ರಾಸಾಯನಿಕ ಕೃಷಿಯಲ್ಲಿ ಭೂಮಿ ಹಾಳಾಗುತ್ತದೆ. ಆದರೆ ಸಾವಯವ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಮತ್ತು ಆದಾಯ ಹೆಚ್ಚಿಸಿಕೊಳ್ಳಲು ಸುಲಭ. ಸಾವಯವ ಕೃಷಿಯ ಮತ್ತೊಂದು ಉಪಯೋಗ ಎಂದರೆ ಇದು ಸಮಗ್ರ ಕೃಷಿಯನ್ನು ಉತ್ತೇಜಿಸುತ್ತದೆ. ರಾಸಾಯನಿಕ ಕೃಷಿ ಏಕಬೆಳೆ ಪದ್ಧತಿಯನ್ನು ಅವಲಂಬಿಸಿರುವುದರಿಂದ ರೈತರ ಆದಾಯ ಹವಾಮಾನ ಮತ್ತು ಬೇಡಿಕೆಗೆ ಅವಲಂಬಿತವಾಗಿ ನಿರಂತರ ಆದಾಯ ಇಲ್ಲವಾಗಿದೆ. ಸಾವಯವ ಕೃಷಿಯನ್ನು ಅಳವಡಿಸಿಕೊಂಡು ವಿವಿಧ ರೀತಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಹಿರೇಕಲಾವತಿ ಗ್ರಾಮದ ರೈತ ರವಿ ಒಂದೂವರೆ ಎಕರೆ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದಾರೆ. 6 ವರ್ಷದ ಈ ಅಡಿಕೆ ಮರಗಳಿಗೆ ಈ ಬಾರಿ ಕೇವಲ 18 ಸಾವಿರ ಖರ್ಚು ಮಾಡಿದ್ದಾರೆ. ಮೊದಲೆಲ್ಲಾ ರಾಸಾಯನಿಕ ಬಳಸಿ ಕೃಷಿ ಮಾಡುತ್ತಿದ್ದ ರವಿ ಈಗ ಸಾವಯವ ಕೃಷಿಯ ಮೊರೆ ಹೋಗಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಅಳವಡಿಸಿಕೊಂಡ ಮೇಲೆ ತುಂಬಾ ಸುಧಾರಣೆಗಳನ್ನು ಕಂಡಿದ್ದಾರೆ. ಈಗ ಎಲ್ಲೇ ಮಣ್ಣು ತೆಗೆದರೂ ಎರೆಹುಳುಗಳು ದೊರೆಯುತ್ತವೆ. ಮಣ್ಣು ಮೃದುವಾಗಿದೆ. ಕಳೆದ ಬಾರಿ 3.5 ಕ್ವಿಂಟಾಲ್ ಅಡಿಕೆ ಬಂದಿತ್ತು. ಈ ಬಾರಿ ಬೆಳವಣಿಗೆ ಉತ್ತಮವಾಗಿದ್ದು, ಮುಂದೆ 50 ಕ್ವಿಂಟಾಲ್ ವರೆಗೂ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ರೈತ ರವಿ.
ಅಡಿಕೆ ತೋಟದಲ್ಲಿ ಗುಂಪುಬಾಳೆ
ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರ ವೀಡಿಯೋ ನೋಡಿ ಗುಂಪು ಬಾಳೆಯನ್ನು ರೈತ ರವಿ ಬೆಳೆದಿದ್ದಾರೆ. ಒಂದು ಗಿಡದಲ್ಲಿ 1 ವರ್ಷಕ್ಕೆ 4-5 ಗೊನೆ ಬರುತ್ತವೆ. 1 ಗೊನೆ 5 ಕೆ.ಜಿಯಾದರೂ ಬರುತ್ತವೆ ಎಂಬುದು ಇವರ ಲೆಕ್ಕಾಚಾರ. ಗುಂಪು ಬಾಳೆಯ ವಿಶೇಷತೆ ಎಂದರೆ ಒಮ್ಮೆ ನಾಟಿ ಮಾಡಿದ ಮೇಲೆ ಹಲವು ವರ್ಷಗಳವರೆಗೆ ಫಲ ನೀಡುತ್ತದೆ. ಗುಂಪುಬಾಳೆ ಪದ್ಧತಿ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=xXRrFH7eUoY&list=PLuN9VcGQAtK59OosL4SdibDzBLMxYn7J5&index=43
ಬಾಳೆಗಿಡದಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿರುವುದರಿಂದ ಕೊಯ್ಲಿನ ನಂತರ ಗಿಡವನ್ನು ಗೊಬ್ಬರವಾಗಿ ಕೂಡ ಬಳಸಬಹುದು.
ಸಾವಯವ ಕೃಷಿಯಲ್ಲಿ ಬೆಳೆದ ಅಡಿಕೆ, ಬಾಳೆ ಎಲ್ಲವೂ ಉತ್ತಮವಾಗಿದ್ದು, ರುಚಿ ಮತ್ತು ಗಾತ್ರದಲ್ಲಿ ಅತ್ಯುತ್ತಮವಾಗಿದೆ. ಸಾವಯವ ಕೃಷಿ ಅಳವಡಿಸಿಕೊಳ್ಳುವುದರಿಂದ ಖರ್ಚು ಕಡಿಮೆಯಾಗಿದೆ ಎಂಬುದು ರೈತರ ಅಭಿಪ್ರಾಯ.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
Blog