Blog

ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ದೇವನಹಳ್ಳಿಯ ರೈತ ಮಧು ಅವರು ಡಾ.ಸಾಯಿಲ್ ಸ್ಲರಿ ಬಳಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಪೊಟ್ಯಾಶ್ ಮತ್ತು ಫಾಸ್ಫರಸ್ ಎನ್ರಿಚರ್ ಸ್ಲರಿಗಳನ್ನು ಬಳಸಿ ಬಾಳೆ, ಸೌತೆಕಾಯಿ ಹೀಗೆ ಇತರ ಬೆಳೆಗಳಿಗೆ ಬಳಸುತ್ತಾ ಬಂದಿದ್ದಾರೆ.

 

ಡಾ.ಸಾಯಿಲ್ ಸ್ಲರಿ ಎನ್ರಿಚರ್ ಕೊಡುವುದರಿಂದ ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುವ ಸೂಕ್ಷ್ಮಜೀವಿಗಳು ಹೆಚ್ಚುತ್ತವೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ನೈಸರ್ಗಿಕವಾಗಿ ಪೋಷಕಾಂಶ ಒದಗಿಸಲು ಸಹಾಯ ಮಾಡುತ್ತದೆ. ರೈತ ಮಧು ಸ್ಲರಿ ಕೊಡಲು ತಮ್ಮದೇ ಶೈಲಿಯ ತಂತ್ರ ಬಳಸಿ ಡ್ರಿಪ್ ಮುಖಾಂತರ ಬೆಳೆಗಳಿಗೆ ನೀಡುತ್ತಾರೆ.

 

ಸ್ಲರಿ ತಯಾರಿಸುವ ವಿಧಾನ

ಬೇಕಾಗುವ ವಸ್ತುಗಳು

- 1 ಲೀ ಡಾ.ಸಾಯಿಲ್ ಸ್ಲರಿ ಎನ್ರಿಚರ್

- 50 ಕೆ.ಜಿ ಸಗಣಿ

- 5 ಕೆ.ಜಿ ಕಡ್ಲೆಕಾಯಿ(ಶೇಂಗಾ) ಹಿಂಡಿ

ಇವೆಲ್ಲವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ, 5 ದಿನಗಳವರೆಗೆ ಬಿಡಬೇಕು.

6ನೇ ದಿನದಿಂದ ಬೆಳೆಗಳಿಗೆ ಡ್ರಿಪ್ ಮುಖಾಂತರ ಅಥವಾ ಇನ್ನಿತರ ವಿಧಾನದಲ್ಲಿ ಬೆಳೆಗಳಿಗೆ ಕೊಡಬೇಕು.

 

ಸ್ಲರಿಯ ಉಪಯೋಗಗಳು

- ಇದರಲ್ಲಿರುವ PSB ಮತ್ತು PMB ಬ್ಯಾಕ್ಟೀರಿಯಾಗಳು ಮಣ್ಣಿನಲ್ಲಿರುವ ಲಭ್ಯವಲ್ಲದ ಪೋಷಕಾಂಶವನ್ನು ಲಭ್ಯರೂಪಕ್ಕೆ ಪರಿವರ್ತಿಸಿ ಬೆಳೆಗೆ ಒದಗಿಸುತ್ತದೆ.

ಪೊಟ್ಯಾಶ್ ಮತ್ತು ಫಾಸ್ಫರಸ್ ಗಾಗಿ ಕೊಡುವ DAP ಮತ್ತು MOPಗೆ ಬೇಕಾದ ಖರ್ಚು ಉಳಿತಾಯ.

- ರಾಸಾಯನಿಕ ಬಳಸದೇ ಮಣ್ಣನ್ನು ಮಾಲಿನ್ಯತೆಯಿಂದ ರಕ್ಷಿಸಿ, ಫಲವತ್ತು ಮಾಡಬಹುದು.

 

ಇವರು ಸ್ಲರಿ ಕೊಡಲು ಬಳಸಿರುವ ತಂತ್ರವು ಕೆಲಸ ಕಡಿಮೆ ಮಾಡುತ್ತದೆ ಮತ್ತು ಪರಿಣಾಮಕಾರಿಯಾಗಿದೆ. ಇವರು ಅಂತರ ಬೆಳೆಯನ್ನೂ ಬೆಳೆದು ಆದಾಯ ಹೆಚ್ಚಿಸಿಕೊಂಡಿದ್ದಾರೆ. ಈ ಗಿಡಗಳನ್ನು ಕಟಾವು ನಂತರ ಹಸಿರು ಗೊಬ್ಬರವಾಗಿ ಬಳಸಬಹುದು.

 

ಪೂರ್ತಿ ಮಾಹಿತಿಗಾಗಿ ಮತ್ತು ರೈತರು ಸ್ಲರಿ ಕೊಡಲು ಬಳಸುವ ತಂತ್ರಜ್ಞಾನವನ್ನು ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=F_QCEk1mYYw&list=PLuN9VcGQAtK6PIM0r-95GXEbgMY1NptMX&index=9

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de... 

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #integratedfarming  #organicfarming  #organiccrops  #sustainablefarming  #highyield  #healthycrop  #soilhealth  #biofertilizers  #lowinvestment  #slurry  #slurryenricher  #pmb  #psb  



Blog




Home    |   About Us    |   Contact
microbi.tv | Website Promotion report | Ocat™ Web Promotion Services in India | Powered by Ocat