ಬೇವಿನ ಹಿಂಡಿ ಕೃಷಿಕರಿಗೆ ವರದಾನ. ಕೃಷಿ ಭೂಮಿಗೆ ಬೇವಿನ ಹಿಂಡಿ ನೀಡುವುದರಿಂದ ಸಾಕಷ್ಟು ಲಾಭಗಳು ದೊರೆಯುತ್ತವೆ. ಕೃಷಿ ವಿಜ್ಞಾನಿಗಳು ಬೇವಿನ ಹಿಂಡಿಯನ್ನು ಬಳಸುವಂತೆ ಹೆಚ್ಚಾಗಿ ರೈತರಿಗೆ ಶಿಫಾರಸ್ಸು ಮಾಡ್ತಾರೆ. ಕಾರಣ?
ಸಾವಯವ ಕೃಷಿ ಪದ್ಧತಿಯಲ್ಲಿ ಕೃಷಿಕರು ಜೈವಿಕ ಗೊಬ್ಬರಗಳನ್ನು ಬಳಸಿ, ಬೇವಿನ ಹಿಂಡಿಯನ್ನು ಬಳಸುವುದರಿಂದ ಇಳುವರಿಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಬೇವಿನ ಹಿಂಡಿಗೆ ಮಣ್ಣಿನಲ್ಲಿರುವ ರೋಗಾಣುಗಳನ್ನು ಹಾಗೂ ಅಪಕಾರಿ ಕೀಟಗಳನ್ನು ಕೊಲ್ಲುವ ಶಕ್ತಿ ಇದೆ. ಜೈವಿಕ ಕೀಟನಾಶಕವಾಗಿ ಕೆಲಸ ಮಾಡುವುದರ ಜತೆಗೆ ಜೈವಿಕ ಗೊಬ್ಬರವಾಗಿಯೂ ಬೆಳೆಗಳಿಗೆ ಸಮಗ್ರ ಪೋಷಕಾಂಶ ಒದಗಿಸುತ್ತದೆ.
ಬೇವಿನ ಹಿಂಡಿಯಲ್ಲಿ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ ಗಳು,ದ್ವಿತೀಯ ಪೋಷಕಾಂಶಗಳಾದ ಮೆಗ್ನೀಷಿಯಂ, ಸಲ್ಫರ್, ಕಬ್ಬಿಣ, ಜಿಂಕ್, ಕಾಪರ್, ಇತ್ಯಾದಿ ಇರುವುದರಿಂದ ಮಣ್ಣಿನ ಫಲವತ್ತತೆ ಕಾಪಾಡುವುದರ ಜತೆಗೆ ಬೆಳೆಗಳಿಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸುತ್ತದೆ. ಮಣ್ಣಿನ 3 ಗುಣಗಳನ್ನು ಹೆಚ್ಚಿಸಿ, ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಿಸುತ್ತದೆ. ಮಣ್ಣು ಮೃದುವಾಗಿ ಮಣ್ಣಿನಲ್ಲಿ ಗಾಳಿ ಸರಾಗವಾಗಿ ಹರಿದಾಡುವುದರಿಂದ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ವೃದ್ಧಿಯಾಗುತ್ತದೆ.
ಬೇವಿನ ಹಿಂಡಿಯನ್ನು ಆಯ್ಕೆ ಮಾಡಿಕೊಳ್ಳುವಾಗ ರೈತರು ಏನನ್ನು ಪರಿಗಣಿಸಬೇಕು? ಬೇವಿನ ಹಿಂಡಿಯನ್ನು ಹೇಗೆ ಬಳಕೆ ಮಾಡಿದರೆ ಒಳ್ಳೆಯದು ಎಂಬ ಸಮಗ್ರ ಮಾಹಿತಿಯನ್ನು ಮೈಕ್ರೋಬಿ ಟಿವಿಯಲ್ಲಿ ಸಾಯಿಲ್ ಡಾಕ್ಟರ್ ತಿಳಿಸಿಕೊಟ್ಟಿದ್ದಾರೆ. ವೀಡಿಯೋ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=f4bOiYLxbnQ&t=1109s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ವರದಿ: ವನಿತಾ ಪರಸನ್ನವರ್
Blog