Blog

       ದಾವಣಗೆರೆ ಜಿಲ್ಲೆಯ ಈ ರೈತರು ತಮ್ಮ ಅಡಿಕೆ ತೋಟದಲ್ಲಿ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಮಹದೇವಪ್ಪ ಅವರಿಂದ ಸಾವಯವ ಕೃಷಿ ಶಿಕ್ಷಣ ಪಡೆದರು. ಸಾವಯವ ಕೃಷಿಯಿಂದ ಆಗುವ ಲಾಭಗಳ ಬಗ್ಗೆ ರೈತ ಸುಭಾಷ್ ಗೌಡರವರು ಮಾತನಾಡಿ ಇತರ ರೈತರಿಗೆ ತಿಳುವಳಿಕೆ ನೀಡಿದರು.

 

       ದಾವಣಗೆರೆ ತಾಲ್ಲೂಕಿನ ಮಳಲ್ಕೆರೆ ಗ್ರಾಮದ ರೈತರಾದ ಜಯಪ್ರಕಾಶ್, ಸುಭಾಷ್ ಗೌಡ್ರು ಮತ್ತು ಸಂತೋಷ್ ತಮ್ಮ ಅಡಿಕೆ ತೊಟದಲ್ಲಿ ಮರಗಳ ಆರೋಗ್ಯ ಮತ್ತು ಇಳುವರಿ ಹೆಚ್ಚಿಸಿಕೊಳ್ಳಲು ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಬಳಕೆ ಮಾಡುತ್ತಿದ್ದಾರೆ. ಅನುಭವಿ ಸಾವಯವ ರೈತರಾದ ಸುಭಾಷ್, ಇತರ ರೈತರಿಗೆ ಕೃಷಿಯ ಮೂಲಭೂತ ನಿಯಮಗಳನ್ನು ತಿಳಿಸಿದರು.

 

ಕುಡುಕರು ಕುಡಿತಕ್ಕೆ ದಾಸರಾದಂತೆ ರೈತರು ರಾಸಾಯನಿಕ ಗೊಬ್ಬರಗಳ ದಾಸ್ಯಕ್ಕೆ ಸಿಲುಕಿದ್ದಾರೆ. ರಾಸಾಯನಿಕ ಬಳಸದೇ ಕೃಷಿ ಸಾಧ್ಯವೇ ಇಲ್ಲ ಎಂಬಂತೆ ರಸಗೊಬ್ಬರಗಳನ್ನು ಬಳಸುತ್ತಿದ್ದಾರೆ ಎನ್ನುತ್ತಾರೆ ಕೃಷಿಕ ಸುಭಾಷ್. ಶೀಘ್ರವಾಗಿ ಫಸಲು ತೆಗೆಯುವ ಭರದಲ್ಲಿ ಭೂಮಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗಿನ ರೈತರಲ್ಲಿ ತಾಳ್ಮೆಯೇ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಕರು ತಿಪ್ಪೆಗೊಬ್ಬರ ಮತ್ತು ನಿಸರ್ಗದಲ್ಲೇ ಸಿಗುತ್ತಿದ್ದ ಇತರ ವಸ್ತುಗಳನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದರು. ಆದರೆ ಈಗ ರಾಸಾಯನಿಕ ಬಳಸಿ ಮಣ್ಣಿನ ಸೂಕ್ಷ್ಮಜೀವಿಗಳನ್ನು ರೈತ ನಾಶ ಮಾಡುತ್ತಿದ್ದಾನೆ. ಇದರಿಂದ ಪೋಷಕಾಂಶಕ್ಕಾಗಿ ಇನ್ನೂ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸುವ ಅನಿವಾರ್ಯತೆ ಹೆಚ್ಚಾಗಿದೆ. ಈ ವಿಷವರ್ತುಲದಿಂದ ಹೊರಬರಲು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಾಗಿದೆ. ಉಳುಮೆಯಲ್ಲೂ ರೈತರು ತಪ್ಪು ಮಾಡುತ್ತಿದ್ದಾರೆ ಎಂಬುದು ಸುಭಾಷ್ ಅವರ ಅಭಿಪ್ರಾಯ.

 

ಅತಿಯಾದ ಉಳುಮೆ ಅಡಿಕೆ ಮರಗಳ ಬೇರುಗಳಿಗೆ ಹಾನಿ ಮಾಡಿ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಇವೆಲ್ಲಾ ರೈತರಿಗೆ ಅರ್ಥವಾದಾಗ ಮಾತ್ರ ಕೃಷಿಯಲ್ಲಿ ಬದಲಾವಣೆ ಸಾಧ್ಯ. ನೀರು ನಿರ್ವಹಣೆಯಲ್ಲೂ ರೈತರು ಯಡವಟ್ಟು ಮಾಡುತ್ತಿದ್ದಾರೆ. ನೀರು ನಿರ್ವಹಣೆ ಗೊತ್ತೇ ಇಲ್ಲ ಎನ್ನುತ್ತಾರೆ ರೈತ ಸುಭಾಷ್.

 

        ಮೈಕ್ರೋಬಿ ತಂಡದ ಕಾರ್ಯಕ್ಕೆ ಧನ್ಯವಾದ ತಿಳಿಸಿದ ರೈತರು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಕಳೆ, ಕಸವನ್ನು ಹೊರಹಾಕದೇ ಹಸಿರು ಗೊಬ್ಬರವಾಗಿ ಬಳಸಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ಕೃಷಿಯಲ್ಲಿ ಅಭಿವೃದ್ಧಿ ಪಡೆಯಬಹುದು ಎಂದು ಅರ್ಥೈಸಲಾಯಿತು.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=hTAzetNvUvE

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

 ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #integratedfarming  #organicfarming  #organiccrops  #sustainablefarming  #highyield  #healthycrop  #soilhealth  #biofertilizers  #lowinvestment  #areca  #organicareca  #arecafarm  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing