Blog

ಕೃಷಿಯಲ್ಲಿ ಲಾಭಗಳಿಸಲು ಕೃಷಿಯನ್ನು ಉದ್ದಿಮೆಯಾಗಿ ನೋಡಬೇಕು. ಲಾಭ-ನಷ್ಟಗಳ ಲೆಕ್ಕಾಚಾರ ಹಾಕಬೇಕು. ಪ್ರತಿಯೊಬ್ಬ ರೈತನೂ ಉದ್ಯಮಿಯಾಗಬೇಕು. ರೈತ ತಾನು ಬೆಳೆದ ಬೆಳೆಯನ್ನು ಉತ್ತಮ ಬೆಲೆ ಸಿಗುವ ಕಡೆ ಮಾರಾಟ ಮಾಡಬೇಕು. ಯಾವುದೇ ಬಿಸ್ನೆಸ್ ನಲ್ಲಿ ಲಾಭ ಹೆಚ್ಚಿಸಲು ಖರ್ಚು ಕಡಿಮೆ ಮಾಡಬೇಕಾಗುತ್ತದೆ. ನಿರ್ವಹಣೆಯ ಅಧ್ಯಯನ ಮಾಡಬೇಕಾಗುತ್ತದೆ.

 

       ಇಂದಿನ ದಿನಗಳಲ್ಲಿ ರೈತರು ಅಂಧರಂತೆ ರಾಸಾಯನಿಕ ಕೃಷಿ ಮಾಡುತ್ತಿದ್ದಾರೆ. ಧೀರ್ಘಕಾಲದಲ್ಲಿ ಅದರಿಂದಾಗುವ ನಷ್ಟಗಳ ಬಗ್ಗೆ ತಿಳಿಯದೇ ತಮ್ಮ ಕೈಯಾರೆ ಮಣ್ಣಿನ ಫಲವತ್ತತೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಫಲವತ್ತತೆ ಕ್ಷೀಣಿಸಿದ ಪರಿಣಾಮ ಇನ್ನೂ ಹೆಚ್ಚು ರಾಸಾಯನಿಕಗಳ ಬಳಕೆ ಅನಿವಾರ್ಯವಾಗಿದೆ. ಇದು ರೈತರನ್ನು ಸಾಲದ ಸುಳಿಗೆ ತಳ್ಳುತ್ತಿದೆ. ರಸಗೊಬ್ಬರಗಳ ಪರಿಸರಸ್ನೇಹಿ ಪರ್ಯಾಯ ಜೈವಿಕ ಗೊಬ್ಬರಗಳು. ಜೈವಿಕ ಗೊಬ್ಬರಗಳ ಬಳಕೆ ಮಣ್ಣಿನ ಸೂಕ್ಷ್ಮಾಣು ಜೀವಿಗಳನ್ನು ವೃದ್ಧಿಸಿ, ನೈಸರ್ಗಿಕವಾಗಿ ಪೋಷಕಾಂಶಗಳು ದೊರಕುವಂತೆ ಮಾಡುತ್ತವೆ. ಜೈವಿಕ ಗೊಬ್ಬರಗಳು ರಸಗೊಬ್ಬರಗಳಿಗಿಂತ ಕಡಿಮೆ ದರದಲ್ಲಿ ಸಿಗುವುದರಿಂದ ಕೃಷಿಯಲ್ಲಿ ಖರ್ಚು ಕಡಿಮೆಯಾಗುತ್ತದೆ.

 

ರಸಗೊಬ್ಬರಗಳ ಬೇಡಿಕೆ ಏರುತ್ತಿರುವುದರಿಂದ ಬೆಲೆಯೂ ಏರಿಕೆಯಾಗಿದೆ. ಇದಕ್ಕೆ ಹೋಲಿಸಿದರೆ ಜೈವಿಕ ಗೊಬ್ಬರಗಳು ಕಡಿಮೆ ದರದಲ್ಲಿ, ಎಕರೆಗೆ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ. ಇದಲ್ಲದೇ ಜೈವಿಕ ಗೊಬ್ಬರಗಳ ಬಳಕೆಯಿಂದ ಮಣ್ಣು ಮತ್ತು ಆಹಾರ ಎರಡೂ ವಿಷಮುಕ್ತವಾಗುತ್ತವೆ. ರೈತರು ಮತ್ತು ಜನರ ಆರೋಗ್ಯ ವೃದ್ಧಿಸುತ್ತದೆ.

 

       ಕಡಿಮೆ ಖರ್ಚು ಬರುವುದರಿಂದ ರೈತರು ಲಾಭದಲ್ಲಿ ಏರಿಕೆ ಕಾಣಬಹುದು. ಇದರ ಜೊತೆ ಮಾರುಕಟ್ಟೆ ಅಧ್ಯಯನ ಮತ್ತು ವಿವಿಧ ಬೆಳೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ತಮಗೆ ಅನುಕೂಲವಾದ ಮತ್ತು ಬೆಲೆ ಸಿಗುವ ಬೆಳೆಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬಹುದು.

 

ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://youtube.com/playlist?list=PLuN9VcGQAtK6PIM0r-95GXEbgMY1NptMX

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #fertilizers  #biofertilizers  #inflation  Blog
Home    |   About Us    |   Contact    |   
microbi.tv | Powered by Ocat Online Catalog - Web Promotion Service in India | Member of Ocat Platform