ಭಾರತದಲ್ಲಿ ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ ಎಂದರೆ ಅದು ಬಾಳೆ. ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆ ಹಣ್ಣಿನಲ್ಲಿ ಕೆಲ ಖನಿಜಾಂಶಗಳು, ಜೀವಸತ್ವಗಳ ಪ್ರಮಾಣ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಇದು ತುಂಬಾ ಒಳಿತು. ಬಾಳೆ ಬೆಳೆಯನ್ನು ಬೆಳೆಯುವಾಗ ಕೃಷಿಕರು ಅದರದೆ ಆದ ಕೆಲವೊಂದು ನಿಯಮಗಳನ್ನು ಪಾಲಿಸಿ ಬೆಳೆದರೆ ಉತ್ತಮ ಇಳುವರಿಗೆ ಸಹಾಯಕ.
ಬಾಳೆಯಲ್ಲಿ 5೦ಕ್ಕೂ ಹೆಚ್ಚು ತಳಿಗಳನ್ನು ನಾವು ನೋಡಬಹುದು, ಮಾರ್ಕೆಟ್ ನಲ್ಲಿ ಯಾವುದೇ ಬೆಳೆಯ ಬೆಲೆ ಕುಸಿತ ಕಂಡರೂ, ಹಣ್ಣಿನ ಬೆಳೆಗಳಿಗೆ ಕನಿಷ್ಠ ಬೆಲೆ ಇದ್ದೇ ಇರುತ್ತದೆ. ಅದರಲ್ಲೂ ಬಾಳೆ ಹಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದನ್ನು ನಾವು ಕಂಡಿರುತ್ತೇವೆ.
ಬಾಳೆಯನ್ನು ನಾವು ಅಂತರ ಬೆಳೆಯಾಗಿ ಅಥವಾ ಮುಖ್ಯ ಬೆಳೆಯಾಗಿ ಬೆಳೆಯಬಹುದು, ಅಡಿಕೆಯಲ್ಲಿ ಹೆಚ್ಚಾಗಿ ಅಂತರ ಬೆಳೆಯಾಗಿ ಬಾಳೆಯನ್ನು ನೋಡುತ್ತೇವೆ, ಬಾಳೆಯಲ್ಲಿ ಹೆಚ್ಚಿನ ಕೃಷಿ ತ್ಯಾಜ್ಯಗಳು ಒದಗಿ ಬರುವುದರಿಂದ ಭೂಮಿಗೆ ಹೆಚ್ಚಿನ ಗೊಬ್ಬರ ಸಿಕ್ಕಂತಾಗುತ್ತದೆ.
ಅದರAತೆ ಒಂದು ಬಾಳೆ ತೋಟಕ್ಕೆ ಭೇಟಿ ಕೊಟ್ಟ ನಮ್ಮ ಮೈಕ್ರೋಬಿ ತಂಡ, ತೋಟದಲ್ಲಿ ಕೃಷಿಕರೊಂದಿಗೆ ಬಾಳೆ ತೋಟ ಹೇಗಿರಬೇಕು? ಮಣ್ಣಿನ ಫಲವತ್ತತೆ ಹೇಗಿರಬೇಕು? ಕೃಷಿ ಭೂಮಿಗೆ ಗೊಬ್ಬರ ಹೇಗೆ ನೀಡಬೇಕೆಂಬ ಮಾಹಿತಿಯನ್ನು ತಿಳಿಸಿಕೊಟ್ಟಿತು.
ಬಾಳೆ ತೋಟ ಹೇಗಿದ್ದರೆ ಇಳುವರಿ ಹೆಚ್ಚುತ್ತದೆ ಎಂಬುದನ್ನು ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟು, ಕಡಿಮೆ ಖರ್ಚಿನಲ್ಲಿ ಬಾಳೆ ಇಳುವರಿ ಹೆಚ್ಚಿಸಲು ಸಾಧ್ಯ ಎಂಬ ಸತ್ಯವನ್ನು ಮನವರಿಕೆ ಮಾಡಿದ್ದಾರೆ.
https://www.youtube.com/watch?v=zHanUl5SWlg
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ