Blog

     ಯಾವುದೇ ಬೆಳೆಯಾಗಲಿ ಮಣ್ಣು ಫಲವತ್ತಾಗಿದ್ದರೆ, ಫಸಲು ಉತ್ತಮವಾಗಿ ಬರುವುದರಲ್ಲಿ ಸಂದೇಹವೇ ಇಲ್ಲ. ಕೃಷಿ ಮಾಡುವವರು ಮಣ್ಣಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಮಣ್ಣಿನ ಮತ್ತು ಕಳೆಗಳ ನಿರ್ವಹಣೆ ಸರಿಯಾಗಿ ಮಾಡುವುದು ಮುಖ್ಯ. ಕೃಷಿ ಮಣ್ಣು ಹಾಳಾಗುವುದಕ್ಕೆ ಕಾರಣ ರಾಸಾಯನಿಕಗಳ ಬಳಕೆ. ಇವು ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತವೆ. ಸಾವಯವ ಕೃಷಿ ಇದಕ್ಕೆ ಪರಿಹಾರವಾಗಿದೆ.

 

       ಅಡಿಕೆ ತೋಟವೊಂದಕ್ಕೆ ಭೇಟಿ ನೀಡಿದ ಮೈಕ್ರೋಬಿ ಆಗ್ರೋಟೆಕ್ ನ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥ್ ಅವರು ಅಲ್ಲಿನ ರೈತರಿಗೆ ಮಣ್ಣಿನ ಮಹತ್ವ ಮತ್ತು ಅದನ್ನು ಸಂರಕ್ಷಿಸುವ ವಿಧಾನಗಳನ್ನು ತಿಳಿಸಿದರು. ಕಳೆಗಳ ನಿರ್ವಹಣೆಯ ಬಗ್ಗೆಯೂ ರೈತರಿಗೆ ಮಾಹಿತಿ ನೀಡಿದರು. ಕಳೆನಾಶಕಗಳ ಬಳಕೆಯಿಂದ ಮಣ್ಣಿಗೆ ಆಗುವ ಹಾನಿಗಳನ್ನು ತಿಳಿಸಿದರು. ತೋಟವನ್ನು ಸ್ವಚ್ಛವಾಗಿಡಬೇಕು ಎಂದುಕೊಳ್ಳುವ ಈಗಿನ ರೈತರಿಗೆ ಕೃಷಿ ಮೂಲತತ್ವಗಳೇ ಗೊತ್ತಿಲ್ಲ ಎಂದು ಹೇಳಬಹುದು.

 

ಕೃಷಿಭೂಮಿಯಲ್ಲಿ ಕಸ-ಕಡ್ಡಿ ಹೆಚ್ಚಾದರೆ ಫಲವತ್ತತೆ ಹೆಚ್ಚಾಗುತ್ತದೆ. ಇದನ್ನು ತಿಳಿಯದ ರೈತರು ಎಲ್ಲಾ ಕಳೆಗಳನ್ನು ಕಳೆನಾಶಕ ಬಳಸಿ ನಾಶ ಮಾಡಿ, ತ್ಯಾಜ್ಯಗಳನ್ನು ಸುಟ್ಟು ಹಾಕುತ್ತಾರೆ ಅಥವಾ ಹೊರಗೆ ಹಾಕುತ್ತಾರೆ. ಹೀಗೆ ಮಾಡುವುದರಿಂದ ಉಚಿತವಾಗಿ ಸಿಗಬಹುದಾಗಿದ್ದ ಪೋಷಕಾಂಶಗಳನ್ನು ಬಿಸಾಡಿದಂತಾಗುತ್ತದೆ. ಇದರ ಬದಲು ಅವುಗಳನ್ನು ಕಳೆಸಿ ನೈಸರ್ಗಿಕವಾಗಿ ಪೋಷಕಾಂಶಗಳನ್ನು ಬೆಳೆಗಳಿಗೆ ಒದಗಿಸಬಹುದು.

 

ಮಣ್ಣಿನ ತೇವಾಂಶ ಮತ್ತು ಸೂಕ್ಷ್ಮಜೀವಿಗಳನ್ನು ರಕ್ಷಿಸಲು ಮಲ್ಚಿಂಗ್ ಅಥವಾ ಹೊದಿಕೆ ಮುಖ್ಯ. ಯಾವುದೇ ಖರ್ಚಿಲ್ಲದೇ ಇದನ್ನು ಕಳೆಗಳು ಮಾಡುತ್ತವೆ. ಈ ಶಿಕ್ಷಣ ಇಂದಿನ ರೈತರಿಗೆ ಸಿಗುವುದು ಬಹಳ ಮುಖ್ಯ. ಇದನ್ನು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯು ರಾಜ್ಯದಾದ್ಯಂತ ದಶಕದಿಂದ ಮಾಡುತ್ತಿದೆ.

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ನೋಡಿ.

https://www.youtube.com/watch?v=u6qnCT5ix-w

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #integratedfarming  #organicfarming  #organiccrops  #sustainablefarming  #highyield  #healthycrop  #soilhealth  #biofertilizers  #lowinvestment  #areca  #arecafarming  #betelnut  #organicbetel  



Blog




Home    |   About Us    |   Contact    |   
microbi.tv | Powered by Ocat Online Advertising Service in India