯವ ಇಂಗಾಲ ಹೆಚ್ಚಿದ್ದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಇದನ್ನೆಲ್ಲಾ ಬೆಳೆ ಬೆಳೆಯುವ ಮೊದಲು ಉಳುಮೆ ಜತೆ ಮಾಡಿದರೆ ಮಣ್ಣು ಫಲವತ್ತಾಗುತ್ತದೆ. ಇದರ ಬಗ್ಗೆ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ.ಆರ್ ಹುಲ್ಲುನಾಚೇಗೌಡರು ವಿವರವಾಗಿ ತಿಳಿಸಿದ್ದಾರೆ.

 

       ಬಿತ್ತನೆಗೂ ಮುಂಚೆ ಉಳುಮೆ ಮಾಡುವುದು ಮುಖ್ಯ ಮತ್ತು ಸಾಮಾನ್ಯ. ಆದರೆ ಕೇವಲ ಉಳುಮೆ ಸಾಕಾಗುವುದಿಲ್ಲ. ಇದರ ಜತೆ ಮಣ್ಣನ್ನು ಪೋಷಕಾಂಶಗಳಿಂದ ಅಣಿಗೊಳಿಸಬೇಕು. ಇದನ್ನು ಮಾಡಲು ಹಸಿರು ತ್ಯಾಜ್ಯಗಳನ್ನು ಕೊಡುವುದು ಮುಖ್ಯ. ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಯುವುದರಿಂದ ನೈಸರ್ಗಿಕವಾಗಿ ಸಾರಜನಕ ಸಿಗುವಂತೆ ಮಾಡಬಹುದು. ಇವು ಲೆಗುಮಿನಸ್ ಸಸ್ಯಗಳಾದ್ದರಿಂದ ಸಾರಜನಕ ಸ್ಥಿರೀಕರಣ ಮಾಡುತ್ತವೆ. ಸೆಣಬು, ಡಯಾಂಚದಂತಹ ಬೆಳೆಗಳನ್ನು ಬೆಳೆದು ಹೂಬಿಡುವ ಸಮಯದಲ್ಲಿ ಕತ್ತರಿಸಿ ಮಣ್ಣಿಗೆ ಮಲ್ಚ್ ಮಾಡಬೇಕು. ಈ ಹಸಿರು ತ್ಯಾಜ್ಯಗಳು ಕಳೆತು ಪೋಷಕಾಂಶಗಳು ಮಣ್ಣಿಗೆ ದೊರೆಯುತ್ತವೆ.

 

       ಈ ರೀತಿ ಸಾವಯವ ತ್ಯಾಜ್ಯಗಳನ್ನು ಮಣ್ಣಿನಲ್ಲಿ ಹೆಚ್ಚಿಸುವುದರಿಂದ ಜೈವಿಕ ಪರಿಸರ ಅಭಿವೃದ್ಧಿಗೊಂಡು ಮಣ್ಣಿನ ಸೂಕ್ಷ್ಮಜೀವಿಗಳು ಹೆಚ್ಚುತ್ತವೆ. ಇದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಲಭ್ಯತೆ ಹೆಚ್ಚುತ್ತದೆ. ವರ್ಷಕ್ಕೊಮ್ಮೆಯಾದರೂ ಈ ರೀತಿ ಹಸಿರೆಲೆ ಗೊಬ್ಬರಗಳನ್ನು ಬೆಳೆದು ಮಣ್ಣಿಗೆ ನೀಡಬೇಕು. ಇದರಿಂದ ಹೆಚ್ಚು ಖರ್ಚಿಲ್ಲದೇ ರೈತರು ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಮಣ್ಣು ಫಲವತ್ತಾದರೆ ಹೊರಗಿನಿಂದ ಪೋಷಕಾಂಶಗಳನ್ನು ಕೊಡುವ ಪ್ರಮೇಯ ಬರುವುದಿಲ್ಲ. ಸಾವಯವ ಕೃಷಿಯಿಂದ ರೋಗಗಳು ಕಡಿಮೆಯಾಗುತ್ತವೆ. ರಾಸಾಯನಿಕಗಳ ಬಳಕೆಯಿಂದ ಮಣ್ಣು ಹಾಳಾಗುತ್ತದೆ ಮತ್ತು ಪರಿಸರಕ್ಕೂ ನಷ್ಟ. ಸಾವಯವ ಕೃಷಿಗೆ ಒತ್ತು ನೀಡಿ, ಖರ್ಚು ಕಡಿಮೆ ಮಾಡಿ ಮತ್ತು ಉತ್ತಮ ಇಳುವರಿ ಪಡೆಯಿರಿ ಎಂಬುದು ಡಾ.ಹುಲ್ಲುನಾಚೆಗೌಡರ ಪ್ರಾಮಾಣಿಕ ಸಲಹೆ.

 

https://www.youtube.com/watch?v=TxAgqILnY6A&list=PLuN9VcGQAtK7oisEShNo44mvl_N89CcKy&index=10

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

 

#microbitv #microbiagrotech #agriculturalnewschannel #agrinews #Drsoil #doctorsoil #drsoilnearme

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #legumes  #greenmanure  #mulching  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing