Blog

ತುಮಕೂರಿನ ರೈತರು ಯಾವುದೇ ರಾಸಾಯನಿಕ ಬಳಸದೇ, ಕಳೆಗಳನ್ನು ಕೀಳದೇ, ಉಳುಮೆ ಮಾಡದೇ, ಕಾರ್ಮಿಕರ ಸಹಾಯವಿಲ್ಲದೇ ವ್ಯವಸಾಯ ಮಾಡುತ್ತಿದ್ದಾರೆ. ಕೃಷಿಯಲ್ಲಿ ಖರ್ಚು ಕಡಿಮೆ ಮಾಡುವುದು ಹೇಗೆ? ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಸೆಡ್ಡು ಹೊಡೆದಿರುವ ಇವರ ಕೃಷಿಯಲ್ಲಿ ಲಾಭ ಹೆಚ್ಚು.

 

       ಆನಂದ್ ಕುಮಾರ್ ಮಾವತೂರು ಗ್ರಾಮದ ರೈತರು. ಕಳೆ ತೆಗೆಸಲು ಉಳುಮೆ ಮಾಡು ಎಂದು ಹೇಳುವ ತಂದೆಯ ಮಾತು ಕೇಳದೆ, ಕಳೆಯನ್ನು ಬೆಳೆಯಲು ಬಿಟ್ಟು ಗೊಬ್ಬರವಾಗಿ ಬಳಸುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು 6 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ ಮೇಲೆ ಮಣ್ಣು ಮೃದುವಾಗಿ, ಎರೆಹುಳುಗಳು ಹೆಚ್ಚಾಗಿವೆ. ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಹೆಚ್ಚಾಗಿವೆ. ಆದ್ದರಿಂದ ತ್ಯಾಜ್ಯಗಳ ಕಳೆಯುವಿಕೆ ಹೆಚ್ಚಾಗಿದೆ ಎನ್ನುತ್ತಾರೆ ರೈತ. ಇದರಿಂದ ಹೊಂಬಾಳೆ ಮತ್ತು ಅಡಿಕೆ ಗಾತ್ರ ಹೆಚ್ಚಾಗಿದೆ. ತೂಕ ಹೆಚ್ಚಾಗಿ ಕೆಳಗೆ ಬೀಳುತ್ತವೆ ಎನ್ನುತ್ತಾರೆ ಆನಂದ್.

 

ಒಂದು ಗೊಂಚಲಿನಲ್ಲಿ ಮೊದಲು 500-600 ಗ್ರಾಂ ಪೋಡಿ ಅಡಿಕೆಯಾಗುತ್ತಿತ್ತು. ಆದರೆ ಡಾ.ಸಾಯಿಲ್ ಬಳಕೆ ಶುರು ಮಾಡಿದ ನಂತರ 1.25 ಕೆ.ಜಿಯ ವರೆಗೂ ಪೋಡಿ ಅಡಿಕೆ ಬರುತ್ತಿದೆ. 1500 ಅಡಿಕೆ ಮರಗಳನ್ನು ಹೊಂದಿರುವ ಇವರು ಫಸಲನ್ನು 13 ಲಕ್ಷಕ್ಕೆ ಮಾರಿದ್ದಾರೆ. ಗೊಬ್ಬರಕ್ಕಾಗಿ ಖರ್ಚು ಮಾಡಿದ್ದು ಬಿಟ್ಟರೆ, ಇನ್ಯಾವುದೇ ಖರ್ಚಿಲ್ಲದೇ ನಿರ್ವಹಣೆ ಮಾಡಿದ್ದಾರೆ. ಬಾಳೆಯನ್ನೂ ಬೆಳೆದಿದ್ದು ಅದರಲ್ಲಿಯೂ ಲಾಭ ಪಡೆಯುತ್ತಿದ್ದಾರೆ. ಬಾಳೆಯಿಂದ ಬರುವ ಆದಾಯದಲ್ಲೇ ಅಡಿಕೆ ತೋಟಕ್ಕೆ ಬೇಕಾದ ಗೊಬ್ಬರ ಮತ್ತಿತರ ಖರ್ಚನ್ನು ಮಾಡುತ್ತಾರೆ. ಕಟಾವಿನ ನಂತರ ಬಾಳೆ ಗಿಡಗಳನ್ನು ರೈತ ಆನಂದ್ ಗೊಬ್ಬರವಾಗಿಯೂ ಬಳಸುತ್ತಾರೆ. ಇದರಿಂದ ಬಹುತೇಕ ಗೊಬ್ಬರದ ಬೇಡಿಕೆ ಪೂರೈಕೆಯಾಗುತ್ತದೆ ಮತ್ತು ಖರ್ಚು ಕಡಿಮೆಯಾಗುತ್ತದೆ.

       

ಕಳೆಗಳನ್ನು ಶತ್ರುಗಳಂತೆ ನೋಡದೇ ಸರಿಯಾಗಿ ನಿರ್ವಹಣೆ ಮಾಡಿದರೆ, ಆನಂದ್ ರಂತೆ ಖರ್ಚು ಕಡಿಮೆ ಮಾಡಬಹುದು. ತೋಟದಲ್ಲಿ ಸೃಷ್ಟಿಯಾಗುವ ತ್ಯಾಜ್ಯಗಳನ್ನು ಸಮರ್ಪಕವಾಗಿ ಬಳಸುವುದರಿಂದ ಗೊಬ್ಬರ ಅವಶ್ಯಕತೆ ನೀಗಿಸಿ ರೈತರು ಯಶಸ್ಸು ಗಳಿಸಬಹುದು.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=KSUmx-m8fZY

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #highyield  #healthycrop  #soilhealth  #biofertilizers  #lowinvestment  #areca  #banana  #weeds  



Blog




Home    |   About Us    |   Contact    |   
microbi.tv | Powered by Ocat Business Promotion Service in India