Blog

       ಭಾರತೀಯ ಉಪಖಂಡವು ಮಸಾಲೆಗಳ ನಾಡು ಎಂದೇ ಪ್ರಸಿದ್ಧವಾಗಿದೆ. ಅನೇಕ ಮಸಾಲೆ ಪದಾರ್ಥಗಳು ಭಾರತದಲ್ಲಿ ಉತ್ಪಾದನೆಯಾಗುತ್ತವೆ. ಅದರಲ್ಲಿ ಕರಿ ಮೆಣಸು ಕೂಡ ಒಂದು. ಇದು ಒಂದು ಬಹುವಾರ್ಷಿಕ ಬೆಳೆಯಾಗಿದೆ. ಭಾರತದ ಮಲಬಾರ್ ಕರಾವಳಿಗೆ ಸ್ಥಳೀಯವಾಗಿದೆ ಮತ್ತು ಇದು ಮಾನವನಿಗೆ ತಿಳಿದಿರುವ ಪ್ರಾಚೀನ ಮಸಾಲೆಗಳಲ್ಲಿ ಒಂದಾಗಿದೆ. ಇದನ್ನು ಪ್ರಪಂಚದಾದ್ಯಂತ ಮಸಾಲೆಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತದಲ್ಲಿ ಕಾಳು ಮೆಣಸಿನ ಪ್ರಮುಖ ಉತ್ಪಾದಕರು ದಕ್ಷಿಣದ ರಾಜ್ಯಗಳು - ಕರ್ನಾಟಕ, ಕೇರಳ ಮತ್ತು ತಮಿಳುನಾಡು. ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಣಸಿಗೆ ತುಂಬಾ ಬೇಡಿಕೆ ಇದೆ. ಹಾಗಾಗಿ ಇದೊಂದು ಉತ್ತಮ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ.

 

ಮಣ್ಣು ಮತ್ತು ವಾತಾವರಣ

 

       ಕಾಳುಮೆಣಸನ್ನು ಮುಖ್ಯವಾಗಿ ಮಳೆಯಾಶ್ರಿತ ಬೆಳೆಯಾಗಿ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಅಡಿಕೆ ಅಥವಾ ತೆಂಗಿನ ಜತೆ ಬೆಳೆಯಲಾಗುತ್ತದೆ. ಇದೊಂದು ಬಳ್ಳಿಯಾಗಿದ್ದು, ಕರಿಮೆಣಸು ಸಸ್ಯವು 10 ಮೀಟರ್ (33 ಅಡಿ) ಎತ್ತರವನ್ನು ತಲುಪಬಹುದು. ಕಾಳು ಮೆಣಸಿಗೆ ಭಾರೀ ಮಳೆ (150 - 250 ಸೆಂ.ಮೀ.) ಅಧಿಕ ಆರ್ದ್ರತೆ ಮತ್ತು ಬೆಚ್ಚನೆಯ ವಾತಾವರಣದ ಅಗತ್ಯವಿದೆ. ಹ್ಯೂಮಸ್ ಅಂಶದಿಂದ ಸಮೃದ್ಧವಾಗಿರುವ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದು ಕಪ್ಪು ಮತ್ತು ಕೆಂಪು ಗೋಡು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿಯನ್ನು ಬಳಸಿಕೊಂಡು ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಮಾಡಬಹುದು.

       ಮಳೆ ಹೆಚ್ಚಾದಾಗ ರೋಗಗಳನ್ನು ತಡೆಯಲು ಬೋರ್ಡೊ ಮಿಶ್ರಣವನ್ನು ಮೆಣಸಿನ ಬಳ್ಳಿಗಳಿಗೆ ಕೊಡಬೇಕು. ಎಲೆಚುಕ್ಕೆ ರೋಗ, ಕೊಳೆ ರೋಗ, ಹೀಗೆ ಇದಕ್ಕೆ ಬರುವ ರೋಗಗಳನ್ನು ಮತ್ತು ಕೀಟಗಳ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಖರ್ಚು ಕಡಿಮೆ ಮಾಡಿಕೊಳ್ಳಬಹುದು.

 

       ಮೆಣಸು ನಾಟಿ ಮಾಡುವುದು, ಪೋಷಕಾಂಶ ನಿರ್ವಹಣೆ, ರೋಗ-ಕೀಟಬಾಧೆ ನಿರ್ವಹಣೆ ಇವೆಲ್ಲದರ ಸಮಗ್ರ ಮಾಹಿತಿಗಾಗಿ ಕೆಳಗಿನ ಲಿಮಕ್ ಮೇಲೆ ಕ್ಲಿಕ್ ಮಾಡಿ ಪೂರ್ತಿ ವಿಡೀಯೋ ನೋಡಿ.

https://www.youtube.com/watch?v=KxXUTGHOUBo&list=PLuN9VcGQAtK7iUx6Ud6xWhOt1RiZTVC3b&index=10

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #integratedfarming  #organicfarming  #organiccrops  #sustainablefarming  #highyield  #healthycrop  #soilhealth  #biofertilizers  #lowinvestment  #pepper  #organicpepper  #blackpepper  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing