Blog

ಬಹುತೇಕ ರೈತರು ತಮ್ಮ ಕೃಷಿ ಆದಾಯದಿಂದ ಸಂತೃಪ್ತರಿಲ್ಲ. ಸರಿಯಾದ ಬೆಲೆ ಸಿಗದ ಕಾರಣ ರೈತರು ಪರದಾಡುವ ಪರಿಸ್ಥಿತಿ ಏರ್ಪಾಡಾಗಿದೆ. ರೈತರು ತಮ್ಮ ಬಳಿ ಇರುವ ಜಮೀನಿನಲ್ಲೇ ಆದಾಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಸಮಗ್ರ ಕೃಷಿ ಅಳವಡಿಸಿಕೊಳ್ಳುವುದರಿಂದ ಏನು ಲಾಭ? ಉಪಕಸುಬಿನಿಂದ ಲಾಭ ಹೇಗೆ ಮಾಡಬಹುದು? ನೋಡೋಣ ಬನ್ನಿ.

 

       ಇಂದಿನ ದಿನಗಳಲ್ಲಿ ಕೃಷಿ ಏಕಬೆಳೆ ಪದ್ಧತಿಯಾಗಿ ಹೋಗಿದೆ. ಒಂದೇ ಬೆಳೆಯ ಮೇಲೆ ಅವಲಂಬಿತರಾಗಿ, ಬೆಲೆ ಸಿಕ್ಕರೆ ಲಾಭ, ಇಲ್ಲವಾದರೆ ನಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ರೈತರು ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು. ಸಮಗ್ರ ಕೃಷಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬೇಕು. ಅರಣ್ಯ ಕೃಷಿ, ಮೇವಿನ ಬೆಳೆ, ಅಲ್ಪಾವಧಿ ಬೆಳೆ, ಧೀರ್ಘಾಕಾಲಿಕ ಬೆಳೆಗಳು ಹೀಗೆ ವಿವಿಧ ಹಂತಗಳಲ್ಲಿ ಆದಾಯ ಕೊಡುವ ಬೆಳೆಗಳನ್ನು ಬೆಳೆಯಬಹುದು.

 

ಸಮಗ್ರ ಕೃಷಿಯಲ್ಲಿ ಒಂದು ಪ್ರಮುಖ ಭಾಗ ಉಪಕಸುಬು. ಉಪಕಸುಬು ಎಂದರೆ ಕೃಷಿ ಬೆಳೆಯ ಜತೆ ಹಸು ಸಾಕಾಣಿಕೆ, ಎಮ್ಮೆ, ಮೇಕೆ, ಕುರಿ, ಕೋಳಿ ಸಾಕಾಣಿಕೆ ಇತ್ಯಾದಿ ಪ್ರಾಣಿ-ಪಕ್ಷಿಗಳನ್ನು ಸಾಕುವುದು. ಕೃಷಿಯಲ್ಲಿ ಏನೂ ವ್ಯರ್ಥವಾಗಬಾರದು ಎಂಬುದು ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರ ನಿಲುವು. ಬೆಳೆ ಬೆಳೆದು ಕಟಾವಾದ ಮೇಲೆ ಮಿಕ್ಕುವ ಹುಲ್ಲು, ಸಸ್ಯಗಳ ಅವಶೇಷಗಳಲ್ಲಿ ಕೆಲವನ್ನು ಮೇವಾಗಿ ಬಳಸಬಹುದು. ಕೃಷಿ ಭೂಮಿಯ ಕೆಲ ಭಾಗದಲ್ಲಿ ಮೇವು ಬೆಳೆಗಳನ್ನು ಬೆಳೆದು ಹಸು, ಎಮ್ಮೆ, ಮೇಕೆ ಇವುಗಳಿಗೆ ಆಹಾರವಾಗಿ ಕೊಡಬಹುದು. ಹಸುಗಳನ್ನು ಸಾಕುವುದರಿಂದ ಹಾಲು, ಮೊಸರು, ತುಪ್ಪ ಮಾತ್ರವಲ್ಲದೇ, ಸಗಣಿ ಮತ್ತು ಗೋಮೂತ್ರವನ್ನು ಕೃಷಿ ಭೂಮಿ ಫಲವತ್ತುಗೊಳಿಸಲು ಉಪಯೋಗಿಸಬಹುದು. ಜೇನು ಸಾಕಾಣಿಕೆಯಿಂದ ಜೇನುತುಪ್ಪ ಸಿಗುವುದಲ್ಲದೇ ಜೇನು ಪರಾಗಸ್ಪರ್ಶ ಮಾಡಿ ಬೆಳೆಗಳಿಗೆ ಸಹಾಯ ಮಾಡುತ್ತವೆ. ಹೀಗೆ ಸಮಗ್ರ ಕೃಷಿಯಿಂದ ಒಂದಕ್ಕೊಂದು ಸಹಾಯವಾಗುತ್ತವೆ.

 

       ಸಮಗ್ರ ಕೃಷಿಯಲ್ಲಿ ರೈತರು ನಿರಂತರವಾಗಿ ಆದಾಯ ಗಳಿಸಬಹುದು. ಇದರಿಂದ ಆರ್ಥಿಕವಾಗಿ ಸಬಲರಾಗಬಹುದು. ಕೃಷಿಯಲ್ಲಿ ಆರ್ಥಿಕ ಸಬಲತೆಗಾಗಿ ವಿವಿಧ ರೀತಿಯ ಬೆಳೆಗಳ ಜೊತೆ ಉಪಕಸುಬು ತುಂಬಾ ಮುಖ್ಯ. ಉಪಕಸುಬುಗಳನ್ನು ಹೇಗೆ ಮಾಡುವುದು? ಲಾಭ ಏನು? ಇವೆಲ್ಲವನ್ನು ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=jEYS6K4OrNs

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #integratedfarming  #organicfarming  #organiccrops  #sustainablefarming  #highyield  #healthycrop  #soilhealth  #biofertilizers  #lowinvestment  #alliedsectors  #dairyfarming  #goat  #buffalo  #honeybeefarming  



Blog




Home    |   About Us    |   Contact    |   
microbi.tv | Powered by Ocat Online Catalog - Web Promotion Service in India | Member of Ocat Platform