ಕರ್ನಾಟಕದ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು ಈಗ ವಿದೇಶಗಳಲ್ಲೂ ಸಾವಯವ ಕಂಪನ್ನು ಪಸರಿಸುತ್ತಿದ್ದಾರೆ. ರಾಜ್ಯದಾದ್ಯಂತ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಮುಖಾಂತರ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ಮಾರ್ಗ ತೋರಿದ ಡಾ.ಕೆ.ಆರ್.ಹುಲ್ಲುನಾಚೆಗೌಡರು, ಈಗ ಕೀನ್ಯಾದಲ್ಲಿನ ತೋಟವೊಂದಕ್ಕೆ ಭೇಟಿ ನೀಡಿ, ಅಲ್ಲಿರುವ ಮಣ್ಣು, ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೀನ್ಯಾದಲ್ಲಿ ಕೃಷಿ ಉದ್ಯಮಿಯಾಗಿರುವ ವಿಜಯಪುರ ಮೂಲದ ಮಲ್ಲಿಕಾರ್ಜುನ್ ಕೋರಿಯವರ ಜತೆ ಜಮೀನಿಗೆ ಭೇಟಿ ನೀಡಿದ್ದ ಡಾ.ಕೆ.ಆರ್.ಹುಲ್ಲುನಾಚೆಗೌಡರು ಅಲ್ಲಿನ ಮಣ್ಣಿನ ಗುಣಧರ್ಮಗಳ ಪರೀಕ್ಷೆ ಮಾಡಿದರು. ಮೌಂಟ್ ಕೀನ್ಯಾದ 180 ಎಕರೆಯ ಈ ಜಮೀನಿನಲ್ಲಿ ಮಣ್ಣು ಗಟ್ಟಿಯಾಗಿ, ಎರೆಹುಳುಗಳ ಸುಳಿವೇ ಇಲ್ಲವಾಗಿದೆ. ಕಾರಣ ಅಲ್ಲಿನ ರಾಸಾಯನಿಕ ಕೃಷಿ ಪದ್ಧತಿ. ರಾಸಾಯನಿಕಗಳನ್ನು ಬಳಸದೇ ಕೃಷಿಯೇ ಇಲ್ಲ ಎಂಬ ಮಟ್ಟಿಗೆ ಅಲ್ಲಿಯವರ ನಂಬಿಕೆಯಾಗಿದೆ. ಕೀನ್ಯಾದ ಈ ಜಮೀನಿನಲ್ಲಿ ಭಾರತೀಯ ಕರೆನ್ಸಿಯ ಪ್ರಕಾರ ಎಕರೆಗೆ ಸುಮಾರು 30 ರಿಂದ 40 ಸಾವಿರ ರೂಗಳ ಖರ್ಚು ಮಾಡಿ, ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆ ಬೆಳೆಯುತ್ತಿದ್ದಾರೆ.
ಕೀನ್ಯಾದ ಎಷ್ಟೋ ರೈತರು, ಸಾವಿರಾರು ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಇತರ ದೇಶಗಳಿಗೆ ರಫ್ತು ಮಾಡಲು ಇಲ್ಲಿ ಜಮೀನು ಭೋಗ್ಯಕ್ಕೆ ತೆಗೆದುಕೊಂಡು ಸಾವಿರಾರು ಎಕರೆ ಭೂಮಿಯಲ್ಲಿ ಖಾಸಗಿ ಕಂಪನಿಗಳ ನೇತೃತ್ವದಲ್ಲಿ ಕೃಷಿ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಇಲ್ಲಿ ಕೃಷಿ ಮಾಡಲಾಗುತ್ತಿದೆ. ಆಲೂಗಡ್ಡೆ, ಫ್ರೆಂಚ್ ಬೀನ್ಸ್, ಕೋಸು, ಬ್ರೊಕೋಲಿ ಹೀಗೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ರಫ್ತು ಮಾಡುತ್ತಿದ್ದಾರೆ. ಇಲ್ಲಿನ ಮ್ಯಾನೇಜರ್ ಮಾತನಾಡಿ ಪ್ರಕೃತಿ ಸ್ನೇಹಿಯಾದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಸಂತೋಷದಿಂದ ಬಳಸುತ್ತೇವೆ ಎಂದು ಹೇಳಿದರು. ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಬಳಕೆಯಿಂದ ಖರ್ಚು ಕಡಿಮೆಯಾಗಿ ಉತ್ಪಾದನೆ ಹೆಚ್ಚುವುದಾದರೆ ನಮಗೆ ಖಂಡಿತ ಒಳ್ಳೆಯದು ಎಂದು ಉತ್ಸುಕರಾಗಿದ್ದಾರೆ.
ಕರ್ನಾಟಕ ಮೂಲದ ಡಾ.ಸಾಯಿಲ್ ಜೈವಿಕ ಗೊಬ್ಬರಗಳು ಕೀನ್ಯಾ ದೇಶದಲ್ಲಿ ಕೃಷಿಕರ ಉತ್ಪಾದನೆ ಹೆಚ್ಚಿಸಲು ಅಣಿಯಾಗಿರುವುದು ನಮ್ಮ ಹೆಮ್ಮೆಯೇ ಸರಿ. ಆ ದೇಶದಲ್ಲೂ ಡಾ.ಸಾಯಿಲ್ ವಿಜೃಂಭಿಸಲಿ ಎಂದು ಆಶಿಸೋಣ.
ಕೀನ್ಯಾ ಸಂದರ್ಶನ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=B11awIWS3tI&t=119s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
► ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de...
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #integratedfarming #organicfarming #organiccrops #sustainablefarming #highyield #healthycrop #soilhealth #biofertilizers #lowinvestment #kenya #export #kenyadiaries
Blog