Blog

ಸಿಹಿ ನೀರಿನ ಕಪ್ಪೆ ಚಿಪ್ಪುಗಳಲ್ಲಿ ಮುತ್ತು ಕೃಷಿಯನ್ನು ಯಶಸ್ವಿ ಕೃಷಿ ಎಂದು ಭಾವಿಸಿರುವ ಸರಕಾರ, ಸಹಾಯಧನದ ಮೂಲಕ ಪ್ರೋತ್ಸಾಹವನ್ನು ಸಹ ನೀಡುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಹಾಯಧನದಡಿ ಸಿಹಿ ನೀರಿನ ಕಪ್ಪೆ ಚಿಪ್ಪುಗಳಲ್ಲಿ ಮುತ್ತು ಕೃಷಿಯನ್ನು ಸರ್ಕಾರ, ಮೀನುಗಾರಿಕೆ ಇಲಾಖೆ ಮೂಲಕ 2012-13ನೇ ಸಾಲಿನಲ್ಲಿ ಜಾರಿಗೊಳಿಸಿದೆ. ಮುತ್ತು ಕೃಷಿ ಆಯ್ದ ಜನರಿಗೆ ಮಾತ್ರ ಗೊತ್ತಾಗಿದ್ದು ನಿರೀಕ್ಷಿತ ಯಶಸು ಪಡೆದಿಲ್ಲ. ಆಭರಣಗಳಾಗಿ ಮಾತ್ರ ಮುತ್ತು ಬಳಕೆ ಆಗದೆ ಕಾಂತಿವರ್ಧಕ, ಔಷಧ, ಬಣ್ಣ ತಯಾರಿಕೆಗೂ ಬಳಸುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ.

 

ವೈಜ್ಞಾನಿಕ, ತಾಂತ್ರಿಕತೆ ಬೆಳವಣಿಗೆ ಹಿನ್ನೆಲೆಯಲ್ಲಿ ಮುತ್ತು ಸುಲಭ ಬೆಳೆ ಆಗಿ ಗುರುತಿಸಲ್ಪಟ್ಟಿದೆ. ಸಾಕಷ್ಟು ಲಭ್ಯ ನೀರು ಇರುವ ಸ್ಥಳದಲ್ಲಿ ಗುಂಡಾಕಾರದ ಸಿಮೆಂಟ್ ತೊಟ್ಟಿ, ಚೌಕಾರದ ಸಿಮೆಂಟ್, ಮಣ್ಣಿನ ತೊಟ್ಟಿಯಲ್ಲಿ ಮತ್ತು ಕೃಷಿ ಹೊಂಡದಲ್ಲಿ ಮುತ್ತಿನ ಕೃಷಿ ಮಾಡಬಹುದಾಗಿದೆ. ಮುತ್ತಿನ ಕೃಷಿಗೆ ತಗಲುವ ವೆಚ್ಚ ಕಮ್ಮಿ ಆಗಿದ್ದು, ಉತ್ತಮ ಆದಾಯವನ್ನು ಕೂಡ ಗಳಿಸಬಹುದಾಗಿದೆ. ಮೀನುಗಾರಿಕೆ ನಿರ್ದೇಶನಾಲಯ 2013ರ ಅಕ್ಟೋಬರ್ 25ರಂದು ಮುತ್ತು ಕೃಷಿ ಸಹಾಯಧನ ಯೋಜನೆ ಜಾರಿಗೊಳಿಸಿದೆ. ಮುತ್ತಿನ ಕೃಷಿಗೆ ಸರಕಾರದ ಸಹಾಯಧನ ಲಭ್ಯವಿದ್ದು. 26 ಸಾವಿರ ರೂ. ವೆಚ್ಚದ ಗ್ರೇಡ್-1, 2000 ಲೀಟರ್ ಘಟಕ ನಿರ್ಮಾಣಕ್ಕೆ 19,500 ರೂ. ಸಹಾಯಧನ ಮತ್ತು 40 ಸಾವಿರ ರೂ. ವೆಚ್ಚದ ಗ್ರೇಡ್-2, 3000 ಲೀಟರ್ ಘಟಕ ನಿರ್ಮಾಣಕ್ಕೆ 30 ಸಾವಿರ ರೂ. ಸಹಾಯಧನ ಲಭ್ಯವಿದೆ. ಶೇ.75ರಷ್ಟು ಘಟಕ ವೆಚ್ಚವನ್ನು ಸಹಾಯಧನದಡಿ ಪಡೆಯಬಹುದಾಗಿದೆ.

 

ಬೆಂಗಳೂರು ಭಾಗದ ಆಯ್ದ ಕೃಷಿಕರು ಮಾತ್ರ ಮುತ್ತು ಕೃಷಿಯಲ್ಲಿ ಆಸಕ್ತಿ ತೋರಿದ್ದಾರೆ. ರಾಜ್ಯದ ಯಾವುದೇ ಭಾಗಕ್ಕೂ ಸಿಹಿ ನೀರು ಕಪ್ಪೆಚಿಪ್ಪುಗಳಲ್ಲಿ ಮುತ್ತು ಕೃಷಿ ಯೋಜನೆ ವಿಸ್ತಾರಗೊಂಡಿಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸಿಹಿ ನೀರು ಕಪ್ಪೆ ಚಿಪ್ಪುಗಳಲ್ಲಿ ಮುತ್ತು ಕೃಷಿ ಕುರಿತು ತರಬೇತಿ ಪಡೆಯುಹುದು. ಸ್ವಂತ ಅಥವಾ 7 ವರ್ಷ ಗುತ್ತಿಗೆ ಪಡೆದ ಜಾಗದಲ್ಲಿ ಮುತ್ತು ಕೃಷಿ ಮಾಡಬಹುದು. ಮುತ್ತು ಕೃಷಿಗೆ ಉಪಯೋಗಿಸುವ ನೀರಿನ ಗುಣಮಟ್ಟ ಮೌಲ್ಯದ ಬಗ್ಗೆ ವರದಿ ಸಲ್ಲಿಸಬೇಕು. ಯೋಜನೆ ಸೌಕರ್ಯಕ್ಕೆ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮುತ್ತು ಕೃಷಿ ಮಾಡಲು ಆಸಕ್ತಿಹೊಂದಿದವರು ಮೀನುಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಕೃಷಿ ಬಗೆಗಿನ ಮತ್ತಷ್ಟು ಅಪ್ಡೇಟ್ಸ್ ಗಾಗಿ ನೋಡ್ತಾಯಿರಿ ಮೈಕ್ರೋಬಿ ಟಿವಿ, ಇದು ರೈತರ ಹಾದಿಯಲ್ಲಿ

https://www.youtube.com/watch?v=yBvQdG8AW3Y&t=28s

 

ವರದಿ : ವನಿತಾ ಪರಸನ್ನವರ್

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Powered by Ocat Business Promotion Service in India