ಬೀನ್ಸ್ ಬೆಳೆಯಲ್ಲಿ ಲಾಭ ಕಾಣುತ್ತಿರವ ಕೃಷಿಕ ತಿಲಕ್ ಅವರು, ರಾಸಾಯನಿಕ ಕೃಷಿ ನಿಲ್ಲಿಸಿ ಸಾವಯವ ಕೃಷಿಗೆ ಕಾಲಿಟ್ಟರು. ಸಾವಯವ ಕೃಷಿಯಲ್ಲಿ ಇವರು ಆಯ್ಕೆ ಮಾಡಿಕೊಂಡ ಡಾ.ಸಾಯಿಲ್ ಜೈವಿಕ ಗೊಬ್ಬರಗಳು ರೈತನ ಕನಸನ್ನು ನನಸು ಮಾಡಿ, ಬೀನ್ಸ್ ಬೆಳೆಯಲ್ಲಿ ಲಾಭ ತಂದುಕೊಟ್ಟಿವೆ.
ತಿಲಕ್ ಅವರಿಗೆ ಇದು ಹೊಸ ಅನುಭವ. ಪ್ರಾರಂಭದಲ್ಲಿ ಒಳಗೊಳಗೇ ಅಂಜಿಕೆ ಇತ್ತು. ಉಳುಮೆ ಕ್ರಮ, ಬೆಳೆಯುವ ಪದ್ಧತಿ, ನಿರ್ವಹಣೆ, ಬಾಧಿಸುವ ರೋಗಗಳು.. ಇತ್ಯಾದಿಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಬೀನ್ಸ್ ಬೀಜ ತಂದು ಡಾ.ಸಾಯಿಲ್ ಬೀಜೋಪಚಾರದಿಂದ ಬಿತ್ತನೆ ಮಾಡಿದರು. ಸಾಲಿನಿಂದ ಸಾಲಿಗೆ, ಬಳ್ಳಿಯಿಂದ ಬಳ್ಳಿಗೆ ವೈಜ್ಞಾನಿಕವಾಗಿ ಅಂತರ ಕಾಯ್ದುಕೊಂಡಿದ್ದರಿಂದ ಬೆಳೆಗೆ ಗಾಳಿ, ಬೆಳಕಿನ ಕೊರತೆಯಾಗದೆ, ರೋಗಗಳು ಸಹ ಅಷ್ಟಾಗಿ ಬಾಧಿಸಲಿಲ್ಲ. ಇದನ್ನೆಲ್ಲ ಮೈಕ್ರೋಬಿ ಪ್ರತಿನಿಧಿಯಿಂದ ಮಾಹಿತಿ ಪಡೆದು, ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ ಬಳಸುತ್ತಿದ್ದಿದ್ದರಿಂದ ಹುರಳಿ ಕಾಯಿಗಳು ಬಳ್ಳಿಗಳಿಗೆ ಭಾರ ಎನಿಸುವಷ್ಟು ಜೋರಾಗಿ ಬಂದಿದೆ. ಅಷ್ಟರ ಮಟ್ಟಿಗೆ ಇಳುವರಿ, ತೂಕ ಹೆಚ್ಚಿದೆ. ಈಗ ತೋಟವೆಲ್ಲಾ ಹಸಿರು ಚಪ್ಪರದಂತಿದೆ. ಒಂದೂವರೆ ತಿಂಗಳಲ್ಲಿ ಬೀನ್ಸ್ ಫಲ ಕೊಡಲು ಆರಂಭಿಸಿ ಬಳ್ಳಿಯಲ್ಲಿ ಎಲೆಗಳಿಗಿಂತ ಕಾಯಿಗಳೇ ಹೆಚ್ಚಾಗಿವೆ.
https://www.youtube.com/watch?v=giTEQp0QwHs&t=104s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್