Blog

       ಕೃಷಿಯಲ್ಲಿ ಲಾಭ ಕಡಿಮೆಯಾಗುವುದಕ್ಕೆ ಒಂದು ಪ್ರಮುಖ ಕಾರಣ ಖರ್ಚು ಹೆಚ್ಚಾಗಿರುವುದು. ಉತ್ತಮ ಇಳುವರಿಗಾಗಿ ಬಳಸುವ ರಾಸಾಯನಿಕ ಗೊಬ್ಬರಗಳಿಗೆ ಹೆಚ್ಚು ಹಣ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಪಾರಾಗುವುದಕ್ಕೆ ರೈತರು ಸಾವಯವ ಮಾರ್ಗವನ್ನು ಅನುಸರಿಸುವ ಅಗತ್ಯತೆ ಹೆಚ್ಚಾಗಿದೆ. ಉಚಿತವಾಗಿ ಪೋಷಕಾಂಶಗಳನ್ನು ಒದಗಿಸಲು ಕೃಷಿ ತ್ಯಾಜ್ಯಗಳಾದ ಕಟಾವಿನ ನಂತರ ಮಿಕ್ಕ ಗಿಡಗಳು, ಸಿಪ್ಪೆಗಳನ್ನು ಕಳೆಸಿ ಮಣ್ಣಿಗೆ ನೀಡಬಹುದು. ಆದರೆ ನಮ್ಮ ರೈತರು ಇವುಗಳ ಮೌಲ್ಯ ಅರಿಯದೇ ಸುಟ್ಟುಹಾಕಿ ವಾಯು ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಉಚಿತವಾಗಿ ಸಿಗುವ ಪೋಷಕಾಂಶಗಳ ಆಗರವನ್ನು ವ್ಯರ್ಥ ಮಾಡಿ ರಾಸಾಯನಿಕ ಗೊಬ್ಬರಗಳಿಗೆ ಖರ್ಚು ಮಾಡುತ್ತಿರುವುದು ದುರ್ದೈವ ಸಂಗತಿ.

 

       ಅದರಲ್ಲೂ ಅಡಿಕೆ ಬೆಳೆಗಾರರು ಅಡಿಕೆ ಸಿಪ್ಪೆಯನ್ನು ಹೊರಗೆ ಹಾಕುವುದು ಅಥವಾ ಸುಡುವುದನ್ನು ನಾವು ಹೆಚ್ಚಾಗಿ ಕಾಣಬಹುದು. ಇಂಥ ಕೃಷಿ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸಲು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆ ರೈತರಿಗೆ ಶಿಕ್ಷಣ ನೀಡುತ್ತಾ ಬಂದಿದೆ.

 

ಅಡಿಕೆ ಸಿಪ್ಪೆಯಿಂದ ಗೊಬ್ಬರ:

 

       ಅಡಿಕೆ ಸಿಪ್ಪೆಯಲ್ಲಿ ಬೆಳೆಗಳಿಗೆ ಬೇಕಾದ ಹಲವು ಪೋಷಕಾಂಶಗಳು ದೊರೆಯುತ್ತವೆ. ಇದಕ್ಕಾಗಿ ಕಾಂಪೋಸ್ಟ್ ಪಿಟ್ ಗಳನ್ನು ಮಾಡಿಕೊಳ್ಳಬಹುದು ಅಥವಾ ಕಾಂಪೋಸ್ಟ್ ಬ್ಯಾಗ್ ಗಳು ಮತ್ತು ಗುಂಡಿ ತೋಡಿ ಅದರಲ್ಲಿ ಗೊಬ್ಬರ ತಯಾರಿಸಬಹುದು. ಸಗಣಿ, ಗೋಮೂತ್ರ, ಹಸಿರೆಲೆಗಳು ಮತ್ತು ಇತರ ತ್ಯಾಜ್ಯಗಳನ್ನು ಗುಂಡಿಯಲ್ಲಿ ಪದರಗಳಲ್ಲಿ ಸೇರಿಸಿ ಉತ್ತಮ ಗೊಬ್ಬರವನ್ನು ತಯಾರಿಸಿ ಬೆಳೆಗಳಿಗೆ ಕೊಡಬಹುದು. ಇದರಿಂದ ರೈತನ ಕೃಷಿ ಖರ್ಚು ಕಡಿಮೆಯಾಗುತ್ತದೆ. ಈ ರೀತಿ ನೈಸರ್ಗಿಕವಾದ ಗೊಬ್ಬರವನ್ನು ಬೆಳೆಗಳಿಗೆ ಬಳಸುವುದರಿಂದ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ಹೆಚ್ಚಿ ಮಣ್ಣು ಫಲವತ್ತಾಗುತ್ತದೆ. ಅಡಿಕೆ ಸಿಪ್ಪೆ ಕಳೆಯುವಿಕೆ ವೇಗವಾಗಿಸಲು ಡಾ.ಸಾಯಿಲ್ ಡಿಕಂಪೋಸರ್ ಬಳಸಬಹುದು. ಇದರಲ್ಲಿರುವ ಸೂಕ್ಷ್ಮಾಣು ಜೀವಿಗಳ ಆಗರವು ಕಳೆಯುವಿಕೆಯನ್ನು ವೇಗಗೊಳಿಸುತ್ತದೆ. ಅಡಿಕೆ ಸಿಪ್ಪೆಯ ಗೊಬ್ಬರದಲ್ಲಿ ಸಾರಜನಕ, ಪೊಟ್ಯಾಶ್, ರಂಜಕ ಹೀಗೆ ಹತ್ತು ಹಲವಾರು ಪೋಷಕಾಂಶಗಳು ದೊರೆಯುತ್ತವೆ.

 

       ಗೊಬ್ಬರಕ್ಕಾಗಿ ರಾಸಾಯನಿಕಗಳ ಮೇಲೆ ಅವಲಂಬನೆಯಾಗದೇ ನೈಸರ್ಗಿಕವಾಗಿ ಗೊಬ್ಬರ ತಯಾರಿಸಿ ಖರ್ಚು ಕಡಿಮೆ ಮಾಡಲು ರೈತರು ಪ್ರಯತ್ನಿಸಬೇಕು. ಎಲ್ಲಾ ಪೋಷಕಾಂಶಗಳನ್ನು ಹೊರಗಡೆಯಿಂದ ತಂದು ಕೊಡಲಾಗುವುದಿಲ್ಲ. ಆದರೆ ಪ್ರಕೃತಿಯಲ್ಲಿ ಮತ್ತು ಮಣ್ಣಿನಲ್ಲಿ ಎಲ್ಲಾ ಪೋಷಕಾಂಶಗಳು ಲಭ್ಯವಿದೆ. ಕೇವಲ ಅವುಗಳನ್ನು ಸಸ್ಯಗಳಿಗೆ ಲಭ್ಯವಿರುವ ರೂಪಕ್ಕೆ ಪರಿವರ್ತಿಸಬೇಕು ಅಷ್ಟೆ. ಇದಕ್ಕಾಗಿ ಕೃಷಿಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ವೃದ್ಧಿಸಿಕೊಳ್ಳಬೇಕು. ಇದಕ್ಕೆ ಸಾವಯವ ಕೃಷಿ ಅಳವಡಿಸಿಕೊಳ್ಳುವುದು ಉತ್ತಮ.

 

ಗೊಬ್ಬರ ತಯಾರಿಕೆಯನ್ನು ವಿವರವಾಗಿ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=4RnR79XPFsg

  

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ: ರವಿಕುಮಾರ್

 




Blog




Home    |   About Us    |   Contact    |   
microbi.tv | Powered by Ocat Online Advertising Service in India