ಅಡಿಕೆ ತೋಟದಲ್ಲಿ ರೋಗಗಳು ಕಡಿಮೆಯಾಗಿ ಹೆಚ್ಚು ಇಳುವರಿ ಪಡೆಯಬೇಕು, ಉತ್ತಮ ಆದಾಯ ಗಳಿಸಬೇಕು ಎಂಬುದು ಎಲ್ಲಾ ಅಡಿಕೆ ಬೆಳೆಗಾರರ ಆಶಯ. ಆದರೆ ನಮ್ಮ ರೈತರು ರಾಸಾಯನಿಕಗಳ ಮೊರೆ ಹೋಗಿ ತೋಟಗಳನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ತಾತ್ಕಾಲಿಕ ಇಳುವರಿಗಾಗಿ ಮಣ್ಣನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗದ ಈ ರೈತರು ಇದನ್ನು ಅರಿತುಕೊಂಡು ಸಾವಯವದಲ್ಲೇ ಉತ್ತಮವಾಗಿ ಅಡಿಕೆ ತೋಟ ನಿರ್ವಹಣೆ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಈ ರೈತ, ರಾಸಾಯನಿಕ ಕೃಷಿ ಪದ್ಧತಿಯಿಂದಾಗುವ ಹಾನಿಯನ್ನು ಅರಿತುಕೊಂಡು ತಮ್ಮ 1 ಎಕರೆ ಭೂಮಿಯಲ್ಲಿನ 550 ಅಡಿಕೆ ಮರಗಳನ್ನು ಸಾವಯವ ಪದ್ಧತಿಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಈ ಬಾರಿ ಹೆಚ್ಚು ಮಳೆಯಾಗಿದ್ದು, ರಾಸಾಯನಿಕ ಬಳಕೆ ಮಾಡಿದವರ ತೋಟದಲ್ಲಿ ಹರಳು ಉದುರುವಿಕೆ ಹೆಚ್ಚಾಗಿದೆ. ಶೇ. 90ರಷ್ಟು ತೋಟಗಳಲ್ಲಿ ಹರಳು ಉದುರಿವೆ. ಆದರೆ ಇವರ ಸಾವಯವ ತೋಟದಲ್ಲಿ ಇದು ತುಂಬಾ ಕಡಿಮೆ. ಹಿಂಗಾರವೂ ಕೂಡ ಇತರರ ತೋಟಗಳಲ್ಲಿ ಒಣಗಿವೆ. ಈ ರೈತರ ತೋಟದಲ್ಲಿ ಮೊದಲು 2 ಹಿಂಗಾರ ಬರುತ್ತಿದ್ದವು, ಆದರೆ ಈಗ 5-6 ಹಿಂಗಾರಗಳು ಬರುತ್ತಿವೆ.
ಅತಿ ಹೆಚ್ಚು ಮಳೆಯಾದರೂ ಅಡಿಕೆ ಮರಗಳು ಉತ್ತಮ ಬೆಳವಣಿಗೆ ತೋರಿವೆ. 1 ಎಕರೆಯ ತೋಟದಲ್ಲಿ ಕಳೆದ ಬಾರಿಗಿಂತ ದುಪ್ಪಟ್ಟು ಇಳುವರಿಯ ನಿರೀಕ್ಷೆಯಲ್ಲಿದ್ದು, 30 ಕ್ವಿಂಟಾಲ್ ನಿಂದ 60 ಕ್ವಿಂಟಾಲ್ ನಿರೀಕ್ಷೆ ಮಾಡುತ್ತಿದ್ದಾರೆ. ಇವರು ಯಾವುದೇ ಕಳೆನಾಶಕ ಬಳಸದೆ ವೀಡ್ ಕಟ್ಟರ್ ಬಳಸಿ ಕಳೆ ನಿರ್ವಹಣೆ ಮಾಡುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಪದ್ಧತಿ ಅಳವಡಿಸಿಕೊಂಡ ಮೇಲೆ ತೋಟದಲ್ಲಿ ಎರೆಹುಳುಗಳು ಕಾಣತೊಡಗಿವೆ. ರಾಸಾಯನಿಕ ಕೃಷಿ ಪದ್ಧತಿಯಲ್ಲಿ ಎಂದೂ ಎರೆಹುಳು ನೋಡಿರಲಿಲ್ಲ.
ಸಾವಯವ ಕೃಷಿ ಭವಿಷ್ಯದ ಕೃಷಿ ಎಂದು ನಂಬುವ ಈ ರೈತರು, ಸಾವಯವ ಕೃಷಿ ಪದ್ಧತಿಯಿಂದ ಮಣ್ಣು ಉಳಿಯುವುದು ಮತ್ತು ರೈತರು ಆರ್ಥಿಕವಾಗಿ ಮುಂದುವರೆಯಬಹುದು ಎನ್ನುತ್ತಾರೆ. ಸಾವಯವ ಕೃಷಿಯಿಂದ ಭೂಮಿ ವಿಷಮುಕ್ತವಾಗುತ್ತದೆ. ಜನರಿಗೆ ವಿಷಮುಕ್ತ ಆಹಾರ ಮತ್ತು ಉತ್ತಮ ಆರೋಗ್ಯ ಕೊಡಲು ವಿಷಮುಕ್ತ ಕೃಷಿಯಿಂದ ಮಾತ್ರ ಸಾಧ್ಯ.
https://www.youtube.com/watch?v=yUZL7RAHThg
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ಬರಹ: ರವಿಕುಮಾರ್