Blog

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಹೂ ಗುಲಾಬಿ. ವಿವಿಧ ಬಣ್ಣಗಳ ಗುಲಾಬಿಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಸುಗಂಧ ದ್ರವ್ಯ ತಯಾರಿಕೆ, ಖಾದ್ಯ, ಅಲಂಕಾರ ಹೀಗೆ ನಾನಾ ರೀತಿಯಲ್ಲಿ ಬಳಸಲ್ಪಡುತ್ತದೆ. ಇಂಥಾ ವಿಶೇಷತೆ ಹೊಂದಿರುವ ಗುಲಾಬಿಯನ್ನು ಬೆಳೆಯುವುದರಿಂದ ಉತ್ತಮ ಲಾಭಗಳಿಸಬಹುದು. ಆದರೆ ಇಲ್ಲೊಂದು ಗುಲಾಬಿ ತೋಟದಲ್ಲಿ ಮಾಡಿದ ತಪ್ಪುಗಳಿಂದ ಇಡೀ ತೋಟವೇ ಹಾಳಾಗಿದೆ. ಈ ರೈತರು ಮಾಡಿರುವ ತಪ್ಪೇನು? ಇದಕ್ಕೆ ಮೈಕ್ರೋಬಿ ತಂಡ ನೀಡಿದ ಸಲಹೆಗಳೇನು? ನೋಡೋಣ ಬನ್ನಿ

 

       ಬೆಂಗಳೂರಿನ ಹೊಸಕೋಟೆ ತಾಲ್ಲೂಕಿನ  ರೈತರಾದ ರೀಫ್ ಮತ್ತು ಮಂಜುನಾಥ್ ಅವರ ಗುಲಾಬಿ ತೋಟ ನಿರೀಕ್ಷಿತ ಇಳುವರಿ ಇಲ್ಲದೇ ಹಾಳಾಗಿದೆ. ಮಣ್ಣಿನ ಗುಣಗಳು ಕ್ಷೀಣಿಸಿವೆ ಎಂಬುದನ್ನು ಮೈಕ್ರೋಬಿ ತಂಡ ತೋಟವನ್ನು ಪರಿಶೀಲಿಸಿ ರೈತರಿಗೆ ಅರ್ಥ ಮಾಡಿಸಿತು. ಸಕಲ ಸಂಪತ್ತಿನ ಮೂಲ ಮಣ್ಣು. ಮಣ್ಣು ಫಲವತ್ತಾದರೆ ಎಲ್ಲಾ ಬೆಳೆಗಳನ್ನೂ ಉತ್ತಮವಾಗಿ ಬೆಳೆಯಬಹುದು ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ತೋಟವನ್ನು ಪರಿಶೀಲಿಸಿದ ರೈತರು ಮತ್ತು ತಂಡ ಅಲ್ಲಿನ ಸಮಸ್ಯೆಗಳನ್ನು ಕಂಡು ಹಿಡಿಯಿತು. ಈ ತೋಟದಲ್ಲಿ ಮಣ್ಣು ಗಟ್ಟಿಯಾಗಿದೆ ಮತ್ತು ಹೆಚ್ಚು ನೀರಿದ್ದ ಕಾರಣ ಉಂಡೆ ಕಟ್ಟುತ್ತಿದೆ.

 

ಇದರ ಪರಿಣಾಮದಿಂದಲೇ ಅಲ್ಲಿ ಬೆಳೆಯುವ ಬೆಳೆಗಳು ರೋಗಗ್ರಸ್ಥವಾಗಿವೆ. ಗಿಡಗಳ ಬೇರುಗಳು ಕೊಳೆತು ಕಪ್ಪಾಗಿವೆ. ಇದಕ್ಕೆಲ್ಲಾ ಕಾರಣ ರಾಸಾಯನಿಕಗಳ ಬಳಕೆ. ರಾಸಾಯನಿಕಗಳ ಬಳಕೆಯಿಂದಾಗಿ ಮಣ್ಣಿನ ಉಪಕಾರಿ ಸೂಕ್ಷ್ಮಾಣು ಜೀವಿಗಳು ನಾಶಗೊಂಡು ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಅಪಕಾರಿ ಸೂಕ್ಷ್ಮಾಣು ಜೀವಿಗಳಿಗೆ ಅನುಕೂಲವಾಗುವ ವಾತಾವರಣ ಸೃಷ್ಠಿಯಾಗಿದೆ. ಹೀಗಾಗಿ ರೋಗಗಳು ಗುಲಾಬಿ ತೋಟಕ್ಕೆ ಮುತ್ತಿಗೆ ಹಾಕಿವೆ. ಇದಕ್ಕೆ ಪರಿಹಾರ ಸಾವಯವ ಕೃಷಿ ಪದ್ಧತಿ. ಸಾವಯವ ಕೃಷಿ ಮಾಡುವುದರಿಂದ ಮಣ್ಣು ಫಲವತ್ತಾಗುತ್ತದೆ ಮತ್ತು ಬೆಳೆಗಳು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳತ್ತವೆ. ರೋಗರಹಿತ ಉತ್ತಮ ಗುಣಮಟ್ಟದ ಗುಲಾಬಿ ಬೆಳೆಯಲು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂಬ ನಿಲುವಿಗೆ ಈ ರೈತರು ಬಂದಿದ್ದಾರೆ.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=ZtFr5zYlzLc

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de... 

 

ಬರಹ: ರವಿಕುಮಾರ್

 

#kannadablog  #drsoil  #biofertilzer  #microbiagrotech  #agricultureblog  #agricultureinkannada  #integratedfarming  #organicfarming  #organicrops  #sustainablefarming  #highyield  #healthycrop  #soilhealth  #soilfertility  #biofertilizers  #lowinvestment  #rose  #roseplantation  



Blog




Home    |   About Us    |   Contact    |   
microbi.tv | Powered by Ocat Online Catalog - Web Promotion Service in India | Member of Ocat Platform