Blog

       ಆಹಾರ ಭದ್ರತೆ ಹೆಚ್ಚಿಸಲು 1960ರ ದಶಕದಲ್ಲಿ ಬಂದ ಹಸಿರು ಕ್ರಾಂತಿಯಿಂದ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಯಿತು. ಆದರೆ ಇಂದು ರಾಸಾಯನಿಕಗಳ ಬಳಕೆಯಿಂದ ಮಣ್ಣು ಹಾಳಾಗುತ್ತಿರುವುದಲ್ಲದೇ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಹಾಗಾಗಿ ಕೃಷಿ ಇಂದು ಮಾಲಿನ್ಯಕ್ಕೆ ಕಾರಣವಾಗಿರುವ ಬಹುದೊಡ್ಡ ಕಾರಣಗಳಲ್ಲಿ ಒಂದಾಗಿದೆ.

 

          ರಾಸಾಯನಿಕಗಳು ಮಣ್ಣು, ನೀರು ಮತ್ತು ಗಾಳಿಯನ್ನು ಮಲಿನ ಮಾಡುತ್ತಿವೆ. ರಾಸಾಯನಿಕ ಬಳಕೆಯಿಂದ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಮೈಕ್ರೋಬಿ ಸಂಪನ್ಮೂಲ ವ್ಯಕ್ತಿಯಾದ ಶ್ರೀಕಾಂತ್ ವರು ರೈತರಿಗೆ ಅರಿವು ಮೂಡಿಸಲು ಕಾರ್ಯಕ್ರಮ ಮಾಡಿದ್ದರು. ತೋಟಗಳಿಗೆ ಭೇಟಿ ನೀಡಿ ಪ್ರಾಯೋಗಿಕವಾಗಿ ಅಲ್ಲಾಗಿರುವ ಸಮಸ್ಯೆಗಳಿಗೆ ಕಾರಣ ತಿಳಿಸಿದರು.

 

       ರೈತರು ಬಳಸುವ ರಾಸಾಯನಿಕ ಗೊಬ್ಬರಗಳಲ್ಲಿ ಗಿಡಗಳು ಕೇವಲ 40% ಪೋಷಕಾಂಶಗಳು ಉಪಯೋಗಿಸಿಕೊಳ್ಳುತ್ತವೆ, ಮಿಕ್ಕ 60% ಖನಿಜಕೀರಣಗೊಂಡು ಮಾಲಿನ್ಯಕ್ಕೆ ಕಾರಣವಾಗುತ್ತವೆ. ಇವು ನೀರು, ಗಾಳಿಗೆ ಸೇರಿ, ಇದರ ಮುಖಾಂತರ ಪ್ರಾಣಿ-ಪಕ್ಷಿಗಳು, ಮಾನವರ ದೇಹ ಸೇರಿ ಎಂದೂ ಕಾಣದ ರೋಗ-ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಇವೆಲ್ಲಾ ವಿಷಯಗಳ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

 

ಫಲವತ್ತತೆ ಹೆಚ್ಚಿಸಲು ಮಣ್ಣಿನ ಗುಣಧರ್ಮಗಳನ್ನು ಅರ್ಥಮಾಡಿಕೊಂಡು, ಕಾಪಾಡಿಕೊಳ್ಳಬೇಕು. ನಂತರ ರೈತರ ತೋಟದಲ್ಲಿ ಮಣ್ಣಿನ ಗುಣಗಳ ಪರೀಕ್ಷೆ ಮಾಡಲಾಯಿತು. ಮಣ್ಣು ಗಟ್ಟಿಗೊಂಡು, ನೀರು ಇಂಗುವ ಸಾಮರ್ಥ್ಯ ಕಡಿಮೆಯಾಗಿರುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಡಲಾಯಿತು.

 

ಫಲವತ್ತಾದ ಮಣ್ಣು ಬೇರುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೇರುಗಳು ಉತ್ತಮವಾಗಿ ಬೆಳೆದರೆ ಮಾತ್ರ ಗಿಡ-ಮರಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ಕೃಷಿ ಭೂಮಿಯಲ್ಲಿ ಕಳೆನಾಶಕ ಬಳಸುವುದರಿಂದ ಕಳೆಮಾತ್ರವಲ್ಲದೇ ಬೆಳೆಗಳನ್ನೂ ನಾಶಮಾಡುತ್ತದೆ. ಇದಲ್ಲದೇ ಮಣ್ಣಿನ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಕೂಡ ಕೊಲ್ಲುತ್ತದೆ ಎಂದು ರೈತರಿಗೆ ವಿವರಿಸಿದರು. ಇದರ ಜೊತೆ ಹಸಿರೆಲೆ ಗೊಬ್ಬರದ ಬಗ್ಗೆಯೂ ಮೈಕ್ರೋಬಿ ತಂಡ ತಿಳಿಸಿತು.

 

ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=3245q-G07kM

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 ಬರಹ: ರವಿಕುಮಾರ್

 

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing