ಶಿರಾ: ಭಾರತದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಎಷ್ಟೋ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನಾಧಾರವಾಗಿದೆ. ಅಡಿಕೆಗೆ ರೇಟು ಸಿಕ್ಕರೆ ಮಾತ್ರ ರೈತ ಲಕ್ಷ ಲಕ್ಷ ಹಣ ಎಣಿಸುವುದರಲ್ಲಿ ಅನುಮಾನವಿಲ್ಲ. ಆದರೆ ಅಡಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಿ ಮಾಡ ಬೇಕಾದ ವೈಜ್ಞಾನಿಕ ಕೃಷಿ ಮಾಹಿತಿಗಳು ತುಂಬಾ ಇದೆ. ಅಡಿಕೆಯಲ್ಲಿ ಹೆಚ್ಚಾಗಿ ಬೆಳೆಗಳಿಗೆ ಆವರಿಸಿಕೊಳ್ಳುವ ಹರಳು ಉದುರುವ ಸಮಸ್ಯೆ, ಹಂಡೊಡಕದ ಸಮಸ್ಯೆ, ಅಣಬೆ ರೋಗದ ಸಮಸ್ಯೆ, ಸುಳಿರೋಗ, ಹೀಗೆ ಹಲವಾರು ತೊಂದರೆಗಳಿರುತ್ತವೆ. ಇವೆಲ್ಲಾ ರೋಗಗಳು ಬೆಳೆಗಳಿಗೆ ಆವರಿಸಿಕೊಳ್ಳಬಾರದು ಎಂದರೆ ರೈತ ತನ್ನ ಕೃಷಿಯಲ್ಲಿ ಬದಲಾವಣೆ ಕಾಣಬೇಕು. ಅದುವೇ ವೈಜ್ಞಾನಿಕ ಕೃಷಿ ಸಾವಯವ ಕೃಷಿ.
ಸಾವಯವ ಕೃಷಿಯಲ್ಲಿ ಗೊಬ್ಬರದ ನಿರ್ವಹಣೆ ಮಾಡುತ್ತಾ, ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಕಳೆನಾಶಕ ಬಳಸದೆ, ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಾ, ನೀರಿನ ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡುತ್ತಾ, ಯಾವ ಗೊಬ್ಬರದ ಬಳಕೆ ಎಷ್ಟು ಎಂಬ ಮಾಹಿತಿ ತಿಳಿದು ಮಾಡಿದರೆ ಕೃಷಿಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
ಶಿರಾ ತಾಲೂಕಿನ ಕೃಷಿಕ ಪ್ರಸನ್ನ ಕುಮಾರ್, ಕಳೆದ ವರ್ಷದಿಂದ ಸಾವಯವ ಕೃಷಿಗೆ ಬದಲಾಗಿ ತಮ್ಮ ಅಡಿಕೆ ತೋಟವನ್ನು ಕಾಪಾಡಿಕೊಂಡಿದ್ದಾರೆ. ರಾಸಾಯನಿಕ ಬಳಸುವಾಗ ಎರೆಹುಳುಗಳೇ ಕಾಣದ ಇವರ ತೋಟದಲ್ಲಿ ಈಗ, 1 ಚದರ ಅಡಿಯಲ್ಲಿ 15 ಎರೆಹುಳುಗಳು ಸಿಗುತ್ತವೆ. ಜತೆಗೆ ಹರಳು ಉದುರುವಿಕೆ, ಹಂಡೊಡಕ ಸೇರಿದಂತೆ ಯಾವುದೇ ರೋಗಗಳ ಸಮಸ್ಯೆ ಇಲ್ಲ. ಹೊಂಬಾಳೆ ಉದ್ದ ಬರುವುದರ ಜತೆಗೆ ಕಾಯಿಗಳ ಸೈಜ್ ಹೆಚ್ಚುತ್ತಿದೆ.
https://www.youtube.com/watch?v=xznM1qzdlvE&t=45s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್