About Us

ಭಾರತ ಕೃಷಿ ಪ್ರಧಾನವಾದ ದೇಶ. 2011ರ ಜನಗಣತಿಯ ಪ್ರಕಾರ 54.6% ಜನಸಂಖ್ಯೆಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ದೇಶದ GDPಯ ಒಂದು ಪ್ರಮುಖ ಭಾಗ ಕೃಷಿ. ದೇಶದ ಆರ್ಥಿಕತೆ ಬೆಳೆಯಬೇಕಾದರೆ ರೈತರು ಆರ್ಥಿಕವಾಗಿ ಪ್ರಬಲರಾಗಬೇಕು.

 

ಆದರೆ ದೇಶದ ರೈತರು ಸರಿಯಾದ ಆದಾಯ ಇಲ್ಲದೇ ನಷ್ಟದ ಸುಳಿಯಲ್ಲಿದ್ದಾರೆ. ಇದಕ್ಕೆ ಕಾರಣ ಕೃಷಿಯ ಖರ್ಚು ಅಧಿಕವಾಗಿರುವುದು, ಬೆಳೆದ ಬೆಳೆಗೆ ಬೆಲೆ ಸಿಗದಿರುವುದು. ಬೆಲೆ ನಿಗದಿಪಡಿಸುವುದು ರೈತರ ಕೈಯಲ್ಲಿ ಇಲ್ಲದಿದ್ದರೂ ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿ, ಅನಿರೀಕ್ಷಿತ ಬೆಲೆಯನ್ನು ಸರಿದೂಗಿಸಲು ಕೃಷಿ ತಂತ್ರಜ್ಞಾನಗಳು, ನಿರ್ವಹಣೆ ತಂತ್ರಗಳನ್ನು ಅಳವಡಿಸಿಕೊಂಡು ಲಾಭಗಳಿಸಬೇಕು. ಇದರ ಅರಿವನ್ನು ನೀಡಲು ಮೈಕ್ರೋಬಿ ಆಗ್ರೋಟೆಕ್ ಮತ್ತು ಮೈಕ್ರೋಬಿ ಫೌಂಡೇಶನ್ ಸಹಯೋಗದಲ್ಲಿ ರಾಜ್ಯದಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ರೈತರಿಗೆ ಕೃಷಿಶಿಕ್ಷಣ ನೀಡಲಾಗುತ್ತಿದೆ.

 

       ರಾಜ್ಯದಾದ್ಯಂತ ಕೃಷಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ನಡೆಸಿ ಮೈಕ್ರೋಬಿ ತಂಡ ರೈತರಿಗೆ ಉಚಿತ ಕೃಷಿ ಶಿಕ್ಷಣ ನೀಡುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಕೃಷಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದಲ್ಲಿ ಜಿಲ್ಲಾ ಸಂಚಾಲಕರಾದ ಜೋಗಿಗೌಡರವರು ರೈತರ ಜಮೀನಿಗೆ ಭೇಟಿ ನೀಡಿ ಮಣ್ಣನ್ನು ಫಲವತ್ತು ಮಾಡುವ ವಿಧಾನಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಎರೆಹುಳು ಮತ್ತು ಸೂಕ್ಷ್ಮಜೀವಿಗಳ ಮಹತ್ವ ತಿಳಿಸಿದರು. ಭೂಮಿಯಲ್ಲಿ ಸಾರಜನಕ ಸ್ಥಿರೀಕರಣಗೊಳಿಸುವ ಸೂಕ್ಷ್ಮಜೀವಿಗಳು ಮತ್ತು ಅವುಗಳ ಸಂಖ್ಯೆ ಹೆಚ್ಚಿಸಲು ಮಾಡಬೇಕಾದ ವಿಧಾನ, ಬೆಳೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿದರು. ಕೃಷಿಯಲ್ಲಿ ಹೆಚ್ಚು ಆದಾಯಗಳಿಸಲು ಇರುವ ಮಾರ್ಗವೆಂದರೆ ಅದು ಸಾವಯವ ಕೃಷಿ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಮಣ್ಣು ಫಲವತ್ತಾಗಿ ಖರ್ಚು ಕಡಿಮೆಯಾಗುವುದನ್ನು ಅರ್ಥ ಮಾಡಿಸಿದರು. ರೈತರು ಮಣ್ಣಿನ ಮಹತ್ವ ತಿಳಿದು, ಸಮಗ್ರ ಕೃಷಿ ಮಾಡಿದರೆ ಆರ್ಥಿಕವಾಗಿ ಸದೃಢವಾಗಬಹುದು.

 

ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=-txW7J0Xyvw

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de... 

 

ಬರಹ: ರವಿಕುಮಾರ್

 

#kannadablog  #drsoil  #biofertilzer  #microbiagrotech  #agricultureblog  #agricultureinkannada  #integratedfarming  #organicfarming  #organicrops  #sustainablefarming  #highyield  #healthycrop  #soilhealth  #soilfertility  #biofertilizers  #lowinvestment  #skilldevelopment  #mannujivisali  



About Us




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing