ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ನಾವು ಆರಿಸುವ ಬೀಜ ಮತ್ತು ಅದರ ಆರೋಗ್ಯ ತುಂಬಾ ಮುಖ್ಯ. ಬೀಜಗಳಿಗೆ ರಕ್ಷಕ ಎನಿಸಿಕೊಳ್ಳುವ ಬೀಜೋಪಚಾರ ಮಾಡುವುದರಿಂದ ಬೀಜಗಳ ಮೊಳಕೆ ಪ್ರಮಾಣ ಹೆಚ್ಚಿಸಬಹುದು. ಸಾವಯವ ಪದ್ಧತಿಯಲ್ಲಿ ಬೀಜೋಪಚಾರ ಮಾಡುವುದರಿಂದ ಬಿಳಿಬೇರುಗಳ ಬೆಳವಣಿಗೆ ಉತ್ತಮವಾಗುತ್ತದೆ. ರೋಗಬಾಧೆಯ ವಿರುದ್ಧ ರಕ್ಷಣೆ ನೀಡಿ, ಸಸಿಗಳಿಗೆ ಪೋಷಕಾಂಶ ದೊರೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಹಾವೇರಿ ಜಿಲ್ಲೆ ಮತ್ತು ತಾಲ್ಲೂಕಿನ ಕರ್ಜಿಗಿ ಗ್ರಾಮದ ರೈತ ನಾಗಪ್ಪ ನರ್ಸರಿಯೊಂದರ ಮಾಲೀಕರು ಕೂಡ. ಟೊಮ್ಯಾಟೋ, ಎಲೆಕೋಸು, ಬದನೆ, ಮೆಣಸಿನಕಾಯಿ ಹೀಗೆ ನಾನಾ ರೀತಿಯ ಸಸಿಗಳನ್ನು ಬೆಳೆಯುತ್ತಾರೆ. ಈ ಬಾರಿ ಡಾ.ಸಾಯಿಲ್ ಬೀಜೋಪಚಾರ್ ಬಳಸಿ ಬಿತ್ತನೆ ಮಾಡಿದ್ದಾರೆ. ಬೀಜೋಪಚಾರ ಮಾಡಿದ ಬೀಜಗಳ ಮೊಳಕೆ ಪ್ರಮಾಣ ಉತ್ತಮವಾಗಿದ್ದು, ಸಸಿಗಳ ಆರೋಗ್ಯ ಕೂಡ ಚೆನ್ನಾಗಿದೆ. ಡಾ.ಸಾಯಿಲ್ ಬೀಜೋಪಚಾರ್ ಬಳಸುವುದರಿಂದ ಖರ್ಚು ಕಡಿಮೆಯಾಗಿದೆ ಎಂಬುದು ನಾಗಪ್ಪರವರ ಅಭಿಪ್ರಾಯ. ಬೀಜೋಪಚಾರ ಮಾಡುವುದರಿಂದ ಎಲ್ಲಾ ಬೀಜಗಳ ಮೊಳಕೆ ಒಂದೇ ಪ್ರಮಾಣದಲ್ಲಿ ಆಗುತ್ತದೆ ಮತ್ತು ಬೇರುಗಳ ಬೆಳವಣಿಗೆ ಉತ್ತಮವಾಗಿದೆ ಎನ್ನುತ್ತಾರೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ.
ಕಡಿಮೆ ಬೀಜಗಳಲ್ಲಿ ಆರೋಗ್ಯಕರ ಬೆಳೆ ತೆಗೆಯಲು ಡಾ.ಸಾಯಿಲ್ ಬೀಜೋಪಚಾರ್ ಸಹಾಯ ಮಾಡುತ್ತದೆ. ಇದು ರೈತರ ಜೀವನಾಡಿ ಎಂದು ನರ್ಸರಿ ಮಾಲೀಕ ನಾಗಪ್ಪ ಹೇಳುತ್ತಾರೆ. ರಾಸಾಯನಿಕ ಬಳಸಿ ಬೀಜೋಪಚಾರ ಮಾಡಿದ್ದರೂ ಕಾಣದ ಯಶಸ್ಸು ಸಾವಯವ ಬೀಜೋಪಚಾರದಲ್ಲಿ ಕಂಡಿದ್ದಾರೆ. ಮೊದಲ ಬಾರಿ ನರ್ಸರಿ ಮಾಡಿದಾಗ 20 ಸಾವಿರ ಕೇವಲ ರಾಸಾಯನಿಕ್ಕಾಗಿ ಖರ್ಚು ಮಾಡಿದ್ದರು. ಆದರೂ ಯಶಸ್ಸು ಸಿಗಲಿಲ್ಲ. ಈಗ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಬಳಕೆಯಿಂದ ರೈತರಿಗೆ ಒಳ್ಳೆ ಸಸಿಗಳನ್ನು ಕೊಡುತ್ತಿದ್ದೇನೆ ಎಂಬ ತೃಪ್ತಿಭಾವದಲ್ಲಿ ಇದ್ದಾರೆ.
ರಾಸಾಯನಿಕಗಳನ್ನು ಬಿಟ್ಟು ಸಾವಯವ ಪದ್ಧತಿ ಅಳವಡಿಸಿಕೊಳ್ಳಿ. ಭೂಮಿ ಹಾಳು ಮಾಡದೆ ಮುಂದಿನ ಪೀಳಿಗೆಗೆ ಒಳ್ಳೆಯ ಭೂಮಿ ಬಿಟ್ಟು ಹೋಗೋಣ ಎಂದು ರೈತರಿಗೆ ಸಂದೇಶ ನೀಡುತ್ತಾರೆ ನಾಗಪ್ಪ. ಮಣ್ಣು ಸಕಲ ಸಂಪತ್ತುಗಳ ಮೂಲ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ.
ನಾಗಪ್ಪ ಅವರ ಸಂದರ್ಶನದ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=QmgwYF2FxhU&list=PLuN9VcGQAtK5U8jJmWQLPHWzEAtlcfxgM&index=5
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
► ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de...
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #integratedfarming #organicfarming #organiccrops #sustainablefarming #highyield #healthycrop #soilhealth #biofertilizers #lowinvestment #tomato #organictomato
Blog