ಹೆಚ್ಚು ಇಳುವರಿ ಪಡೆಯಬೇಕು ಎಂಬುದು ಎಲ್ಲಾ ರೈತರ ಆಶಯ. ಇದು ಸಾಮಾನ್ಯ ಬಯಕೆ ಮತ್ತು ಖಂಡಿತಾ ತಪ್ಪಲ್ಲ. ಆದರೆ, ಇದನ್ನು ಲಾಭವಾಗಿ ಬಳಸಿಕೊಂಡಿದ್ದು ಮಾತ್ರ ರಾಸಾಯನಿಕ ಗೊಬ್ಬರ ಕಂಪನಿಗಳು. ರೈತರಿಗೆ ಹೆಚ್ಚು ಇಳುವರಿ ಆಸೆ ತೋರಿಸಿ, ರಾಸಾಯನಿಕ ಕೃಷಿ ಪದ್ಧತಿಗೆ ಬರುವಂತೆ ಮಾಡಿದವು. ಮಣ್ಣಿನ ಮಹತ್ವ ತಿಳಿಯದೇ ಯಥೇಚ್ಛ ರಾಸಾಯನಿಕಗಳ ಬಳಕೆಯಿಂದ ಕೃಷಿ ಸುಲಭವಾಯಿತು ಎಂದುಕೊಂಡ ರೈತರಿಗೆ ರಾಸಾಯನಿಕಗಳ ಅಪಾಯ ಈಗ ತಿಳಿಯುತ್ತಿದೆ.
ಎಂದೂ ಕಾಣದ ರೋಗಗಳು ಬೆಳೆಗಳಲ್ಲಿ ಕಾಣಿಸತೊಡಗಿವೆ. ರೋಗನಿರೋಧಕ ಶಕ್ತಿ ಕಳೆದುಕೊಂಡಿರುವ ಬೆಳೆಗಳು ರೋಗಗಳಿಂದ ನರಳುತ್ತಿವೆ. ಮಣ್ಣಿನ ಮಹತ್ವ ತಿಳಿಯದೆ ಫಲವತ್ತತೆ ಹಾಳು ಮಾಡಿ, ಈಗ ಎಲ್ಲಾ ಪೋಷಕಾಂಶಗಳನ್ನು ಕೃತಕವಾಗಿ ಕೊಡಲು ಹೋಗಿ, ಖರ್ಚು ಹೆಚ್ಚು ಮಾಡಿಕೊಂಡು ನರಳುತ್ತಿರುವುದು ರೈತರು. ಯಾರೂ ಮಾಡದ ಕೆಲಸವನ್ನು ಮೈಕ್ರೋಬಿ ರಾಜ್ಯದಾದ್ಯಂತ ಮಾಡುತ್ತಿದೆ. ರೈತರಿಗೆ ರಾಸಾಯನಿಕಗಳ ಆಪತ್ತುಗಳನ್ನು ತಿಳಿಸುತ್ತಾ ಸಾವಯವ ಕೃಷಿಯೆಡೆ ಕಾಲಿಡಲು ಪ್ರೇರೇಪಿಸುತ್ತಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ತಿಮ್ಲಾಪುರ ಗ್ರಾಮದ ಈ ರೈತರು ದಶಕಗಳಿಂದ ಅಡಿಕೆ ಬೆಳೆಗಾರರಾಗಿದ್ದಾರೆ. ಆದರೆ ಇತ್ತೀಚೆಗೆ ರೋಗಗಳು ಹೆಚ್ಚಾಗಿದ್ದು ಯಾವ ರಾಸಾಯನಿಕ ಔಷಧದಿಂದಲೂ ವಾಸಿಯಾಗದೇ ನಷ್ಟ ಅನುಭವಿಸುವಂತಾಗಿದೆ.
ಈ ಗ್ರಾಮದಲ್ಲಿ 4-5 ವರ್ಷಗಳಿಂದ ರೋಗಗಳು ಹೆಚ್ಚಾಗಿವೆ. ಕೊಳೆರೋಗ, ಬೇರುಹುಳು, ಹಂಡೊಡಕ, ಹರಳು ಉದುರುವಿಕೆ ಹೀಗೆ ರೋಗಗಳ ಸಂಖ್ಯೆ ಹೆಚ್ಚಿವೆ. ಹಾಗಾಗಿ ಈ ಗ್ರಾಮದ ರೈತರು ಸಾವಯವ ಕೃಷಿಯೆಡೆ ಕಾಲಿಡುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ ಮೇಲೆ ಹಾಳಾಗಿದ್ದ ಮರಗಳು ಚೇತರಿಕೆ ಕಂಡಿವೆ. ರೋಗ ಮತ್ತಿತರ ಸಮಸ್ಯೆಗಳಿಂದ ಚೇತರಿಕೆ ಕಂಡು ಹಸಿರಾಗಿವೆ ಎಂದು ರೈತರು ಹೇಳುತ್ತಾರೆ. ರಾಸಾಯನಿಕ ಬಳಕೆಯಿಂದ ಎರೆಹುಳುಗಳು ನಾಶವಾಗಿದ್ದವು. ಈಗ ಎಲ್ಲೆಲ್ಲೂ ಎರೆಹುಳುಗಳು ಹೆಚ್ಚಾಗಿವೆ.
ರೈತರು ಹಾಳಾಗಿರುವುದೆ ರಾಸಾಯನಿಕಗಳಿಂದ ಎನ್ನುವ ಈ ರೈತರು, ಸಾವಯವ ಕೃಷಿಯಲ್ಲಿ ಬೆಳಕು ಕಾಣಬಹುದು ಎನ್ನುತ್ತಾರೆ. ರಾಸಾಯನಿಕ ಗೊಬ್ಬರಗಳು ತಾತ್ಕಾಲಿಕ ಫಲಿತಾಂಶ ನೀಡುತ್ತವೆ. ಆದರೆ ಧೀರ್ಘಕಾಲದಲ್ಲಿ ಮಣ್ಣು ಮತ್ತು ಬೆಳೆಯನ್ನು ಹಾಳು ಮಾಡುತ್ತವೆ. ಮಣ್ಣಿನ ಸೂಕ್ಷ್ಮಜೀವಿಗಳ ಸಂಕುಲವನ್ನು ನಾಶಮಾಡಿ ಇನ್ನೂ ಹೆಚ್ಚು ಗೊಬ್ಬರ ಹಾಕುವ ಪ್ರಮೇಯ ತಂದಿಡುತ್ತದೆ. ಇದಲ್ಲದೇ ಆಹಾರವೂ ಕೂಡ ವಿಷಯುಕ್ತವಾಗುತ್ತಿದೆ. ಇದರಿಂದ ಜನರ ಆರೋಗ್ಯ ಕೆಡುತ್ತಿದೆ.
ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ…
https://www.youtube.com/watch?v=u1_63g7R7Dc&t=2s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #highyield #healthycrop #soilhealth #biofertilizers #lowinvestment #areca #rootgrub #nutdropping #rootrot #fruitrot
Blog