ಬೀಜ ಬಿತ್ತನೆ ಅಥವಾ ಸಸಿ ನಾಟಿ ಮಾಡುವಾಗ ಸಾಮಾನ್ಯವಾಗಿ ತಳಗೊಬ್ಬರ ಅಂತ ರಾಸಾಯನಿಕ ಪ್ಯಾಕೆಟ್ ಗೊಬ್ಬರವನ್ನು ತಂದು ಹಾಕುತ್ತಾರೆ. ಆದರೆ ನಾಟಿ,ಬಿತ್ತನೆ ಮಾಡಿದ ಪ್ರತಿಯೊಂದು ಬೀಜಗಳೂ ಉತ್ತಮ ಮೊಳಕೆ ಒಡೆಯುವುದಿಲ್ಲ. ಸಸಿಗಳು ಸಾಯುವಂತಹದು ಅಥವಾ ಮಣ್ಣಿನಲ್ಲಿರುವ ರೋಗಾಣುಗಳಿಗೆ ತುತ್ತಾಗುವಂತಹದ್ದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದ ಬೆಳೆ ಬೆಳೆಯುವ ಮುನ್ನವೇ ನಾಶವಾಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ, ಬೆಲೆ ಬೆಳೆಯುವಾಗಲೇ ಅದನ್ನು ರಕ್ಷಣೆ ಮಾಡುವಂತಹ ರಕ್ಷಾಕವಚವನ್ನು ತೊಡಿಸಬೇಕು. ಆಗ ಮಾತ್ರ ಮೊಳಕೆಯೊಡೆಯುವ ಹಂತದಲ್ಲಿ ಬೆಳೆ ಕಾಪಾಡಲು ಸಾಧ್ಯ. ಇದಕ್ಕೆ ಸೂಕ್ತ ಮಾರ್ಗ ಎಂದರೆ ಬೀಜೋಪಚಾರ.
ಬೀಜೋಪಚಾರ-ಇದು ಬೀಜ ಮೊಳಕೆಯೊಡೆಯುವಾಗ, ಸಸಿ ಚಿಗುರುವಾಗ ರಕ್ಷಾ ಕವಚದಂತಹ ಕೆಲಸ ಮಾಡಿ, ಬೆಳೆ ರೋಗಗಳಿಗೆ ತುತ್ತಾಗದ ಹಾಗೆ, ಉತ್ತಮ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ. ಕಡಿಮೆ ಖರ್ಚಿನಲ್ಲಿಯೇ ಬೆಳೆಯಲ್ಲಿ ಹೆಚ್ಚು ಇಳುವರಿ ಒದಗಿಸಿಕೊಡುವ ಸಾಧನ ಬೀಜೋಪಚಾರ.
ಅದರಂತೆ, ಸಾವಯವ ಕೃಷಿಕರಾದ ರಾಯಚೂರಿನ ಹನುಮೇಶ್ ಅವರು, ಈ ಹಿಂದೆ ರಾಸಾಯನಿಕ ಕೃಷಿ ಮಾಡಿ, ಒಂದು ಎಕರೆಗೆ 2000 ರೂ.ಗಳಂತೆ 6 ಎಕರೆಗೆ 12 ಸಾವಿರ ಖರ್ಚು ಮಾಡಿದರೂ, ಬೆಳೆಯಲ್ಲಿ ಲಾಭ ಕಾಣದೆ ನಷ್ಟವನ್ನು ಅನುಭವಿಸಿದ್ದರು. ಯಾವಾಗ ರಾಸಾಯನಿಕ ಕೃಷಿ ಬಿಟ್ಟು ಸಾವಯವ ಕೃಷಿಗೆ ಬಂದರೋ ಆಗಿನಿಂದ ಲಾಭವನ್ನೇ ಪಡೆಯುತ್ತಿದ್ದಾರೆ. ಸಧ್ಯ ಕಡಲೆ ಬೆಳೆಯನ್ನು ಬೆಳೆಯುತ್ತಿರುವ ಕೃಷಿಕ, ಹೆಚ್ಚು ಖರ್ಚು ಮಾಡದೆ ಎಕರೆಗೆ ಕೇವಲ 500ರೂ. ಖರ್ಚು ಮಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಬೀಜೋಪಚಾರ ಮಾಡಿ 6 ಎಕರೆಯಲ್ಲಿ ಕಡಲೆ ಬೆಳೆ ಬಿತ್ತಿದ್ದರಿಂದ, ಬೆಳೆ ಆರೋಗ್ಯವಾಗಿ ಬೆಳೆದು, ಇಳುವರಿ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ರೈತ ಹೆಚ್ಚೇನು ಖರ್ಚು ಮಾಡಿಲ್ಲ. ಎಕರೆಗೆ 500 ರೂ. ಅಂತೆ 20 ಕೆ.ಜಿ ಬೀಜಗಳಿಗೆ 1 ಲೀಟರ್ ಡಾ.ಸಾಯಿಲ್ ರೈಜೋಬಿಯಂ ಬಳಸಿ ಬಿತ್ತಿದ್ದರು. ಹಾಗಾಗಿ ಬೆಳೆ ರೋಗಕ್ಕೆ ಆಹುತಿಯಾಗದೆ ಸಮೃದ್ಧವಾಗಿ ಬಂದಿದೆ. ವರ್ಷ ವರ್ಷ ಎಕರೆಗೆ 2000 ರೂ.ಗಳಂತೆ ಎಕರೆಗೆ 12000 ಖರ್ಚು ಮಾಡುತ್ತಿದ್ದ ಹನುಮೇಶ್ ಅವರು ಈ ಬಾರಿ, 6 ಎಕರೆಗೆ ಕೇವಲ 3000 ಖರ್ಚು ಮಾಡಿದ್ದಾರೆ.
ಈ ಬಗ್ಗೆ ಕೃಷಿಕ ಹನುಮೇಶ್ ಅವರ ಅನಿಸಿಕೆ ಇಲ್ಲಿದೆ
https://www.youtube.com/watch?v=WD468oPVz8s&t=35s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್.