Blog

       ಮಣ್ಣು ಸಕಲ ಸಂಪತ್ತುಗಳ ಆಗರ ಎನ್ನುತ್ತಾರೆ ಹಿರಿಯರು. ಮಣ್ಣು ಫಲವತ್ತಾದರೆ ರೈತ ಬೆಳೆಯುವ ಫಸಲು ಆರೋಗ್ಯಕರವಾಗಿರುತ್ತದೆ. ಕೃಷಿಯಲ್ಲಿ ಮಣ್ಣಿನ ಮಹತ್ವ ಮರೆತಿರುವ ಇಂದಿನ ರೈತರು ಬೆಳೆಗಳಿಗೆ ಕೃತಕವಾಗಿ ಪೋಷಕಾಂಶಗಳನ್ನು ಪೂರೈಸಲು ಹೋಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರ ಲಾಭ ಪಡೆದುಕೊಳ್ಳುತ್ತಿರುವುದು ರಾಸಾಯನಿಕ ಗೊಬ್ಬರ ತಯಾರಿಕ ಕಂಪನಿಗಳು. ಮಣ್ಣಿನ ಫಲವತ್ತತೆ, ಪೋಷಕಾಂಶಗಳ ಪ್ರಮಾಣ ತಿಳಿಯಲು ಮಣ್ಣು ಪರೀಕ್ಷೆ ಮಾಡಿಸುವುದು ವೈಜ್ಞಾನಿಕ ಪದ್ಧತಿ. ಆದರೆ ಇದರ ಜೊತೆ ರೈತರು ತಮ್ಮ ಕೃಷಿ ಭೂಮಿಯ ಮಣ್ಣನ್ನು ಸ್ವತಃ ತಾವೇ ಪರೀಕ್ಷಿಸಿಕೊಳ್ಳಬಹುದು. ಮಣ್ಣಿನ ಗುಣಧರ್ಮಗಳನ್ನು ತಿಳಿದರೆ ಕೃಷಿ ಸರಳವಾಗುತ್ತದೆ.

 

ಸ್ವತಃ ಮಣ್ಣು ಪರೀಕ್ಷೆ ಮಾಡುವುದು ಹೇಗೆ?

- ಕೃಷಿಗೆ ಪೂರಕವಾದ ಮಣ್ಣು ಮೃದುವಾಗಿರುತ್ತದೆ. ಹಾಗಾಗಿ ಬರಿಗಾಲಿನಲ್ಲಿ ಓಡಾಡಿ ನೋಡಿದರೆ ಮೃದುತ್ವ ತಿಳಿಯುತ್ತದೆ.

- ಕೃಷಿಭೂಮಿಯ ಮಣ್ಣನ್ನು ಅಗೆದು ನೋಡಿದರೆ ಮಣ್ಣು ಎಷ್ಟು ಗಟ್ಟಿ ಇದೆ ಎಂಬುದು ತಿಳಿಯುತ್ತದೆ. ಮಣ್ಣು ಗಟ್ಟಿಯಾಗಿದ್ದರೆ ನೀರು ಇಂಗಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಿದೆ ಎಂದು ಅರ್ಥಮಾಡಿಕೊಳ್ಳಬಹುದು. ಇಂಥಾ ಮಣ್ಣಿನಲ್ಲಿ ಗಾಳಿಯಾಡದೇ ಉಪಕಾರಿ ಸೂಕ್ಷ್ಮಾಣು ಜೀವಿಗಳಿಗೆ ಪೂರಕವಾದ ವಾತಾವರಣ ಇಲ್ಲವಾಗುತ್ತದೆ.

- ನೀರು ಇಂಗಿಸಿಕೊಳ್ಳುವ ಸಾಮರ್ಥ್ಯ ನೋಡಲು ನೀರನ್ನು ಒಂದೇ ಕಡೆ ಸುರಿದು ಎಷ್ಟು ಬೇಗ ಹೀರಿಕೊಳ್ಳುತ್ತಿದೆ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಬಹುದು.

- ಎರೆಹುಳುಗಳು ಹೆಚ್ಚಾಗಿದ್ದರೆ, ಇವು ಮಣ್ಣಿನಲ್ಲಿ ಓಡಾಡಿ ರಂಧ್ರಗಳನ್ನು ಮಾಡುತ್ತವೆ. ಇದರಿಂದ ನೀರು ಇಂಗಿಸಿಕೊಳ್ಳುವ ಸಾಮರ್ಥ್ಯ ಹೆಚ್ಚುವುದಲ್ಲದೇ ಗಾಳಿಯಾಡುವುದಕ್ಕೆ ಸಹಾಯ ಮಾಡುತ್ತದೆ. ಎರೆಹುಳುಗಳು ಅಧಿಕವಾಗಿದ್ದರೆ ನಿಮ್ಮ ಮಣ್ಣು ಫಲವತ್ತಾಗುತ್ತಿದೆ ಎಂದರ್ಥ.

- ಫಲವತ್ತಾದ, ಸಾವಯವ ಇಂಗಾಲ ಭರಿತ ಮಣ್ಣು, ರಾಸಾಯನಿಕ ಬಳಕೆಯಿಂದ ಹಾಳಾದ ಮಣ್ಣಿಗಿಂತ ಪರಿಮಳಯುಕ್ತವಾಗಿರುತ್ತದೆ. ಹಾಗಾಗಿ ಇದನ್ನೂ ರೈತರು ಪರೀಕ್ಷೆ ಮಾಡಬಹುದು.

- ಬೆಳೆಯ ಬೇರುಗಳನ್ನು ಪರೀಕ್ಷಿಸುವುದು. ಸಾಮಾನ್ಯವಾಗಿ ಉತ್ತಮ ಬೇರುಗಳಲ್ಲಿ ಮೈಕೋರೈಜಾ ಎಂಬ ಶಿಲೀಂಧ್ರದ ಜಾಲವಿರುತ್ತದೆ. ಇದನ್ನು ಬಿಳಿಬೇರು ಎನ್ನಬಹುದು. ಇವು ಗಿಡಗಳಿಗೆ ಪೋಷಕಾಂಶಗಳನ್ನು ಪೂರೈಸಲು ಸಹಾಯ ಮಾಡುತ್ತವೆ.

- ನೀರು ಹೆಚ್ಚಾದರೆ ಬೇರುಗಳು ಕೊಳೆತು ಹೋಗುತ್ತವೆ. ಹಾಗಾಗಿ ನೀರು ನಿರ್ವಹಣೆ ತುಂಬಾ ಮುಖ್ಯ.

 

       ರೈತರು ಸ್ವತಃ ವಿಜ್ಞಾನಿಗಳಾಗಬೇಕು. ಕೃಷಿಯನ್ನು ಒಂದು ಉದ್ಯಮವಾಗಿ ನೋಡಬೇಕು. ಆಗ ಮಾತ್ರ ಕೃಷಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮಣ್ಣಿನ ಪರೀಕ್ಷೆ ಮಾಡುವ ಬಗೆ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಪೂರ್ತಿ ವಿಡೀಯೋ ನೋಡಿ.

https://www.youtube.com/watch?v=yDswmHLDMj8

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #integratedfarming  #organicfarming  #organiccrops  #sustainablefarming  #highyield  #healthycrop  #soilhealth  #biofertilizers  #lowinvestment  #soiltest  #selfsoiltest  



Blog




Home    |   About Us    |   Contact    |   
microbi.tv | Powered by Ocat Business Promotion Service in India