Blog

ಚಾಮರಾನಗರ ಜಿಲ್ಲೆ ಹನೂರು ತಾಲ್ಲೂಕಿನ ಮಂಗಲ ಗ್ರಾಮದ ರೈತ ಜಮೀರ್ ಪಾಷಾ ರಾಜ್ಯ ಪ್ರಶಸ್ತಿ ಪುರಸ್ಕೃತ ರೈತರು. ಹಳೆ ಕಾಲದಲ್ಲಿ ರಾಸಾಯನಿಕ ಬಳಸದೇ ಕೃಷಿ ಮಾಡ್ತಿದ್ರು, ಈಗ ಹಂಗೆ ಮಾಡಕ್ಕಾಗಲ್ಲ ಎನ್ನುವವರಿಗೆ, ಕಡಿಮೆ ಖರ್ಚಿನ ಸಾವಯವ ಕೃಷಿಯಲ್ಲಿ ಲಾಭ ಗಳಿಸಬಹುದು ಎಂಬುದಕ್ಕೆ ಉದಾಹರಣೆ ಆಗಿದ್ದಾರೆ. ಇವರು ಹೊಸ ವಿಧಾನಗಳು, ತಂತ್ರಗಳನ್ನು ಬಳಸಿ ಕೃಷಿ ಮಾಡುತ್ತಾ ಯಶಸ್ಸು ಸಾಧಿಸುತ್ತಿದ್ದಾರೆ.

 

       ಈಗಾಗಲೇ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸಾವಯವ ಕೃಷಿಯಲ್ಲಿನ ಸಾಧನೆಯಿಂದ ಪ್ರಶಸ್ತಿ ಗಳಿಸಿರುವ ಜಮೀರ್ ಪಾಷಾರವರ ವ್ಯವಸಾಯ ಪದ್ಧತಿ ಇತರರಿಗಿಂತ ವಿಭಿನ್ನ. ಯಾವುದೇ ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲ. ಕೇವಲ ಡಾ.ಸಾಯಿಲ್ ಜೈವಿಕ ಗೊಬ್ಬರಗಳು ಮತ್ತು ಕೊಟ್ಟಿಗೆ ಗೊಬ್ಬರ ಬಳಸಿ ಬೆಳೆಗಳನ್ನು ಬೆಳೆಯುತ್ತಾರೆ. ಮಣ್ಣಿನ ಫಲವತ್ತತೆ ಕಾಪಾಡುವುದು ಇವರ ಮುಖ್ಯ ಕಾರ್ಯವಾಗಿದೆ. ಇದರಿಂದ ನೀರಿನ ಅವಶ್ಯಕತೆ ಕಡಿಮೆಯಾಗಿದೆ. ಕಾರ್ಮಿಕರ ಅವಶ್ಯಕತೆಯೂ ಕಡಿಮೆಯಾಗಿ ಖರ್ಚು ಕಡಿಮೆಯಾಗಿದೆ.

 

70:30 ಮಲ್ಚಿಂಗ್ ವಿಧಾನ

       ಜೋಳ, ಬಾಳೆ, ಹೀಗೆ ವಿವಿಧ ಬೆಳೆಗಳನ್ನು ಬೆಳೆದಿರುವ ಜಮೀರ್ ತಮ್ಮದೇ ಆದ ವಿಧಾನ ಕಂಡುಕೊಂಡಿದ್ದಾರೆ. ಇದೇ 70:30 ಮಲ್ಚಿಂಗ್ ವಿಧಾನ. ಬೆಳೆ ಬೆಳೆದು ಮಿಕ್ಕ ತ್ಯಾಜ್ಯಗಳನ್ನು ಹೊದಿಕೆಯಾಗಿ(ಮಲ್ಚಿಂಗ್) ಬಳಸುತ್ತಾರೆ. ಇವರ ಪ್ರಕಾರ 70% ಜಾಗವನ್ನು ತ್ಯಾಜ್ಯಗಳಿಂದ ಹೊದಿಕೆ ಮಾಡಿ, ಅಲ್ಲಿ ಓಡಾಡಬಾರದು. ಇದರಿಂದ ಕಳೆಯುವಿಕೆ ಸರಾಗವಾಗುತ್ತದೆ. ತುಳಿಯದೇ ಇರುವುದರಿಂದ ಎರೆಹುಳುಗಳು ಮತ್ತು ಸೂಕ್ಷ್ಮಾಣುಗಳು ಕಳೆಯುವಿಕೆಯಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ. ಮಿಕ್ಕ 30% ಜಾಗದವನ್ನು ಮಾತ್ರ ಓಡಾಡಲು ಬಳಸಬೇಕು.

 

       ಈ ರೀತಿ 4 ವರ್ಷದಿಂದ ಸಾವಯವ ಕೃಷಿ ಮಾಡುತ್ತಿರುವ ಜಮೀರ್ ಅವರ ತೋಟದಲ್ಲಿ ಎರೆಹುಳುಗಳು ಯಥೇಚ್ಛವಾಗಿವೆ ಮತ್ತು ಮಣ್ಣು ಫಲವತ್ತಾಗಿದೆ. ಜಮೀರ್ ಅವರ ಸಂದರ್ಶನ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=57mvw8n7kOE

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ: ರವಿಕುಮಾರ್

 




Blog




Home    |   About Us    |   Contact    |   
microbi.tv | Powered by Ocat Online Advertising Service in India